Ripponpete | ರಸ್ತೆ ಸುರಕ್ಷತಾ ಕಾನೂನನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವಿದೆ – ಪಿಎಸ್‌ಐ ನಿಂಗರಾಜ್ ಕೆ ವೈ
ರಿಪ್ಪನ್‌ಪೇಟೆ : ದ್ವಿಚಕ್ರ ವಾಹನ ಸವಾರರು ರಸ್ತೆ ಸುರಕ್ಷತಾ ಕಾನೂನಿನ ಬಗ್ಗೆ ಅರಿವು ಪಡೆದುಕೊಂಡು ಎಚ್ಚರಿಕೆಯಿಂದ ಸುರಕ್ಷಿತ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವಿದೆ ಎಂದು ರಿಪ್ಪನ್‌ಪೇಟೆ PSI. ಕೆ. ವೈ ನಿಂಗರಾಜ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾ. ಸೇ. ಯೋ. ಪೊಲೀಸ್ ಇಲಾಖೆ ಹಾಗೂ ಐ.ಕ್ಯೂ.ಎ.ಸಿ ವತಿಯಿಂದ ಆಯೋಜಿಸಲಾದ ರಸ್ತೆ ಸುರಕ್ಷೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ ಜೀವವು ಬಹಳ ಅಮೂಲ್ಯವಾದದ್ದು. ರಸ್ತೆ ಸುರಕ್ಷತಾ ಕ್ರಮವನ್ನು ಸರಿಯಾಗಿ ಪಾಲನೆ ಮಾಡದಿದ್ದರೆ ಅವಘಡಗಳು ಉಂಟಾಗುತ್ತದೆ. ಎಲ್ಲರೂ ರಸ್ತೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯತೆ ಬಗ್ಗೆ ವಿವರಿಸಿದರು.
ಎಲ್ಲಾ ವಾಹನ ಸವಾರರು ಕಡ್ಡಾಯವಾಗಿ ಚಾಲನೆ ಪರವಾನಗೆ, ವಿಮೆ ಪತ್ರ, ಹೊಗೆತಪಾಸಣೆ ದಾಖಲಾತಿಗಳನ್ನು ಹೊಂದಿರಬೇಕು. ವಿದ್ಯಾರ್ಥಿಗಳು ಜ್ಞಾನಾರ್ಜನೆ ಕಡೆಗೆ ತಮ್ಮ ಗಮನ ಹರಿಸಿ, ಉನ್ನತ ಸ್ಥಾನವನ್ನು ತಲುಪಬೇಕು ಎಂದು ಆಶಿಸಿದರು.
ಪ್ರಾಂಶುಪಾಲರಾದ ಚಂದ್ರಶೇಖರ. ಟಿ. ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಯವರು, ರಾ.ಸೇ.ಯೋ. ಅಧಿಕಾರಿಗಳು, ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ರಾಜು ಆರ್. ಕೆ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿರೂಪಾಕ್ಷಪ್ಪ ಹೆಚ್. ಎಸ್, ಕುಮಾರಸ್ವಾಮಿ ಕೆ. ಸಿ. ಹಾಗೂ ಕಾಲೇಜಿನ ಇನ್ನಿತರ ಬೋಧಕ/ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು.