ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ | ಮೆಗ್ಗಾನ್ ಗೆ ದೌಡಾಯಿಸಿದ ಬಿಜೆಪಿ ನಾಯಕರು – ಘಟನೆ ಕುರಿತು ಬಿ ಸಿ ಪಾಟೀಲ್ ಹೇಳಿದ್ದೇನು
ಮಾಜಿ ಸಚಿವ ಬಿಸಿ ಪಾಟೀಲ್ ರವರ ಅಳಿಯ ಪ್ರತಾಪ್ ಕುಮಾರ ಕೆ ಜಿ (41) ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ವಿಷಕುಡಿದಿದ್ದ ಅವರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. 
ಮೆಗ್ಗಾನ್ ಶವಾಗಾರದಲ್ಲಿ ಅವರ ಮೃತದೇಹ ಇರಿಸಲಾಗಿದೆ. 
ಶಿವಮೊಗ್ಗ ಹರಿಹರ ಹೆದ್ದಾರಿಯಲ್ಲಿ ಅವರ ಕಾರು ನಿಲ್ಲಿಸಿ ವಿಷಸೇವಿಸಿದ್ದಾರೆ. ದಾವಣಗೆರೆ ಜಿಲ್ಲೆಯ  ಹೊನ್ನಾಳಿ ಆರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರಿನಲ್ಲಿ ಅವರು ಪತ್ತೆಯಾಗಿದ್ದಾರೆ.
ಮಾಜಿ ಸಚಿವ ಬಿಸಿ ಪಾಟೀಲ್ ರವರ ಮೊದಲನೇ ಪುತ್ರಿಯ ಪತಿ  ಪ್ರತಾಪ್ ಕುಮಾರ್ ವಿಷ ಸೇವಿಸಿ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಮಾತನಾಡಿದ ಬಿಸಿ ಪಾಟೀಲ್  ಮಧ್ಯಾಹ್ನ 1.45ಕ್ಕೆ ಪ್ರತಾಪ್ ರವರ ಅಣ್ಣ ಫೋನ್ ಮಾಡಿದ್ರು, ಪ್ರತಾಪ್ ಕಾಣೆಯಾಗಿದ್ದಾರೆ ಅಂಥಾ ತಿಳಿಸಿದ್ರು. ಈ  ವಿಚಾರ ತಿಳಿದು ದಾವಣಗೆರೆ, ಶಿವಮೊಗ್ಗ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದೆ. ಆ ಬಳಿಕ ಅವರ ಲೊಕೆಶನ್ ಪತ್ತೆ ಮಾಡಲು ಪ್ರಯತ್ನಿಸಲಾಗಿತ್ತು.
ಸ್ವಲ್ಪ ಸಮಯದ ನಂತರ ಅವರ ಪೋನ್  ಆನ್ ಆಗಿದ್ದು ಗೊತ್ತಾಗಿ ಕರೆ ಮಾಡಿದ್ವಿ ಹೀಗೆ ಹೊನ್ನಾಳಿ ರಸ್ತೆಯಲ್ಲಿ ಇದ್ದೇನೆ ಎಂದಾಗ ಅವರ ಅಣ್ಣ ಸ್ಥಳಕ್ಕೆ ಹೋಗಿ ಹೊನ್ನಾಳಿಯ ಆಸ್ಪತ್ರೆಗೆ ಕರೆದೊಯ್ದರು.
ಜೋಳಕ್ಕೆ ಸಿಂಪಡಿಸುವ ಔಷಧ ಕುಡಿದಿದ್ದಾರೆ ಎಂದು ತಿಳಿದು ಬಂತು, ತಕ್ಷಣ ದಾವಣಗೆರೆಗೆ ಶಿಫ್ಟ್ ಮಾಡೋಕೆ ಹೇಳಿದ್ವಿ ಆದರೆ ಶಿವಮೊಗ್ಗ ಹತ್ರ ಅಂತಾ ಇಲ್ಲಿಗೆ ಶಿಫ್ಟ್ ಮಾಡಲಾಗಿದೆ. ಅವರಿಗೆ ಮಕ್ಕಳ ವಿಚಾರದಲ್ಲಿ ಕೊರಗಿತ್ತು ,ಅಲ್ಲದೆ ಮದ್ಯಪಾನಕ್ಕೆ ಅಡಿಕ್ಟ್ ಆಗಿದ್ದರು..ಆ ಕಾರಣಕ್ಕೆ ಅಡಿಕ್ಷನ್ ಸೆಂಟರ್ನಲ್ಲಿ ಎರಡು ತಿಂಗಳು ಇದ್ದರು. ಅಲ್ಲಿ ಸರಿ ಹೋಗಿದ್ದರು ಎಂದು ತಿಳಿಸಿದ್ದರು. 
ತಮ್ಮ  ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರೆ ನೋಡಿಕೊಳ್ಳುತ್ತಿದ್ದರು,ಮಗಳ ಮದುವೆ ಆಗಿ 16 ವರ್ಷವಾಗಿತ್ತು, ಬೆಳಗ್ಗೆ ಜೊತೆಯಲ್ಲಿ ತಿಂಡಿ ಮಾಡಿದ್ದೆವು. ಊರಿಗೆ ಹೋಗಿ ಬರುತ್ತೀನಿ ಅಂದಿದ್ದರು ಎಂದು ಭಾವುಕರಾದರು.ನಾಳೆ ಚನ್ನಗಿರಿಯ ಕತ್ತಲಗೆರೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದರು.
ಇನ್ನೂ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಿವೈ ವಿಜಯೇಂದ್ರ, ಬಿವೈ ರಾಘವೇಂದ್ರ, ರೇಣುಕಾಚಾರ್ಯ ಸೇರಿದಂತೆ ವಿವಿಧ ಬಿಜೆಪಿ ಮುಖಂಡರು ಮೆಗ್ಗಾನ್ ಆಸ್ಪತ್ರೆಯ ಶವಾಗಾರದ ಬಳಿ ಆಗಮಿಸಿ ಬಿ ಸಿ ಪಾಟೀಲ್ ರವರಿಗೆ ಸಾಂತ್ವಾನ ಹೇಳಿದರು.
 
                         
                         
                         
                         
                         
                         
                         
                         
                         
                        