POSTMAN NEWS

ನೈಜ ಸುದ್ದಿ ನೇರ ಬಿತ್ತರ..

Ripponpete | ಬೈಕ್ ಅಪಘಾತದಲ್ಲಿ ಯುವಕ ಸಾವು ಪ್ರಕರಣ – ಅಪಘಾತವೆಸಗಿ ಪರಾರಿಯಾಗಿದ್ದ ಕಾರನ್ನು ಪತ್ತೆ ಹಚ್ಚಿದ ಪೊಲೀಸರು

Ripponpete | ಬೈಕ್ ಅಪಘಾತದಲ್ಲಿ ಯುವಕ ಸಾವು ಪ್ರಕರಣ – ಅಪಘಾತವೆಸಗಿ ಪರಾರಿಯಾಗಿದ್ದ ಕಾರನ್ನು ಪತ್ತೆ ಹಚ್ಚಿದ ಪೊಲೀಸರು

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ವಡಗೆರೆ ಶಾಲೆಯ ಮುಂಭಾಗದಲ್ಲಿ  ಬೈಕ್ ಅಪಘಾತವಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಹಿಟ್ ಆಂಡ್ ರನ್ ಮಾಡಿದ್ದ ಕಾರನ್ನು ರಿಪ್ಪನ್‌ಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

 ಆವಿನಹಳ್ಳಿ ಸಮೀಪದ ಕುರುವಂತೆ ಗ್ರಾಮದ ನವೀನ್ ಕುಮಾರ್ ಇಂದು ಸಂಜೆ ವಡಗೆರೆ ಶಾಲೆ ಮುಂಭಾಗದಲ್ಲಿ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಆದರೆ ಅಪಘಾತ ಹೇಗೆ ನಡೆದಿದೆ ಎಂಬುವುದು ಸ್ಪಷ್ಟವಾಗಿರಲಿಲ್ಲ , ಕೆಲವೊಬ್ಬರು ಸ್ಕಿಡ್ ಆಗಿದೆ ,ಜಾನುವಾರು ಅಡ್ಡ ಬಂದಿದೆ ,ವಾಹನ ಡಿಕ್ಕಿಯಾಗಿದೆ ಎಂಬ ಊಹಾಪೋಹಗಳು ಎದ್ದಿದ್ದವು ಆದರೆ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳ ತಂಡ ಹಿಟ್ ಅಂಡ್ ರನ್ ಮಾಡಿದ್ದ ರಿಪ್ಪನ್‌ಪೇಟೆಯ ಮಾರುತಿ ಎರ್ಟಿಗಾ( KA15 P 0345) ಕಾರನ್ನು ಪತ್ತೆ ಹಚ್ಚಿ ಸೀಜ್ ಮಾಡುವುದರ ಮೂಲಕ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಮಾರುತಿ ಎರ್ಟಿಗಾ ಕಾರಿನ ಚಾಲಕ ಅಪಘಾತವೆಸಗಿ ಯುವಕ ಸಾವನ್ನಪ್ಪಿರುವುದನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದನು ಇದರಿಂದ ಯುವಕ ನವೀನ್ ಕುಮಾರ್ ಸಾವಿನ ಬಗ್ಗೆ ಹಲವಾರು ಅನುಮಾನಗಳು ಮೂಡಿತ್ತು.

ಒಟ್ಟಾರೆಯಾಗಿ ಅಪಘಾತ ನಡೆದು ಕೆಲವೇ ಘಂಟೆಗಳ ಅಂತರದಲ್ಲಿ ಪರಾರಿಯಾಗಿದ್ದ ಕಾರನ್ನು ಪತ್ತೆ ಹಚ್ಚಿರುವ ರಿಪ್ಪನ್‌ಪೇಟೆ ಪೊಲೀಸರ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.