w
Headlines
Home » ತೀರ್ಥಹಳ್ಳಿಯಲ್ಲಿ ಗಾಂಜಾ ಸಾಗಾಟ – ಕೆಂಚನಾಲದ ಓರ್ವ ಸೇರಿದಂತೆ ಇಬ್ಬರ ಬಂಧನ , 2 ಕೆಜಿ ಗಾಂಜಾ ವಶಕ್ಕೆ

ತೀರ್ಥಹಳ್ಳಿಯಲ್ಲಿ ಗಾಂಜಾ ಸಾಗಾಟ – ಕೆಂಚನಾಲದ ಓರ್ವ ಸೇರಿದಂತೆ ಇಬ್ಬರ ಬಂಧನ , 2 ಕೆಜಿ ಗಾಂಜಾ ವಶಕ್ಕೆ

ತೀರ್ಥಹಳ್ಳಿಯಲ್ಲಿ ಗಾಂಜಾ ಸಾಗಾಟ – ಕೆಂಚನಾಲದ ಓರ್ವ ಸೇರಿದಂತೆ ಇಬ್ಬರ ಬಂಧನ , 2 ಕೆಜಿ ಗಾಂಜಾ ವಶಕ್ಕೆ 


ತೀರ್ಥಹಳ್ಳಿ : ಓಮಿನಿ ಕಾರಿನಲ್ಲಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುವ ಸಲುವಾಗಿ ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದವರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಸಾಗಿಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನ  ಹಾಗೂ ಅಪಾರ ಪ್ರಮಾಣದ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಾದ ರಿಪ್ಪನ್‌ಪೇಟೆ ಸಮೀಪದ ಕೆಂಚನಾಳ ಗ್ರಾಮದ ಗಜೇಂದ್ರ @ ಗಜ (37) ಸಾಗರ  ತಾಲೂಕಿನ ಆಚಾಪುರದ ಮಹಮ್ಮದ್ ಬೇಗ್ (38), ಇಬ್ಬರನ್ನ ದಸ್ತಗಿರಿ ಮಾಡಲಾಗಿದೆ.


ಆರೋಪಿಗಳಿಂದ 1,60,000/ ರೂ ಮೌಲ್ಯದ 2 ಕೆಜಿ 150 ಗ್ರಾಂ ತೂಕದ ಒಣ ಗಾಂಜಾ ಮತ್ತು ಅಂದಾಜು ಮೌಲ್ಯ 2,50,000 ರೂ ಗಳ ಓಮಿನಿ ಕಾರನ್ನು ಸೀಜ್ ಮಾಡಲಾಗಿದೆ.

ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ ಭೂಮರೆಡ್ಡಿ, ಎ. ಜಿ ಕಾರಿಯಪ್ಪರ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರರ ನೇತೃತ್ವದಲ್ಲಿ ತೀರ್ಥಹಳ್ಳಿ ಠಾಣೆಯ ಪಿಐ ಅಶ್ವತ್ ಗೌಡ ಜೆ, ಪಿಎಸ್ ಐ ಶಿವನಗೌಡ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ದಾಳಿ ನಡೆಸಿದೆ.‌

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.