w
Headlines
Home » Hosanagara | ಪ್ಲಾಂಟೇಷನ್ ನಲ್ಲಿ ನೇಣು ಬಿಗಿದುಕೊಂಡು ಕಾರ್ಪೆಂಟರ್ ರಾಘು ಆತ್ಮಹತ್ಯೆ

Hosanagara | ಪ್ಲಾಂಟೇಷನ್ ನಲ್ಲಿ ನೇಣು ಬಿಗಿದುಕೊಂಡು ಕಾರ್ಪೆಂಟರ್ ರಾಘು ಆತ್ಮಹತ್ಯೆ


ಪ್ಲಾಂಟೇಷನ್ ನಲ್ಲಿ ನೇಣು ಬಿಗಿದುಕೊಂಡು ಕಾರ್ಪೆಂಟರ್ ರಾಘು ಆತ್ಮಹತ್ಯೆ

ಹೊಸನಗರ : ಪಟ್ಟಣದ ಮಾವಿನಕೊಪ್ಪ ನಿವಾಸಿ 45 ರ ಹರೆಯದ ಕಾರ್ಪೆಂಟರ್ ವೃತ್ತಿ ಮಾಡುವ ರಾಘವೇಂದ್ರ ಆಚಾರ್ ಇಂದು ಸೋಮವಾರ ಮಧ್ಯಾಹ್ನ ಸಾಗರ ರಸ್ತೆಯ ಕಳೂರು ಗ್ರಾಮದ ಅಕೇಶಿಯ ಪ್ಲಾಂಟೇಶನ್ ನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.



ಮೃತ ರಾಘವೇಂದ್ರ ಉತ್ತಮ ಮರಗೆಲಸ ಮಾಡುತ್ತಿದ್ದು ವಿವಾಹಿತನಾಗಿದ್ದು ಪತ್ನಿ ಇಬ್ಬರು ಪುತ್ರಿಯರನ್ನು ಅಪಾರ ಬಂಧು ಬಳಗದವರನ್ನು ಹೊಂದಿದ್ದು ಆತನು ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ತಾನು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದು ನನ್ನ ಸಾವಿಗೆ ನಾನೇ ಕಾರಣ ನನ್ನ ದೇಹವನ್ನು ಯಾವು ದಾದರೂ ಆಸ್ಪತ್ರೆಗೆ ದಾನ ಮಾಡಿ ಎಂದು ಬರೆದಿಟ್ಟಿರುವುದಾಗಿ ತಿಳಿದು ಬಂದಿದೆ.

ಹೊಸನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಕ್ರಮ ಜರುಗಿಸಿ ಮುಂದಿನ ತನಿಖೆ ಕ್ರಮ ಕೈಗೊಂಡಿದ್ದಾರೆ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.