w
Headlines
Home » Hosanagara | ತಾಲೂಕ್ ಬಿಜೆಪಿ ಅಧ್ಯಕ್ಷರಾಗಿ ಮತ್ತಿಮನೆ ಸುಬ್ರಹ್ಮಣ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಗಾರ್ಜುನ ಸ್ವಾಮಿ ನೇಮಕ

Hosanagara | ತಾಲೂಕ್ ಬಿಜೆಪಿ ಅಧ್ಯಕ್ಷರಾಗಿ ಮತ್ತಿಮನೆ ಸುಬ್ರಹ್ಮಣ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಗಾರ್ಜುನ ಸ್ವಾಮಿ ನೇಮಕ

Hosanagara | ತಾಲೂಕ್ ಬಿಜೆ ಅಧ್ಯಕ್ಷರಾಗಿ ಮತ್ತಿಮನೆ ಸುಬ್ರಹ್ಮಣ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಗಾರ್ಜುನ ಸ್ವಾಮಿ ನೇಮಕ


ಹೊಸನಗರ ತಾಲೂಕಿನ ಬಿಜೆಪಿ ತಾಲೂಕ್ ಅಧ್ಯಕ್ಷರನ್ನಾಗಿ ಮತ್ತಿಮನೆ ಸುಬ್ರಹ್ಮಣ್ಯ ರವರನ್ನು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನಾಗಾರ್ಜುನಸ್ವಾಮಿ ,ಸತೀಶ್ ಕಾಲಸಸಿ ರವರನ್ನು ಆಯ್ಕೆ ಮಾಡಲಾಗಿದೆ.

ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಎದುರಾಗಿತ್ತು ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ,ರಿಪ್ಪನ್‌ಪೇಟೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್, ಸುರೇಶ್ ಸ್ವಾಮಿರಾವ್ ಸೇರಿದಂತೆ ಹಲವರ ಹೆಸರುಗಳು ಕೇಳಿಬಂದಿದ್ದವು.

ಇಂದು ಜಿಲ್ಲೆಯ ಎಲ್ಲಾ ತಾಲೂಕ್ ಅಧ್ಯಕ್ಷರ ಪಟ್ಟಿ ಬಿಡುಗಡೆಗೊಳಿಸಿರುವ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್ ಹೊಸನಗರ ತಾಲೂಕಿಗೆ ಬಿದನೂರು ನಗರ ಭಾಗದ ಪ್ರಭಾವಿ ಮುಖಂಡ ಮತ್ತಿಮನೆ ಸುಬ್ರಹ್ಮಣ್ಯ ಗೆ ಮಣೆ ಹಾಕಿದ್ದಾರೆ.

ನಾಗಾರ್ಜುನ ಸ್ವಾಮಿ ಹಿಂದಿನ ಸಮಿತಿಯಲ್ಲೂ ಪ್ರಧಾನ ಕಾರ್ಯದರ್ಶಿಯಾಗಿದ್ದರು ಹಾಗೂ ಕಾಲಸಸಿ ಸತೀಶ್ ರವರಿಗೂ ಪ್ರಧಾನ ಕಾರ್ಯದರ್ಶಿ ಹುದ್ದೆ ಒಲಿದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.