Ripponpete | ವಿಕಲ ಚೇತನ ಯುವತಿಗೆ ಧೈರ್ಯ ತುಂಬಿ ಆರ್ಥಿಕ ನೆರವು ನೀಡಿದ ಪಿಎಸ್ಐ ಪ್ರವೀಣ್
ರಿಪ್ಪನ್ ಪೇಟೆ : ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋ ಕೊಪ್ಪ ಗ್ರಾಮದ ಬಡ ಕುಟುಂಬದ ವಿಕಲಚೇತನ ಯುವತಿ ಉಷಾ(24) ರವರಿಗೆ ಧೈರ್ಯ ತುಂಬಿ ಆರ್ಥಿಕ ನೆರವು ನೀಡುವುದರ ಮೂಲಕ ಪಿಎಸ್ಐ ಪ್ರವೀಣ್ ಎಸ್ ಪಿ ಸಾರ್ವಜನಿಕ ಪ್ರಶಂಸೆಗೆ ಒಳಗಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಪೋಸ್ಟ್ ಮ್ಯಾನ್ ನ್ಯೂಸ್ ಸುದ್ದಿ ಬಳಗಕ್ಕೆ ಹಾರಂಬಳ್ಳಿ ವಾಸು ಎಂಬುವರು ಹಾರೋಗೊಪ್ಪ ವಿಕಲ ಚೇತನ ಯುವತಿಯ ಹಾಗೂ ಕುಟುಂಬದ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವಿಕಲಚೇತನ ಯುವತಿಯ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಿರುವುದನ್ನು ಗಮನಿಸಿ ಈ ಬಗ್ಗೆ ವಿಸ್ತೃತವಾದ ವರದಿ ಪ್ರಕಟಿಸಿ ಬಡ ಕುಟುಂಬಕ್ಕೆ ದಾನಿಗಳಿಂದ ಆರ್ಥಿಕ ನೆರವು ಕೊಡಿಸಲು ತೀರ್ಮಾನಿಸಲಾಗಿತ್ತು.
ಸುದ್ದಿಗೆ ಬೇಕಾದ ಮಾಹಿತಿ ಹಾಗೂ ವೀಡಿಯೋವನ್ನು ಸಂಗ್ರಹಸಿ ಮನೆಯಿಂದ ಹೊರಡುವ ಸಮಯದಲ್ಲಿ ಯುವತಿ ಕಣ್ಣೀರಿನಿಂದ ನನಗೆ ಒಂದು ಟಿವಿ ಕೊಡಿಸಿ ಎಂದು ಪೋಸ್ಟ್ ಮ್ಯಾನ್ ಸುದ್ದಿ ಬಳಗಕ್ಕೆ ಕೋರಿಕೊಂಡಿದ್ದಳು.ಎರಡೂ ದಿನಗಳಲ್ಲಿ ಟಿವಿ ಕೊಡಿಸುವ ಭರವಸೆ ನೀಡಲಾಗಿತ್ತು.
ಅದರಂತೆ ಈ ದಿನ ಯುವತಿಯ ಬೇಡಿಕೆಯಾದ ಟಿವಿಯನ್ನು ನಮ್ಮ ಬಳಗದ ವತಿಯಿಂದ ರಿಪ್ಪನ್‌ಪೇಟೆ ಪಿಎಸ್ಐ ಪ್ರವೀಣ್ ಮೂಲಕ ನೀಡಲಾಯಿತು.ಇದೇ ಸಂಧರ್ಭದಲ್ಲಿ ಪಿಎಸ್‌ಐ ಪ್ರವೀಣ್ ಯುವತಿಯ ಕುಟುಂಬಕ್ಕೆ ವೈಯಕ್ತಿಕ ಆರ್ಥಿಕ ನೆರವಿನ ಸಹಾಯ ಹಸ್ತ ನೀಡಿ ಧೈರ್ಯ ತುಂಬಿದರು.ನಂತರ ಯುವತಿಯ ಕುಟುಂಬದವರೊಂದಿಗೆ ಮಾತನಾಡಿದ ಅವರು ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಆ ಬಡ ಕುಟುಂಬಕ್ಕೆ ಇನ್ನೂ ಹೆಚ್ಚಿನ ಆರ್ಥಿಕ ನೆರವು ನೀಡುತ್ತೇವೆ ಎಂದು ಭರವಸೆ ನೀಡಿದರು.
ನಾಡಿನ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ರಕ್ಷಣಾ ಇಲಾಖೆಯಲ್ಲಿ ಅನೇಕ ಹೃದಯವಂತರಿದ್ದಾರೆ. ಜನಸಾಮಾನ್ಯರ ರಕ್ಷಣೆಯ ಜೊತೆಗೆ ಸಮಾಜ ಸೇವೆಯಲ್ಲು ಸಹ ತೊಡಗಿಕೊಂಡಿದ್ದಾರೆ, ಅಂತವರ ಪಟ್ಟಿಯಲ್ಲಿ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿ ಎಸ್ ಐ ಪ್ರವೀಣ್ ಎಸ್ ಪಿ ಮುಂಚೂಣಿಯಲ್ಲಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ರಿಪ್ಪನ್ ಪೇಟೆ ಪಟ್ಟಣದ ಆಟೋ ಚಾಲಕರೊಬ್ಬರ ವಿಕಲಚೇತನ ಮಗಳಿಗೆ ಸ್ವತಹ ಹಾಗೂ ತಮ್ಮೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಹಕಾರದಿಂದ ಆ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದರು. ಯಾವುದೇ ಪ್ರಚಾರವಿಲ್ಲದೆ ಬಡ ಕುಟುಂಬಕ್ಕೆ ಅದರಲ್ಲೂ ವಿಕಲಚೇತನದವರಿಗೆ ಸಹಾಯ ಹಸ್ತ ನೀಡುತ್ತಿರುವ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿ ವರ್ಗಕ್ಕೆ ಪೋಸ್ಟ್ ಮ್ಯಾನ್ ನ್ಯೂಸ್ ಸುದ್ದಿ ಬಳಗದ ವತಿಯಿಂದ ಅಭಿನಂದನೆಗಳು.
ಈ ಸಂಧರ್ಭದಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ರಫ಼ಿ ರಿಪ್ಪನ್‌ಪೇಟೆ ,ಸಬಾಸ್ಟಿಯನ್ ಮ್ಯಾಥ್ಯೂಸ್ ಸಮಾಜ ಸೇವಕರಾದ ಹಸನಬ್ಬ , ಲೇಖನ ಚಂದ್ರನಾಯ್ಕ್ , ಸಾಜೀದಾ ಹನೀಫ಼್ , ಬಳಗದ ಹಿತೈಶಿಗಳಾದ ಸುಧಾಕರ್ ತ ಮ , ಚರಣ್ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ , ಶಿವುಕುಮಾರ್ ನಾಯ್ಕ್ , ಮಧುಸೂಧನ್ ಇದ್ದರು.