w
Headlines
Home » Ripponpete | ಹೊಸನಗರ ರಸ್ತೆಯ ಗ್ಯಾಸ್ ಸಿಲಿಂಡರ್ ಗೋದಾಮು ಬಳಿ ಅಗ್ನಿ ಅವಘಡ – ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

Ripponpete | ಹೊಸನಗರ ರಸ್ತೆಯ ಗ್ಯಾಸ್ ಸಿಲಿಂಡರ್ ಗೋದಾಮು ಬಳಿ ಅಗ್ನಿ ಅವಘಡ – ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

Ripponpete | ಹೊಸನಗರ ರಸ್ತೆಯ ಗ್ಯಾಸ್ ಸಿಲಿಂಡರ್ ಗೋದಾಮು ಬಳಿ ಅಗ್ನಿ ಅವಘಡ – ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ


ರಿಪ್ಪನ್‌ಪೇಟೆ : ಪಟ್ಟಣದ ಹೊಸನಗರ ರಸ್ತೆಯ ಮಾಡ್ರನ್ ರೈಸ್ ಮಿಲ್ ಸಮೀಪದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಉರಿದಿದ್ದು ಸೂಕ್ತ ಸಮಯಕ್ಕೆ ಸ್ಥಳೀಯ ಯುವಕರು ಬೆಂಕಿ ನಂದಿಸಿ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿಸಿದ್ದಾರೆ.

ಇಂದು ಮಧ್ಯಾಹ್ನ ಗ್ಯಾಸ್ ಸಿಲಿಂಡರ್ ಗೋದಾಮು ಸಮೀಪದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮರಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೆಲಹೊತ್ತಿನಲ್ಲೇ ಬೆಂಕಿ ಎಲ್ಲಾ ಕಡೆ ಆವರಿಸಿಕೊಂಡಿದೆ.ಇದನ್ನು ಗಮನಿಸಿದ ಸ್ಥಳೀಯ ಯುವಕರಾದ ನಿತೀಶ್ ಕುಮಾರ್ , ಶಿವು ಆಚಾರ್ಯ , ಮಂಜು ಆಚಾರ್ಯ , ಓಂ ಎಲೆಕ್ಟ್ರಿಕಲ್ ನ ಮಂಜುನಾಥ್ , ಮುರುಗೇಂದ್ರ ಹಾಗೂ ಹರೀಶ್ ಪ್ರಭು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿ ಬೆಂಕಿ ನಂದಿಸಿದ್ದಾರೆ. 


ನಂತರ ಸ್ವಲ್ಪ ಸಮಯದ ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

ಘಟನೆ ನಡೆದ ಸಮೀಪದಲ್ಲೇ ಗ್ಯಾಸ್ ಸಿಲಿಂಡರ್ ಗೋಡೌನ್ ಇದ್ದು, ಬೆಂಕಿಯ ಕಿಡಿ ತಾಕಿದ್ದರೆ, ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.