POSTMAN NEWS

ನೈಜ ಸುದ್ದಿ ನೇರ ಬಿತ್ತರ..

ತೀರ್ಥಹಳ್ಳಿಯಲ್ಲಿ ಐಷಾರಾಮಿ ಕಾರುಗಳಲ್ಲಿ ದನಗಳ ಸಾಗಾಟ !?ವೀಡಿಯೋ ವೈರಲ್ | Crime News

ತೀರ್ಥಹಳ್ಳಿಯಲ್ಲಿ ಐಷಾರಾಮಿ ಕಾರುಗಳಲ್ಲಿ ದನಗಳ ಸಾಗಾಟ !?
ತೀರ್ಥಹಳ್ಳಿ : ಐಷಾರಾಮಿ ಕಾರುಗಳಲ್ಲಿ ದನಗಳನ್ನು
ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ಕಳೆದ 4 ದಿನಗಳಿಂದ ಪಟ್ಟಣದಲ್ಲಿ ಚರ್ಚೆ ಆಗುತ್ತಿದ್ದು ಅದಕ್ಕೆ ಪುಷ್ಟಿ ನೀಡುವಂತೆ ಇಂದು ವಿಡಿಯೋವೊಂದು ವೈರಲ್ ಆಗಿದೆ.

ಸೀಬಿನಕೆರೆಯ ನ್ಯಾಯಾಲಯದ ಮುಂಭಾಗ ಮಧ್ಯರಾತ್ರಿ ಹೈಟೆಕ್ ಕಾರ್ ನಲ್ಲಿ ದನಗಳನ್ನು ಸಾಗಣೆ ಮಾಡಲಾಗಿದೆ. ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಇದನ್ನೇ ಪ್ಲಸ್ ಮಾಡಿಕೊಂಡ ದನ ಸಾಗಾಣಿಕೆಕಾರರು ಕಾರುಗಳಲ್ಲಿ ಹಾಗೂ ಪಿಕಪ್ ಇತರೆ ವಾಹನಗಳಲ್ಲಿ ದನ ಸಾಗಣೆ ಮಾಡುವ ಮೂಲಕ ಜಾನುವಾರುಗಳ ಕಳ್ಳ ಸಾಗಾಟನೆ ಮಾಡುವ ಜಾಲ ಮತ್ತೆ ಸಕ್ರಿಯವಾದಂತೆ ಕಾಣಿಸುತ್ತಿದೆ.


ಶುಕ್ರವಾರ ರಾತ್ರಿ 2:30 ವೇಳೆಗೆ ಬಾಳೇಬೈಲಿನಲ್ಲಿ ದನವನ್ನು ಕಾರಿನಲ್ಲಿ ತುಂಬುತ್ತಿರುವ ವೇಳೆ ಸ್ಥಳೀಯರು ನೋಡಿದ್ದಾರೆ. ನಂತರ ಅವರನ್ನು ಹಿಡಿಯಲು ಹೋದಾಗ ಕಾರಿನಲ್ಲಿ ಪರಾರಿಯಾಗಿದ್ದಾರೆ. ಈಗ ಇದಕ್ಕೆ ಪುಷ್ಟಿ ನೀಡುವಂತೆ ವಿಡಿಯೋವೊಂದು ವೈರಲ್ ಆಗಿದ್ದು ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.