Headlines

ಸಾಗರ : ಐಗಿನಬೈಲ್ ಬಳಿ ದ್ವಿಚಕ್ರ ಹಾಗೂ ಕಾರಿನ ನಡುವೆ ಡಿಕ್ಕಿ – ಯುವತಿ ಸ್ಥಳದಲ್ಲೇ ಸಾವು|accident

ಕಾರು ಮತ್ತು ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ ನಡೆದು ಸ್ಥಳದಲ್ಲೇ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಸಾಗರ ತಾಲೂಕಿನ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗಿನಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ 24 ವರ್ಷದ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಶೃತಿ(24) ಮೃತಪಟ್ಟಿರುವ ಯುವತಿಯಾಗಿದ್ದು  ಶಿವಮೊಗ್ಗದ ಸಿಟಿ ಸೆಂಟರ್ ನಲ್ಲಿ ಸೆಕ್ಯೂರಿಟಿ ಗಾರ್ಡಾಗಿ…

Read More

ತೀರ್ಥಹಳ್ಳಿ ಪಟ್ಟಣದ ತುಡ್ಕಿಯಲ್ಲಿ ಕಾಣಿಸಿಕೊಂಡ ಚಿರತೆ – ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಆಟದ ಮೈದಾನಕ್ಕೆ ತೆರಳದಂತೆ ಕಟ್ಟಪ್ಪಣೆ|leopard

ವನ್ಯಜೀವಿಗಳ ಕಾಟ ಬರೀ ಗ್ರಾಮಾಂತರ ಪ್ರದೇಶಕ್ಕೆ ಸೀಮಿತವಾಗಿಲ್ಲ, ಪಟ್ಟಣ, ನಗರ ಪ್ರದೇಶಕ್ಕೂ ವನ್ಯಜೀವಿಗಳು ದಾಂಗುಡಿ ಇಡುತ್ತಿದ್ದು ಭಯ ಮೂಡಿಸುತ್ತಿವೆ. ಕೆಲದಿನದಿಂದ ಪಟ್ಟಣ ಸಮೀಪದ ತುಡ್ಕಿಯ ಆನಂದಗಿರಿ ಗುಡ್ಡದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಂಡು ಬಂದಿದ್ದು ಜನರು ಗಾಬರಿಗೊಂಡಿದ್ದಾರೆ. ಆನಂದಗಿರಿ ಗುಡ್ಡದಲ್ಲಿರುವ ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಆಟದ ಮೈದಾನಕ್ಕೆ ತೆರಳದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಮಕ್ಕಳ ಪ್ರಾರ್ಥನಾ ಕಾರ್ಯಕ್ರಮದ ಅವಧಿಯನ್ನು ಕೆಲ ದಿನದ ಮಟ್ಟಿಗೆ ಬದಲಾಯಿಸಲಾಗಿದೆ. ಕಟ್ಟಡ ಒಳಾಂಗಣ, ಕೊಠಡಿಯಲ್ಲಿ ಇರುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ಚಿರತೆ ಓಡಾಟವನ್ನು ಸಾರ್ವಜನಿಕರು…

Read More

ಅತ್ಯಂತ ನೀರಸ,ಚುನಾವಣಾ ತಂತ್ರಗಾರಿಕೆಯ ಬಜೆಟ್‌ – ಜೆಡಿಎಸ್|JDS

ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯದ 2023-24 ನೇ ಸಾಲಿನ ಬಜೆಟ್ ಚುನಾವಣಾ ತಂತ್ರಗಾರಿಕೆ ಬಜೆಟ್ ಆಗಿದೆಯೇ ಹೊರತು ಇದರಲ್ಲಿ ಯಾವುದೇ ಅಭಿವೃದ್ಧಿ ಕಾರ್ಯದ ಮುನ್ನೋಟವಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಆರೋಪಿಸಿದ್ದಾರೆ. ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು. ಎಲ್ಲೂ ಕೂಡ ದುಪ್ಪಟ್ಟು ಮಾಡಲು ಯೋಜನೆ ಹಾಕಿಕೊಂಡಿಲ್ಲ. ಕೇಂದ್ರ ಸರ್ಕಾರ ಈ ಸಲ ಕೃಷಿಗೆ 50 ಸಾವಿರ ಕೋಟಿ ರೂ‌ಪಾಯಿ ಅನುದಾನ ಕಡಿಮೆ ಮಾಡಿದ್ದಾರೆ….

Read More

ಕರ್ನಾಟಕ ಬಜೆಟ್ 2023-24 : ಸಂಪೂರ್ಣ ಮುಖ್ಯಾಂಶಗಳು

2023-24ನೇ ಸಾಲಿನ ಆಯವ್ಯಯ ಸನ್ಮಾನ್ಯ ಸಭಾಧ್ಯಕ್ಷರೆ, 1. 2023-24ನೇ ಸಾಲಿನ ಆಯವ್ಯಯವನ್ನು ಸದನದ ಮುಂದೆ ಮಂಡಿಸುತ್ತಿದ್ದೇನೆ. 2. ಕೋವಿಡ್ ನಂತರದ ದಿನಗಳಲ್ಲಿ ಜಾಗತಿಕ ಚೇತರಿಕೆಗಿಂತ ತೀವ್ರಗತಿಯಲ್ಲಿ ಭಾರತ ಪುಟಿದೆದ್ದಿದೆ. ಇದೇ ಹಾದಿಯಲ್ಲಿ ಕರ್ನಾಟಕವೂ ದೃಢವಾಗಿ ಮುನ್ನಡೆಯುತ್ತಿದೆ. 3. ಜಾಗತಿಕವಾಗಿ ಹಲವಾರು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಆರ್ಥಿಕ ಸ್ಥಿರತೆಗಾಗಿ ತೆಗೆದುಕೊಂಡ ಕ್ರಮಗಳ ಫಲವಾಗಿ ಭಾರತವು ಶೇ. 6.5 ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಿರುವುದು ಗಮನಾರ್ಹವಾಗಿದೆ. ಇದೇ ಸಂದರ್ಭದಲ್ಲಿ G-20…

Read More

ಇಂದು (17-02-2023) ರಿಪ್ಪನ್‌ಪೇಟೆಯಲ್ಲಿ ಹೊನಲು ಬೆಳಕಿನ ಖೋಖೋ ಪಂದ್ಯಾವಳಿ|KHOKHO

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಇಂದು(17-02-2023) ಸ್ವಾಮಿ ವಿವೇಕಾನಂದ ಖೋ ಖೋ ಗೆಳೆಯರ ಬಳಗದ ವತಿಯಿಂದ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಖೋಖೋ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪಟ್ಟಣದ ಶಿವಮೊಗ್ಗ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಖೋಖೋ ಕ್ರೀಡಾಪಟು ಪೃಥ್ವಿ ಸ್ಮರಣಾರ್ಥ ಅಂತರ್ ಜಿಲ್ಲಾ ಮಟ್ಟದ 4ನೇ ವರ್ಷದ ಹಗಲು,ಹೊನಲು-ಬೆಳಕಿನ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಖೋಖೋ ಕ್ರೀಡಾಪಟುಗಳು ಈ ಕ್ರೀಡಾಕೂಟಕ್ಕೆ ಭಾಗವಹಿಸುತಿದ್ದು ಅತ್ಯಂತ ರೋಚಕ ಪಂದ್ಯಾವಳಿಗಳು ನಡೆಯಲಿದೆ.

Read More

ರಿಪ್ಪನ್‌ಪೇಟೆ : KSRTC ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿ – ಗಂಭಿರ ಗಾಯಗೊಂಡಿದ್ದ ಬೈಕ್ ಸವಾರ ಮೆಗ್ಗಾನ್ ಗೆ ರವಾನೆ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗವಟೂರು ಬಳಿ ಚಲಿಸುತಿದ್ದ ಕೆ ಎಸ್ ಆರ್ ಟಿಸಿ ಬಸ್ ಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದು ಓರ್ವ ವ್ಯಕ್ತಿಗೆ ಗಂಭೀರ ಪೆಟ್ಟಾಗಿರುವ ಘಟನೆ ನಡೆದಿದೆ. ಬೈಕ್ ಸವಾರ ದಾನಪ್ಪ(68) ಗಂಭೀರ ಗಾಯಗೊಂಡಿದ್ದಾರೆ. ಭಟ್ಕಳ – ಬೆಂಗಳೂರು ಮಾರ್ಗದ ಕೆ ಎಸ್ ಆರ್ ಟಿಸಿ ಬಸ್ ಚಾಲಕ ಗವಟೂರು ಬಳಿ ಎದುರುಗಡೆ ವಾಹನ ಬಂದ ಹಿನ್ನಲೆಯಲ್ಲಿ ಬ್ರೇಕ್ ಹಾಕಿದ್ದಾನೆ ಹಿಂಬದಿ ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಬರುತಿದ್ದ ಚಾಲಕ ಬಸ್ ಗೆ…

Read More

ಅಧಿಕಾರಿಗಳೇ ನಡೆಸುತ್ತಿದ್ದ ಅಕ್ರಮ ನಾಟಾ ಸಾಗಾಟ ಪತ್ತೆ ಹಚ್ಚಿದ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್|FOREST

ಅಧಿಕಾರಿಗಳೇ ನಡೆಸುತ್ತಿದ್ದ ಅಕ್ರಮ ನಾಟಾ ಸಾಗಾಟ ಪತ್ತೆ ಹಚ್ಚಿದ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ಸೊರಬ: ಪಟ್ಟಣದಲ್ಲಿ ಹಳೇ ನಾಟಗಳನ್ನು ಅಕ್ರಮವಾಗಿ ಸಾಗಾಟಕ್ಕೆ ಸಿದ್ದವಾಗಿದ್ದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ. ಪಟ್ಟಣ ಪುರಸಭೆ ಮುಂಭಾಗದ ವಾಣಿಜ್ಯ ಸಂಕೀರ್ಣದ ದಾಸ್ತಾನು ಕೊಠಡಿಯಲ್ಲಿ ಪಟ್ಟಣದ ಹಳೇ ತಾಲೂಕು ಕಚೇರಿ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳ ನಾಟವನ್ನು ಸಂಗ್ರಹಿಸಲಾಗಿತ್ತು. ಆದರೆ ಅಕ್ರಮವಾಗಿ ಸಾಗಾಟ ಮಾಡುತ್ತಿವ ಖಚಿತ ಮಾಹಿತಿ ‌ಮೇರೆಗೆ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ಅವರ ತಂಡ…

Read More

ಸಿದ್ದರಾಮಯ್ಯ ವಿರುದ್ದ ವಿವಾದಿತ ಹೇಳಿಕೆ – ಸಚಿವ ಅಶ್ವಥ್ ನಾರಾಯಣ ಪೋಟೋ ಗೆ ಬೆಂಕಿ ಹಚ್ಚಿ ಆಕ್ರೋಶ|protest

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿವಾದಿತ ಹೇಳಿಕೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎಸ್. ಅಶ್ವಥನಾರಾಯಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ, ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಬಿ.ಹೆಚ್.ರಸ್ತೆಯ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದುರಹಂಕಾರಿ ಸಚಿವ ಡಾ.ಅಶ್ವತ್ಥನಾರಾಯಣ ಅವರು ಕೊಟ್ಟ ಪ್ರಚೋದನಕಾರಿ ಹೇಳಿಕೆಯಿಂದ ಸಿದ್ದರಾಮಯ್ಯ ಅವರಿಗಾಗಲೀ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗಾಗಲೀ ಆತಂಕ, ಆಶ್ಚರ್ಯವಾಗಿಲ್ಲ. ಏಕೆಂದರೆ…

Read More

ರಿಪ್ಪನ್‌ಪೇಟೆ : ಮುತ್ತೂಟ್ ವ್ಯಾಪಾರ ಸಾಲ ಯೋಜನೆಗೆ ಚಾಲನೆ|muthoot

ಮುತ್ತೂಟ್ ವ್ಯಾಪಾರ ಸಾಲ ಯೋಜನೆಗೆ ಚಾಲನೆ ರಿಪ್ಪನ್‌ಪೇಟೆ : ಸಹಕಾರ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಸಾಲ ಸೌಲಭ್ಯಗಳನ್ನು ಕಲ್ಪಸುವ ವ್ಯವಸ್ಥೆಯಿತ್ತು ತಂತ್ರಜ್ಞಾನ ಬೆಳದಂತೆ ಖಾಸಗಿ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ತುರ್ತು ವ್ಯವಹಾರ ನಡೆಸಲು ಅರ್ಥಿಕ ಸಾಲಸೌಲಭ್ಯ ಯೋಜನೆಯನ್ನು ಅನುಷ್ಠಾನಗೊಳಿಸಿರುತ್ತದೆ ಎಂದು ಮುತ್ತೂಟ್ ಸಂಸ್ಥೆಯ ಸಾಗರ ಶಿವಮೊಗ್ಗ ವಲಯಾಧಿಕಾರಿ ಚಂದ್ರಶೇಖರ್ ಹೇಳಿದರು. ರಿಪ್ಪನ್‌ಪೇಟೆಯ ಮುತ್ತೂಟ್ ಶಾಖಾ ಕಛೇರಿಯಲ್ಲಿ ಬುಧವಾರ “ವ್ಯಾಪಾರ ಸಾಲ ಯೋಜನೆಗೆ ಚಾಲನೆ ನೀಡಿ ಮಾತನಾಡಿ ಮುತ್ತೂಟ್ ಫಿನ್‌ಕಾರ್ಪ್‌ನ ವ್ಯಾಪಾರ ಸಾಲಗಳೊಂದಿಗೆ…

Read More

ಶಿವಮೊಗ್ಗ-ಆಯನೂರು ಹೆದ್ದಾರಿಯಲ್ಲಿ ಹಾಡಹಗಲೇ ಕಾರು ಅಡ್ಡಗಟ್ಟಿ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ದರೋಡೆ|Robbery

ಮಾರಿ ಜಾತ್ರೆಗೆ ಕಾರಿನಲ್ಲಿ ತೆರಳುತ್ತಿದ್ದ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ಹಾಡಹಗಲೇ ನಗ – ನಗದು ಅಪಹರಿಸಿರುವ ಆಘಾತಕಾರಿ ಘಟನೆ ಶಿವಮೊಗ್ಗ ಸಮೀಪ ನಡೆದಿದೆ. ಶಿವವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಬರುವ ಟ್ರೀಪಾರ್ಕ್​ನ ಸಮೀಪ ದರೋಡೆಯೊಂದು (Dacoity) ನಡೆದಿರುವ ಬಗ್ಗೆ ವರದಿಯಾಗಿದೆ. ತರಿಕೆರೆಯ ವಸಂತ್ ಎಂಬವರು ಕಾರಿನಲ್ಲಿ ಮಾರಿಜಾತ್ರೆಗೆ ಹೋಗುತ್ತಿದ್ದ  ವೇಳೆ ಅವರನ್ನು ಟ್ರೀಪಾರ್ಕ್​ ಬಳಿ ಅಡ್ಡಗಟ್ಟಲಾಗಿದೆ. ಕಾರಿನಲ್ಲಿ ಹೋಗುತ್ತಿದ್ದವರನ್ನ ತಡೆದು ಕುತ್ತಿಗೆಗೆ ಮಚ್ಚು ಹಿಡಿದು ಕ್ಯಾಶ್ ಹಾಗೂ ಚಿನ್ನವನ್ನು ದೋಚಿ ಹೋಗಿದ್ದಾರೆ.  ಮೂತ್ರ ವಿಸರ್ಜನೆಗೆ ಎಂದು ಕಾರು ನಿಲ್ಲಿಸಿದ್ದ…

Read More