w
Headlines
Home » Sagara: ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಇಬ್ಬರು ಅಂತರಾಜ್ಯ ಕಳ್ಳರ ಬಂಧನ

Sagara: ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಇಬ್ಬರು ಅಂತರಾಜ್ಯ ಕಳ್ಳರ ಬಂಧನ

Sagara: ಪೊಲೀಸರಿಂದ ಇಬ್ಬರು ಅಂತರಾಜ್ಯ ಕಳ್ಳರ ಬಂಧನ


ಸಾಗರ(sagara) ನಗರದ ಶಿಕ್ಷಕರ ಬಡಾವಣೆಯ ಮನೆಯೊಂದರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಕಳುವಾಗಿದ್ದ ಮಾಲು, ಪ್ರಕರಣಕ್ಕೆ ಬಳಸಿದ್ದ ಕಾರು ಸಹಿತ 2.84 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸಾಗರ ಟೌನ್ ಪೊಲೀಸರು(sagara town police) ವಶಕ್ಕೆ ಪಡೆದಿದ್ದಾರೆ.

ಶಿಗ್ಗಾಂವ್(shiggav) ತಾಲೂಕಿನ ಸಾವದಗಾರ್ ಓಣಿಯಲ್ಲಿ ವಾಸವಿರುವ ಚಾಲಕ ಅಮೀರ್ ಖಾನ್ (42) ಹಾಗೂ ಬೆಳಗಾವಿಯ ಉಡಚಗಾವ್ ನಿವಾಸಿ ವಿಶಾಲ್ ನರಸಿಂಗ ಶೇರ್ಖಾನೆ (52)ನನ್ನು ಪೇಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಲ್ಲಿ ವಿಶಾಲ್ ವಿರುದ್ಧ ಮಹಾರಾಷ್ಟ್ರ ಹಾಗೂ ಕರ್ನಾಟಕದ ಹಲವು ಠಾಣೆಯಲ್ಲಿ ೨೦ಕ್ಕೂ ಹೆಚ್ಚು ಪ್ರಕರಣಗಳಿದ್ದು, ಅಮೀರ್ ಖಾನ್ ವಿರುದ್ಧ ೮ ದೂರುಗಳು ರಾಜ್ಯದಲ್ಲಿವೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಮನೆ ದರೋಡೆ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ ಸ್ಥಳದಲ್ಲಿ ಆರೋಪಿಯ ಬೆರಳಚ್ಚು ಲಭ್ಯವಾಗಿದ್ದು, ಇದರ ಆಧಾರದಲ್ಲಿ ಇಬ್ಬರು ಅಂತರರಾಜ್ಯ ಕಳ್ಳರನ್ನು ಹಿಡಿದಿದ್ದಾರೆ. ಇವರಿಂದ 84 ಸಾವಿರ ಮೊತ್ತದ ಚಿನ್ನ, ಬೆಳ್ಳಿ ವಸ್ತುಗಳು ಮತ್ತು ದರೋಡೆಗೆ ಬಳಸಿದ್ದ 2 ಲಕ್ಷ ಮೌಲ್ಯದ ಕಾರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.