w
Headlines
Home » Ripponpete | ತೀರ್ಥಹಳ್ಳಿ ರಸ್ತೆಯಲ್ಲಿ ಅವೈಜ್ಞಾನಿಕ ಡಿವೈಡರ್ ಗೆ ಕಾರು ಡಿಕ್ಕಿ – ಕಾರು ಸಂಪೂರ್ಣ ನಜ್ಜುಗುಜ್ಜು

Ripponpete | ತೀರ್ಥಹಳ್ಳಿ ರಸ್ತೆಯಲ್ಲಿ ಅವೈಜ್ಞಾನಿಕ ಡಿವೈಡರ್ ಗೆ ಕಾರು ಡಿಕ್ಕಿ – ಕಾರು ಸಂಪೂರ್ಣ ನಜ್ಜುಗುಜ್ಜು

Ripponpete | ತೀರ್ಥಹಳ್ಳಿ ರಸ್ತೆಯಲ್ಲಿ ಅವೈಜ್ಞಾನಿಕ ಡಿವೈಡರ್ ಗೆ ಕಾರು ಡಿಕ್ಕಿ – ಕಾರು ಸಂಪೂರ್ಣ ನಜ್ಜುಗುಜ್ಜು


ರಿಪ್ಪನ್‌ಪೇಟೆ ಪಟ್ಟಣದ ತೀರ್ಥಹಳ್ಳಿ ರಸ್ತೆಯ ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗದಲ್ಲಿ ಸಮರ್ಪಕವಾದ ಸೂಚನಾ ಫಲಕವಿಲ್ಲದ ಕಾರಣ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವ ಘಟನೆ ನಡೆದಿದೆ.

ಮಾರುತಿ ಸ್ವಿಫ್ಟ್ ಕಾರಿನಲ್ಲಿ ಸಣ್ಣ ಮಗು ಸೇರಿದಂತೆ ಕೊಪ್ಪ ಮೂಲದ ಐವರು ಪ್ರಯಾಣಿಸುತಿದ್ದರು. ಕಾರಿನಲ್ಲಿದ್ದ ವಯೋವೃದ್ದೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.


ಅವೈಜ್ಞಾನಿಕ ಡಿವೈಡರ್ :

ತೀರ್ಥಹಳ್ಳಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತಿದ್ದು ಬಾರ್ ಅಂಡ್ ರೆಸ್ಟೋರೆಂಟ್ ಸಮೀಪದಲ್ಲಿ ಡಿವೈಡರ್ ನಿರ್ಮಾಣ ಮಾಡಲಾಗಿದ್ದು ಆದರೆ ಡಿವೈಡರ್ ಗೆ ಯಾವುದೇ ಸೂಚನ ಫಲಕವಿಲ್ಲದ ಈ ಅಪಘಾತ ನಡೆದಿದೆ. ರಸ್ತೆ ಮಧ್ಯದಲ್ಲಿ ಲೈಟ್ ಕಂಬವಿದ್ದು ವಿದ್ಯುತ್ ಗುತ್ತಿಗೆದಾರ ಅದನ್ನು ತೆರವುಗೊಳಿಸದೇ ಇರುವುದು ಮುಂದೆ ಭಾರಿ ಅನಾಹುತಕ್ಕೆ ಎಡೆ ಮಾಡಿಕೊಟ್ಟಿದೆ.

ಒಟ್ಟಾರೆಯಾಗಿ ವಾಹನ ಚಾಲಕರಿಗೆ ರಾತ್ರಿ ಸಮಯದಲ್ಲಿ ಡಿವೈಡರ್ ಗಮನಕ್ಕೆ ಬಾರದ ಹಿನ್ನಲೆ ಹಾಗೂ ರಸ್ತೆ ಮಧ್ಯದಲ್ಲಿ ಲೈಟ್ ಕಂಬ ಇರುವುದರಿಂದ ಈ ಸ್ಥಳದಲ್ಲಿ ಅಪಘಾತ ನಡೆಯುತ್ತಿದ್ದು ಕೂಡಲೇ ಈ ಸ್ಠಳದಲ್ಲಿ ಸೂಚನಾ ಫಲಕ ಅಳವಡಿಸಿ ಮುಂದಾಗುವ ಅನಾಹುತ ಭಾರಿ ಅನಾಹುತಗಳನ್ನು ತಡೆಯಲಿ ಎನ್ನುವುದೇ ಪೋಸ್ಟ್ ಮ್ಯಾನ್ ನ್ಯೂಸ್ ನ ಕಳಕಳಿ….

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.