POSTMANNEWS

ನೈಜ ಸುದ್ದಿ ನೇರ ಬಿತ್ತರ..

RIPPONPETE | ಗೋಮಾಂಸ ಸಾಗಾಟ – ವಾಹನ ಸಹಿತ ಮೂವರ ಬಂಧನ

RIPPONPETE | ಗೋಮಾಂಸ ಸಾಗಾಟ – ವಾಹನ ಸಹಿತ ಮೂವರ ಬಂಧನ

ರಿಪ್ಪನ್‌ಪೇಟೆ : ಅಕ್ರಮವಾಗಿ ಗೋಮಾಂಸ ಸಾಗಿಸುತಿದ್ದ ಮೂವರು ಆರೋಪಿಗಳನ್ನು ಮಾಲು ಸಮೇತ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ತೀರ್ಥಹಳ್ಳಿ ರಸ್ತೆಯ ಕಣಬಂದೂರು ರಸ್ತೆಯ ಬಳಿ ಪೊಲೀಸ್ ಸಿಬ್ಬಂದಿಗಳು ಗಸ್ತು ತಿರುಗುತಿದ್ದಾಗ ಪ್ಯಾಸೆಂಜರ್ ಆಟೋವೊಂದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಸುಮಾರು 19ಸಾವಿರ ರೂ ಮೌಲ್ಯದ 80 ಕೆ ಜಿ ದನದ ಮಾಂಸವಿರುವುದ ಕಂಡು ಬಂದಿದೆ.

ಮಾಂಸವನ್ನು ಎಲ್ಲಿಂದ ತಂದಿರುವುದಾಗಿ ಆರೋಪಿಗಳನ್ನು  ವಿಚಾರಿಸಿದಾಗ ಗರ್ತಿಕೆರೆ ಬಳಿಯಿಂದ ತಂದಿರುವುದಾಗಿ ಹೇಳಿದ್ದು ಲಾಭದ ಉದ್ದೇಶಕ್ಕಾಗಿ ಮಾರಾಟ ಮಾಡಲು ತಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ಪ್ಯಾಸೆಂಜರ್ ಆಟೋ ಮತ್ತು 80 ಕೆಜಿ ಗೋಮಾಂಸ ಸಹಿತ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗರ್ತಿಕೆರೆಯ ಅಕ್ರಂ (32) , ಭಾಷಾ (30) ಹಾಗೂ ಸಾದಿಕ್ (40) ರನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಪ್ಪನ್‌ಪೇಟೆಯ ಕುರಿ ಮಾಂಸದ ಅಂಗಡಿಗಳಿಗೆ ಈ ಮಾಂಸವನ್ನು ಸಾಗಿಸಲಾಗುತಿತ್ತು ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡುತಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.

About The Author

Leave a Reply

Your email address will not be published. Required fields are marked *