w
Headlines
Home » ಬಡ ವೃದ್ದೆಯ ಖಾತೆಯಲ್ಲಿರುವ ವೃದ್ದಾಪ್ಯ ವೇತನ ನೀಡಲು ತಡೆ ಒಡ್ಡಿದ ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್ ಮ್ಯಾನೇಜರ್ – ಠಾಣೆ ಮೆಟ್ಟಿಲೇರಿದ ಪ್ರಕರಣ

ಬಡ ವೃದ್ದೆಯ ಖಾತೆಯಲ್ಲಿರುವ ವೃದ್ದಾಪ್ಯ ವೇತನ ನೀಡಲು ತಡೆ ಒಡ್ಡಿದ ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್ ಮ್ಯಾನೇಜರ್ – ಠಾಣೆ ಮೆಟ್ಟಿಲೇರಿದ ಪ್ರಕರಣ

GridArt 20240822 030005941.jpg

ಬಡ ವೃದ್ದೆಯ ಖಾತೆಯಲ್ಲಿರುವ ವೃದ್ದಾಪ್ಯ ವೇತನ ನೀಡಲು ತಡೆ ಒಡ್ಡಿದ ಕೆನರಾ ಬ್ಯಾಂಕ್ ಮ್ಯಾನೇಜರ್ – ಠಾಣೆ ಮೆಟ್ಟಿಲೇರಿದ ಪ್ರಕರಣ

ರಿಪ್ಪನ್‌ಪೇಟೆ : ಅಕೌಂಟ್ ನಲ್ಲಿರುವ ವೃದ್ದಾಪ್ಯ ವೇತನವನ್ನು ಪಡೆದುಕೊಳ್ಳಲು 80 ವೃದ್ದೆಯೊಬ್ಬರಿಗೆ ಲೋನ್ ನೆಪ ಹೇಳಿ ಕಳೆದ ಆರೇಳು ತಿಂಗಳುಗಳಿಂದ ಪಟ್ಟಣದ ಕೆನರಾ ಬ್ಯಾಂಕ್ ಮ್ಯಾನೇಜರ್ ತಡೆ ಒಡ್ಡಿರುವ ಘಟನೆ ನಡೆದಿದೆ.ಈ ಬಗ್ಗೆ ಬಡ ವೃದ್ದೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ನಾಡಿನ ಹಿರಿಯ ನಾಗರಿಕರು ತಮ್ಮ ಇಳಿ ವಯಸ್ಸಿನಲ್ಲಿ ಸಂತೋಷದಿಂದ ಇರಲಿ ಎಂಬ ಸದುದ್ದೇಶದಿಂದ ಸರ್ಕಾರ ಮಾಸಾಶನ ನಿಗದಿ ಮಾಡಿ ಅವರ ಜೀವನಕ್ಕೆ ಆಧಾರವಾಗಿದೆ.ಆದರೆ ದೇವರು ಕೊಟ್ಟರು ಪೂಜಾರಿ ಪೂಜಾರಿ ಕೊಡುವುದಿಲ್ಲ ಎನ್ನುವ ಹಾಗೇ ಕೆನರಾ ಬ್ಯಾಂಕ್ ನ ಮ್ಯಾನೇಜರ್ ವೃದ್ದೆಗೆ ಮಾಸಾಶನ ನೀಡಲು ಕಳೆದ ಆರೇಳು ತಿಂಗಳಿನಿಂದ ಅಲೆದಾಡಿಸುತಿದ್ದಾರೆಂಬ ಪ್ರಕರಣ ಬೆಳಕಿಗೆ ಬಂದಿದೆ.

ಹೌದು ಕೆರೆಹಳ್ಳಿ ಹೋಬಳಿಯ ಕಳಸೆ ಗ್ರಾಮದ ದೇವಮ್ಮ ಎಂಬ 80 ರ ವೃದ್ದೆಯ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಎನ್ನುವಂತಾಗಿದೆ. ಈ ಹಣ ಬಂದ್ರೆ ತುತ್ತಿನ ಚೀಲ ತುಂಬಿಕೊಳ್ಳುವ ಆ ಹಿರಿಯ ಜೀವ ಇವತ್ತು ದಿನನಿತ್ಯದ ಅವಶ್ಯಕತೆಗಳಿಗೆ ಹಣವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಬಡತನದ ರೇಖೆಗಳಿಗಿಂತ ಕೆಳಗೆ ಜೀವನ ಸಾಗಿಸುತ್ತಿರುವ ಬಡ ಹಿರಿಯ ಜೀವಗಳು ಮಕ್ಕಳ ಆಸರೆ ಇಲ್ಲದಿದ್ರೂ ಉಪವಾಸ ನರಳಬಾರದು ಎಂಬ ಸದುದ್ದೇಶದಿಂದ ಸರ್ಕಾರ ವೃದ್ಧಾಪ್ಯ ವೇತ ನೀಡುತ್ತಿದೆ. ಆದ್ರೆ, ಸರ್ಕಾರ ವೇತನ ನೀಡ್ತಾಯಿದ್ರೂ ಈ ಹಿರಿಯ ಜೀವಕ್ಕೆ ವೃದ್ದಾಪ್ಯ ವೇತನ ನೀಡುವಲ್ಲಿ ಬ್ಯಾಂಕ್ ಮ್ಯಾನೇಜರ್ ಅಲೆದಾಡಿಸುತ್ತಿರುವುದು ನೋಡಿದರೆ ಬೇಸರವೆನಿಸುತ್ತದೆ.

ಏಕವಚನದಲ್ಲಿ ಸಂಭೋಧಿಸುವ ದುರಹಂಕಾರಿ ಮ್ಯಾನೇಜರ್ :

ಹಿರಿಯ ಜೀವ ದೇವಮ್ಮ ಹತ್ತಾರು ಕಿಲೋ ಮೀಟರ್ ನಿಂದ ಬಂದು ಹಣಕ್ಕಾಗಿ ನೀರು, ಚಹಾ, ಉಪಹಾರವಿಲ್ಲದೇ ಕ್ಯೂ ನಿಂತರೆ ನಿನ್ನ ಮಗನ ಬಳಿ ಲೋನ್ ಕಟ್ಟಲು ಹೇಳು ಇಲ್ಲದಿದ್ದರೆ ನಿನ್ನ ಹಣ ಕೊಡಲ್ಲ ಹೋಗೆ ಎಂದು ಏಕವಚನದಲ್ಲಿ ಸಂಬೋಧಿಸುವ ಅಹಂಕಾರಿ ಅಧಿಕಾರಿಗೆ ಹಿರಿಯ ಜೀವದ ಬಗ್ಗೆ ಒಂಚಿತ್ತು ಕನಿಕರವಿಲ್ಲ…

ಮಗ ಲೋನ್ ಮಾಡಿದ್ದಾನೆ ಅದನ್ನು ತೀರಿಸಿಲ್ಲ ಎಂದು ನನ್ನ ವೃದ್ಯಾಪ್ಯ ವೇತನವನ್ನು ತಡೆಹಿಡಿದು ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ. ನನಗೆ ಊಟಕ್ಕೂ ಗತಿಯಿಲ್ಲ ದಯವಿಟ್ಟು ನನ್ನ ಎಂಟು ತಿಂಗಳ ವೃದ್ದಾಪ್ಯ ವೇತನವನ್ನು ಬಿಡಿಸಿಕೊಳ್ಳಲು ಅವಕಾಶ ನೀಡಿ ಎಂದು ಹಿರಿಯ ಜೀವ ಅಂಗಲಾಚಿದರೆ ” ಹೊಟ್ಟೆಗೆ ಇಲ್ಲದಿದ್ದರೆ ಎಲ್ಲಾದರೂ ಹೋಗಿ ಸಾಯಿ ” ಎಂದು ಹೇಳುವ ದುರಹಂಕಾರಿ ಮ್ಯಾನೇಜರ್ ಗೆ ಬಡವರ ಹಸಿವಿನ ಬಗ್ಗೆ ಅರಿವಿದೆಯ….!??

ಇಂತಹ ಕಣ್ಣಿನಂಚಿನಲ್ಲಿ ರಕ್ತವಿಲ್ಲದ ಅಧಿಕಾರಿಗಳು ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಮುಂದುವರೆದರೆ ಮುಂದೊಂದು ದಿನ ಬ್ಯಾಂಕ್ ಗಳಲ್ಲಿ “ಶ್ರೀಮಂತರಿಗೆ ಮಾತ್ರ ಪ್ರವೇಶ” ಎಂಬ ಬೋರ್ಡ್ ಬಿದ್ದರೂ ಅಚ್ಚರಿಯಿಲ್ಲ..!?

ಈಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಬಡ ವೃದ್ದೆಗೆ ಪಟ್ಟಣದ ಪಿಎಸ್‌ಐ ಪ್ರವೀಣ್ ರವರು ನ್ಯಾಯ ಕೊಡಿಸುವ ವಿಶ್ವಾಸವಿದೆ.

ಒಟ್ಟಾರೆಯಾಗಿ ಸಾವಿರಾರು ಕೋಟಿ ಸಾಲ ಮಾಡಿ ದೇಶ ತೊರೆದ ಶ್ರೀಮಂತರಿಗೆ , ಸಾಲ ಮನ್ನಾ ಮಾಡಿಸಿಕೊಳ್ಳುವ ಕಳ್ಳಕಾಕರಿಗೆ ರತ್ನಗಂಬಳಿ ಹಾಕುವ ಬಿಳಿಯಾನೆಂತಹ ಅಧಿಕಾರಿಗಳಿಗೆ ಧಿಕ್ಕಾರವಿರಲಿ… ವಯಸ್ಸಿಗೆ ಬೆಲೆ ಕೊಡದೇ ಏಕವಚನದಲ್ಲಿ ವೃದ್ದೆಗೆ ಬೈಯ್ಯುವ ಇಂತಹ ಬಡವರ ವಿರೋಧಿ ಅಧಿಕಾರಿಗಳ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.