ಮಕ್ಕಳೊಂದಿಗೆ ಹೊಳೆಗೆ ಹಾರಿ ಆತ್ಮಹತ್ಯೆಗೆ ಮುಂದಾದ ಮಹಿಳೆಯನ್ನು ರಕ್ಷಿಸಿದ 112 ಪೊಲೀಸರು
ಶಿವಮೊಗ್ಗ ಜಿಲ್ಲೆಯ ಸಾಗರ(sagara) ತಾಲೂಕಿನ ಕುಗ್ವೆ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು 112 ಪೋಲೀಸರು ರಕ್ಷಿಸಿದ ಘಟನೆ ನಡೆದಿದೆ.
ಅಣಲೆಕೊಪ್ಪ ಗ್ರಾಮದ 26 ವರ್ಷದ ಮಹಿಳೆ ಕೌಟುಂಬಿಕ ಕಾರಣದಿಂದ ತನ್ನ ಇಬ್ಬರು ಮಕ್ಕಳೊಂದಿಗೆ ಹೊಳೆಯ ಬಳಿಗೆ ಸ್ಕೂಟಿಯಲ್ಲಿ ಬಂದು ಮೊಬೈಲ್ ಹಾಗೂ ಚಪ್ಪಲಿಯನ್ನು ಹೊಳೆ ಬದಿಯಲ್ಲಿಟ್ಟು ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಮಹಿಳೆಯ ಬಳಿ ತೆರಳಿ ಬುದ್ದಿವಾದ ಹೇಳಿದ್ದಾರೆ ಆದರೆ ಆತ್ಮಹತ್ಯೆ ಮಾಡಿಕೊಳ್ಳಲೇ ಬೇಕೆಂದು ನಿರ್ಧರಿಸಿಕೊಂಂದು ಬಂದಿದ್ದ ಮಹಿಳೆ ಇದನ್ನೆಲ್ಲಾ ಕೇಳುವ ಸ್ಥಿತಿಯಲ್ಲಿರಲಿಲ್ಲ.
ನಂತರ ಸ್ಥಳೀಯ ವ್ಯಕ್ತಿ 112 ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.
ತಕ್ಷಣ ದೂರು ಸ್ವೀಕರಿಸಿಕೊಂಡು 112 ವಾಹನದ ಅಧಿಕಾರಿ ಹೆಡ್ ಕಾನ್ಸ್‌ಟೇಬಲ್ ಶಿವರುದ್ರಯ್ಯ ಹಾಗೂ ಚಾಲಕ ಶಿವಾನಂದ್ ಸ್ಥಳಕ್ಕಾಗಮಿಸಿ ಮಹಿಳೆಯನ್ನು ರಕ್ಷಿಸಿ,ಪೋಲೀಸ್ ವಾಹನದಲ್ಲೇ ಸಾಗರ ಟೌನ್ ಪೋಲೀಸ್ ಠಾಣೆಗೆ ಕರೆ ತಂದಿದ್ದಾರೆ.