w
Headlines
Home » ಸ್ನೇಹ ಅಂತ ಒಳಗೊಳಗೆ ಸ್ಕೆಚ್ಚು ಹಾಕ್ತಾರೆ | ಸ್ನೇಹಿತರಿಂದಲೆ ಯುವಕನ ಕತ್ತು ಕೊಯ್ದು ಬರ್ಬರ ಹತ್ಯೆ

ಸ್ನೇಹ ಅಂತ ಒಳಗೊಳಗೆ ಸ್ಕೆಚ್ಚು ಹಾಕ್ತಾರೆ | ಸ್ನೇಹಿತರಿಂದಲೆ ಯುವಕನ ಕತ್ತು ಕೊಯ್ದು ಬರ್ಬರ ಹತ್ಯೆ

ಸ್ನೇಹ ಅಂತ ಒಳಗೊಳಗೆ ಸ್ಕೆಚ್ಚು ಹಾಕ್ತಾರೆ – ಸ್ನೇಹಿತರಿಂದಲೆ ಯುವಕನ ಕತ್ತು ಕೊಯ್ದು ಬರ್ಬರ ಹತ್ಯೆ


ರಾತ್ರೋರಾತ್ರಿ ಕಾರಿನಲ್ಲಿ ಕರೆದೊಯ್ದ ಮೂವರು ಯುವಕರು ತಮ್ಮ ಸ್ನೇಹಿತನ ಕತ್ತು ಕೊಯ್ದು ಕೊಲೆ (Murder) ಮಾಡಿರುವ ಘಟನೆ ತಾಲೂಕಿನ ಹೊಸೂರು ಸಮೀಪ ನಡೆದಿದೆ.

ಬೆಂಗಳೂರಿಂದ ಅಜ್ಜಿಯ ಮನೆಗೆ ಬಂದಿದ್ದ ಯುವಕನನ್ನು ಕರೆ ಮಾಡಿ ಕರೆಸಿಕೊಂಡ ಸ್ನೇಹಿತರು ಕತ್ತು ಕೊಯ್ದು ಮರ್ಡರ್ ಮಾಡಿರುವ ಘಟನೆ ಕಡೂರಿನ ಮಾಡಾಳು ಹೊಸೂರು ಸಮೀಪ ನಡೆದಿದೆ.

ಡ್ರೈವರ್ ಕೆಲಸ ಮಾಡುತ್ತಿದ್ದ ದರ್ಶನ್ ಕೊಲೆಯಾದ ಯುವಕ. ಕಳೆದ ರಾತ್ರಿ ಬೆಂಗಳೂರಿನಿಂದ ಮೂರ್ನಾಲ್ಕು ಜನ ಸ್ನೇಹಿತರು ಅಜ್ಜಿಯ ಮನೆಯಲ್ಲಿದ್ದ ದರ್ಶನ್ ನನ್ನು ಕರೆಸಿಕೊಂಡು ಮಧ್ಯರಾತ್ರಿ ಕೊಲೆ ಮಾಡಿದ್ದಾರೆ.

ಮೂಲತಃ ಮಧುಗಿರಿಯವನಾಗಿದ್ದ ದರ್ಶನ್ ಬೆಂಗಳೂರಿನ ಆರ್.ಆರ್ ನಗರದಲ್ಲಿ ವಾಸವಿದ್ದ ಎನ್ನಲಾಗಿದ್ದು, ಮೊನ್ನೆ ಕಡೂರಿನ ಅಜ್ಜಿ ಮನೆಗೆ ಬಂದಿದ್ದಾನೆ. ಇದನ್ನು ತಿಳಿದ ಆತನ ಮೂವರು ಸ್ನೇಹಿತರು ಕಡೂರಿಗೆ ಬರುತ್ತಿದ್ದೇವೆ ಬಾ ಎಂದು ಕರೆಸಿಕೊಂಡು ದರ್ಶನ್ ಮಾವ ಸೋಮಶೇಖರ್ ಗೆ ವಿಡಿಯೋ ಕಾಲ್ ಮಾಡಿದ್ದಾರೆ.

ಸ್ನೇಹಿತರ ಜೊತೆ ಹೋಗಿ ಬರುತ್ತೇನೆಂದು ಹೋದವನು ಶವವಾಗಿ ಬಂದಿದ್ದಾನೆ, ಹಣಕಾಸಿನ ವಿಚಾರ ಅಥವಾ ಹುಡುಗಿ ವಿಷಯಕ್ಕೆ ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಇತ್ತೀಚೆಗೆ ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸಿ ಕೆಲವು ದಿನಗಳ ಹಿಂದೆ ದರ್ಶನ್ ಬಿಡುಗಡೆಯಾಗಿದ್ದ.

ಕಡೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.