ಜೋಗ ಜಲಪಾತ ವೀಕ್ಷಣೆಗೆ ಬಂದಿದ್ದ ಯುವಕ ನಾಪತ್ತೆ – ಶೋಧ ಕಾರ್ಯಾಚರಣೆ | person missing in jogfalls
ಜೋಗ ಜಲಪಾತ ವೀಕ್ಷಣೆಗೆಂದು ಬೆಂಗಳೂರಿನಿಂದ ಆಗಮಿಸಿದ್ದ ಯುವಕನೋರ್ವ ಜಲಪಾತದ ಬಳಿ ಕಣ್ಮರೆಯಾದ ಘಟನೆ ನಡೆದಿದ್ದು, ಹುಡುಕಾಟ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ ಟೀ ಅಂಗಡಿ ನಡೆಸುತ್ತಿರುವ ಗದಗ ಮೂಲದ ಆನಂದ್ (24) ಜಲಪಾತದ ಬಳಿ ನಾಪತ್ತೆಯಾಗಿದ್ದಾನೆ.
ಆನಂದ್ ಜೋಗ ಜಲಪಾತಕ್ಕೆ ಜುಲೈ 15ರಂದು ಆಗಮಿಸಿದ್ದ. ಯಾತ್ರಿ ನಿವಾಸದ ಸೀತಾಕಟ್ಟೆ ಬ್ರಿಡ್ಜ್ ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿ ಆಗಮಿಸಿದ್ದ. ಯುವಕ ತಂದಿದ್ದ ಬ್ಯಾಗ್ ಸಿಕ್ಕಿದ್ದು ಕಳೆದ ಆರು ದಿನಗಳಿಂದಲೂ ಯುವಕನಿಗಾಗಿ ಶೋಧ ಮುಂದುವರಿಸಲಾಗಿದೆ.
ಕಾರ್ಗಲ್ ಠಾಣೆ ಪೊಲೀಸರು ನಾಪತ್ತೆ ದೂರು ದಾಖಲಿಸಿಕೊಂಡು ಯುವಕನಿಗಾಗಿ ಜಲಪಾತದ ಬಳಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಜೋಗ ಜಲಪಾತದ ಬಳಿ ಬೀಳುತ್ತಿರುವ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣದಿಂದ ಯುವಕನ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.