ರಿಪ್ಪನ್‌ಪೇಟೆ ಪಟ್ಟಣದಾದ್ಯಂತ ಕೈ ಕೊಟ್ಟ ಏರ್‌ಟೆಲ್ ನೆಟ್‌ವರ್ಕ್, ಪರದಾಡಿದ ಗ್ರಾಹಕ | Rpet

ರಿಪ್ಪನ್‌ಪೇಟೆ : ಕೈ ಕೊಟ್ಟ ಏರ್‌ಟೆಲ್ ನೆಟ್‌ವರ್ಕ್, ಪರದಾಡಿದ ಗ್ರಾಹಕ

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಏರ್ ಟೆಲ್ ನೆಟ್ ವರ್ಕ್ ಕೈಕೊಟ್ಟಿತ್ತು. ಜನರು ತಮ್ಮ ತಮ್ಮವರಿಗೆ ಕರೆ ಮಾಡಲು ಮೊಬೈಲ್ ಕೈಯಲ್ಲಿ ಹಿಡಿದರೆ ನೆಟ್ ವರ್ಕ್ ಇಲ್ಲದೆ ಪರದಾಡಬೇಕಾಯಿತು. ಅಂಗ್ಯೆಯಲ್ಲಿ ವಿಶ್ವ ಎನ್ನುವ ಪ್ರಧಾನಿ‌ ಮೋದಿಯವರ ಪರಿಕಲ್ಪನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ನುಚ್ಚುನೂರು ಮಾಡುತ್ತಿದೆ ಏರ್ಟೆಲ್ ನೆಟ್ವರ್ಕ್…

ಮಧ್ಯಾಹ್ನದವರೆಗೂ ಏರ್ ಟೆಲ್ ಕಂಪನಿಯ ಮೊಬೈಲ್ ಗಳ ಸಿಗ್ನಲ್ ಸಿಗಲಿಲ್ಲ. ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ರಸ್ತೆಯ ಮಧ್ಯೆಯೇ ಫೋನ್ ಗೆ ಏನಾಗಿದೆ ಎಂದು ಸಿಕ್ಕ ಸಿಕ್ಕವರಿಗೆ ಕೇಳುವಂತಾಗಿತ್ತು. ಕೆಲವರಂತೂ ನಿಮ್ಮ ಬಳಿ ಏರ್ ಟೆಲ್ ನಂಬರ್ ಇದೆಯಾ ಅದರ ನೆಟವರ್ಕ್ ಇದೆಯಾ ನೋಡಿ ಸ್ವಲ್ಪ ಎಂದು ಕೇಳಿಕೊಳ್ಳುತ್ತಿದ್ದರು. ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವವರು ಕೈಕೈ ಹಿಸುಕಿಕೊಳ್ಳುತಿದ್ದು ಕೆಲವು ಹೊಟೇಲ್ ಗಳಲ್ಲಿ ಊಟ ಹಣ ಪಾವತಿಸಲು ಒದ್ದಾಡುತ್ತಿದ್ದಾರೆ.. ಹೀಗೆ ಅಂಗಡಿ ಮುಂಗಟ್ಟು ,ಸಂತೆ ಮಾಲ್ ಗಳಲ್ಲಿ ಬೇರೆ ಮೊಬೈಲ್ ನೆಟ್ವರ್ಕ್ ಗಳ ಹಾಟ್ ಸ್ಪಾಟ್ವ್ ಕನೆಕ್ಷನ್ ಗೆ ಮೊರೆ ಹೋಗುತಿದ್ದಾರೆ.

ಪಟ್ಟಣದಾದ್ಯಂತ ಈ ಸಮಸ್ಯೆ ಕಂಡುಬಂದಿತ್ತು. ಯಾವ ಕಾರಣಕ್ಕಾಗಿ ಈ ಸಮಸ್ಯೆಯಾಗಿದೆ ಎಂದು ಯಾರನ್ನು ಕೇಳಬೇಕು ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಗ್ರಾಹಕರ ದೂರು ಕೇಂದ್ರಗಳಿಗೆ ಕರೆ ಮಾಡಬೇಕೆಂದರೆ ನೆಟವರ್ಕ್ ಇದ್ದರೆ ತಾನೇ? ಬಿಲ್ ಪಾವತಿ ಮಾಡುವುದು ಒಂದು ನಿಮಿಷ ತಡವಾದಲ್ಲಿ ಕನೆಕ್ಷನ್ ನ್ನು ನಿರ್ದಾಕ್ಷಿಣ್ಯವಾಗಿ ಕಡಿತಗೊಳಿಸುವ ಶಕ್ತಿ ಸಾಮರ್ಥ್ಯವನ್ನು ಹೊಂದಿರುವ ತಾಂತ್ರಿಕ ತಜ್ಞರಿಗೆ ಗ್ರಾಹಕರ ಪರದಾಡುವಿಕೆ ಗೋಚರಿಸದಿಲ್ಲದಿರುವಿಕೆ ಉಳಿದವರು ನೆಟ್ವರ್ಕ್ ನವರು ಕಂಡಂತೆ ಆಗಿದೆ.

ಕೆಲ ಪೋಸ್ಟ್ ಪೇಯ್ಡ್ ಗ್ರಾಹಕರು ಯಾವಾಗಲೂ ಫೋನ್ ಮಾಡಲೆಂದು ಇರಲಿ ಎಂದು ಏರ್ ಟೆಲ್ ಆರಿಸಿಕೊಂಡಿದ್ದರು. ಆದರೆ ಇಂದಿನ ಈ ಸಮಸ್ಯೆಯಿಂದಾಗಿ ಏನಾಯ್ತು ಬಿಲ್ ತುಂಬಿದ್ದೇವಲ್ಲಾ ನಾವು ಯಾಕೇ ಹೀಗಾಗ್ತಿದೆ ಎಂದು ಗೊಂದಲ ವ್ಯಕ್ತಪಡಿಸುತ್ತಿದ್ದರು.

ಪಟ್ಟಣದಲ್ಲಿ ಸೋಮವಾರ ಸಂತೆಯ ದಿನವಾದ್ದರಿಂದ ಇಂದಿನ ಈ ಸಮಸ್ಯೆಯಿಂದ ಹಲವಾರು ಜನತೆ ತೊಂದರೆ ಅನುಭವಿಸಿದರು.

ಇದೇ ರೀತಿ ಮೊಬೈಲ್ ನಲ್ಲಿ ಇಂಟರನೆಟ್ ಸಂಪರ್ಕ ಪಡೆದುಕೊಂಡು ವಾಟ್ಸಪ್, ಟ್ವಿಟ್ಟರ್, ಫೇಸ್ ಬುಕ್ ಎಂದು ಸಮಯ ಹರಣ ಮಾಡುವವರಿಗೂ ಕೂಡ ನೆಟ್ ವರ್ಕ್ ತೊಂದರೆಯಿಂದ ಸಾಕಷ್ಟು ಬೇಸರಗೊಂಡರು. ಈ ಬಗ್ಗೆ ಏರ್ ಟೆಲ್ ಕಂಪನಿಯವರನ್ನು ಕೇಳಿದರೆ ತಾಂತ್ರಿಕ ತೊಂದರೆಯಿಂದ ಹೀಗಾಗಿದೆ. ಅದನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಹೇಳಿ ಎಲ್ಲರನ್ನೂ ಸಾಗಹಾಕಿದರು.

Leave a Reply

Your email address will not be published. Required fields are marked *