POSTMANNEWS

ನೈಜ ಸುದ್ದಿ ನೇರ ಬಿತ್ತರ..

Thirthahalli | ಜಮೀನಿನಲ್ಲಿ ನೀರು ಹೋಗುವ ವಿಚಾರದಲ್ಲಿ ಗಲಾಟೆ – ಇಬ್ಬರು ಆತ್ಮಹತ್ಯೆಗೆ ಯತ್ನ – ಮಣಿಪಾಲ್ ಗೆ ರವಾನೆ

ಜಮೀನಿನಲ್ಲಿ ನೀರು ಹೋಗುವ ವಿಚಾರದಲ್ಲಿ ಗಲಾಟೆ – ಇಬ್ಬರು ಆತ್ಮಹತ್ಯೆಗೆ ಯತ್ನ!

ತೀರ್ಥಹಳ್ಳಿ : ರಾಜ ಕಾಲುವೆಯ ನೀರು ತಮ್ಮ ಜಮೀನಿನ ಮೂಲಕ ಹೋಗುವ ವಿಚಾರದಲ್ಲಿ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಲು ಮುಂದಾದ ಸಂದರ್ಭದಲ್ಲಿ ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ತಾಲೂಕಿನ ಅರಳಸುರುಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹುಲಿಸರ ಎಂಬ ಗ್ರಾಮದಲ್ಲಿ ದಿನೇಶ್ (45 ವರ್ಷ ) ಹಾಗೂ ಸತೀಶ್ (49 ವರ್ಷ )  ಎಂಬುವರು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ಇಬ್ಬರನ್ನು ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಗೆ ರವಾನಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *