w
Headlines
Home » 13 ದಿನಗಳಲ್ಲಿ ಹಸೆಮಣೆ ಏರಬೇಕಾಗಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

13 ದಿನಗಳಲ್ಲಿ ಹಸೆಮಣೆ ಏರಬೇಕಾಗಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

13 ದಿನಗಳಲ್ಲಿ ಹಸೆಮಣೆ ಏರಬೇಕಾಗಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!


ತೀರ್ಥಹಳ್ಳಿ(Thirthahalli) :ಮದುವೆಗೆ 13 ದಿನ ಇರುವ ವೇಳೆಯಲ್ಲಿ ಮನೆಯ ಬಚ್ಚಲು ಮನೆ ಪಕ್ಕದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ(Sunday) ಬೆಳಕಿಗೆ ಬಂದಿದೆ 

ತಾಲೂಕಿನ ಕಟ್ಟೆಹಕ್ಲುವಿನ ಚೈತ್ರ (26 ವರ್ಷ ) ಮೃತಪಟ್ಟ ದುರ್ದೈವಿ.  

ಫೆಬ್ರವರಿ 4 ರಂದು ಚೈತ್ರ ಅವರಿಗೆ ಮದುವೆ ನಿಗದಿ ಪಡಿಸಲಾಗಿತ್ತು. ಮಾನಸಿಕ ಸ್ಥಿತಿಯಿಂದ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದು ಶನಿವಾರ ರಾತ್ರಿ ಮದುವೆ ಬೇಡ ಎಂದು ಹೇಳಿದ್ದರಂತೆ. ನಂತರ ರಾತ್ರಿ ನೇಣಿಗೆ ಕೊರಳು ಒಡ್ಡಿದ್ದಾರೆ.

ಎಂ ಕಾಂ(M.com) ಪದವಿಧರೆ ಆಗಿರುವ ಚೈತ್ರ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 

ತೀರ್ಥಹಳ್ಳಿಯ ಶವಗಾರದಲ್ಲಿ ಶವ ಇರಿಸಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.