POSTMAN NEWS

ನೈಜ ಸುದ್ದಿ ನೇರ ಬಿತ್ತರ..

‘ಯೋ ಬರ್ಕೊಳಯ್ಯ ಶಿವಮೊಗ್ಗ ನಂದು’ : ಶಿವಣ್ಣನ ಮಾಸ್ ಡೈಲಾಗ್ ಗೆ ಅಭಿಮಾನಿಗಳು ಫಿಧಾ | Election

‘ಯೋ ಬರ್ಕೊಳಯ್ಯ ಶಿವಮೊಗ್ಗ ನಂದು’ : ಶಿವಣ್ಣನ ಮಾಸ್ ಡೈಲಾಗ್ ಗೆ ಅಭಿಮಾನಿಗಳು ‘ಫೀದಾ’


ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಇದೀಗ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರ ಪರವಾಗಿ ನಟ ಶಿವರಾಜ್ ಕುಮಾರ್ ಎಂದು ಚುನಾವಣಾ ಪ್ರಚಾರ ನಡೆಸಿದರು ಈ ವೇಳೆ ಜೋಗಯ್ಯ ಸಿನಿಮಾದ ಡೈಲಾಗ್ ಹೇಳಿದ್ದು ಕಾರ್ಯಕರ್ತರಲ್ಲಿ ಹುಮ್ಮಸ್ಸು ನೀಡಿತು.


ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರದ ವೇಳೆ ಸಭೆ ಒಂದರಲ್ಲಿ ನಟ ಶಿವರಾಜ್ ಕುಮಾರ್ ಅವರು ಜೋಗಯ್ಯ ಸಿನಿಮಾದ ಡೈಲಾಗ್ ಹೊಡೆದಿದ್ದು, ‘ಯೋ ಬರ್ಕೊಳಯ್ಯ ಮುಂದುಗಡೆ ಪೇಪರಲ್ಲಿ ಬರ್ಕೋ ಶಿವಮೊಗ್ಗ ನಂದು’ ಎಂದು ಜೋಗಯ್ಯ ಸಿನಿಮಾದ ಡೈಲಾಗ್ ಹೊಡೆದು ನೆರೆದಿರುವ ಕಾರ್ಯಕರ್ತರನ್ನು ರಂಜಿಸಿದರು.

ಈ ವೇಳೆ ಗೀತಾ ಪರ ಪ್ರಚಾರದ ವೇಳೆ ಶಿವಣ್ಣ ಹೇಳಿಕೆ ನೀಡಿದ್ದು, ಗೀತಾ ಅವರಲ್ಲಿ ರಕ್ತದಲ್ಲಿ ರಾಜಕೀಯ ಇದೆ. ಆದರೆ ನನಗೆ ಇಲ್ಲ ಬಂಗಾರಪ್ಪ ಅವರ ಮಗಳನ್ನು ಮದುವೆ ಆಗಿದ್ದೇನೆ ನಿಮ್ಮ ಮನೆ ಮಗಳಿಗೆ ಒಂದು ಉಡುಗೊರೆ ನೀಡಿ ಶಿವಮೊಗ್ಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡುತ್ತಾರೆ ನನಗಿಂತ ಮೊದಲು ಶಿವಮೊಗ್ಗ ಜಿಲ್ಲೆಯ ಮಗಳು ಎಂದು ಮತದಾರರಲ್ಲಿ ಶಿವಣ್ಣ ಮನವಿ ಮಾಡಿದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.