w
Headlines
Home » ಸಂಸದ ಬಿ ವೈ ರಾಘವೇಂದ್ರ ಮನೆಯ ರಸ್ತೆಯಲ್ಲಿ ಪುನುಗು ಬೆಕ್ಕಿನ ದೇಹ ಪತ್ತೆ – ವಾಮಾಚಾರದ ಶಂಕೆ!!!|black magic

ಸಂಸದ ಬಿ ವೈ ರಾಘವೇಂದ್ರ ಮನೆಯ ರಸ್ತೆಯಲ್ಲಿ ಪುನುಗು ಬೆಕ್ಕಿನ ದೇಹ ಪತ್ತೆ – ವಾಮಾಚಾರದ ಶಂಕೆ!!!|black magic

ಸಂಸದ ಬಿ ವೈ ರಾಘವೇಂದ್ರ ಮನೆಯ ರಸ್ತೆಯಲ್ಲಿ ಪುನುಗು ಬೆಕ್ಕಿನ ದೇಹ ಪತ್ತೆ – ವಾಮಾಚಾರದ ಶಂಕೆ!!!

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮತ್ತೆ ವಾಮಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿಂದೆ ವಿಧಾನಸಭಾ ಚುನಾವಣೆ ಅವಧಿಯಲ್ಲಿ ಶಿಕಾರಿಪುರದಲ್ಲಿ ವಾಮಾಚಾರದ ಸದ್ದು ಭಾರೀ ಕೇಳಿ ಬಂದಿತ್ತು. 

ಕಳೆದ ವಿಧಾನಸಭಾ ಚುನಾವಣೆಯ ವೇಳೆ ಸಂಸದ ಬಿವೈ ರಾಘವೇಂದ್ರರವರ ತೋಟದಲ್ಲಿ ಪುನಗು ಬೆಕ್ಕೊಂದು ಕೊಂದು ಹೂತು ಹಾಕಿ ವಾಮಾಚಾರ ಪ್ರಯೋಗ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.

ಇದೀಗ ಬಿವೈ ರಾಘವೇಂದ್ರ ಅವರ ಮನೆಯನ್ನು ಸಂಪರ್ಕಿಸುವ ರಸ್ತೆಯಲ್ಲೇ ಪುನುಗು ಬೆಕ್ಕಿನ ಮೃತದೇಹ ಪತ್ತೆಯಾಗಿರೋದು ಆತಂಕ ಮೂಡಿಸಿದೆ.

ಅಪಘಾತವಾದ ಸ್ಥಿತಿಯಲ್ಲಿ ಪುನುಗು ಬೆಕ್ಕಿನ ದೇಹ ಪತ್ತೆಯಾಗಿದ್ದು, ಸದ್ಯ ಅದರ ಫೋಟೋವನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಶೇರ್ ಮಾಡ್ತಿದ್ದಾರೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪುನುಗು ಬೆಕ್ಕಿನ ಮೂಲಕ ವಾಮಾಚಾರ ಮಾಡಿಸಿದ್ದರು ಎಂಬ ವಿಚಾರ ತಣ್ಣಗಾಗುತ್ತಿರುವಾಗಲೇ ಈಗ ಮತ್ತೊಮ್ಮೆ ಪುನಗು ಬೆಕ್ಕು ಪ್ರತ್ಯಕ್ಷವಾಗಿದೆ.

ಶಿಕಾರಿಪುರ ಪಟ್ಟಣದ ಸಾಲೂರು ರಸ್ತೆಯ ರಾಘವೇಂದ್ರ ಅವರ ತೋಟಕ್ಕೆ ಹೋಗುವ ದಾರಿಯಲ್ಲಿ ಪುನಗು ಬೆಕ್ಕು ಪತ್ತೆಯಾಗಿದ್ದು, ಈ ಹಿಂದೆ ಪತ್ತೆಯಾಗಿದ್ದಾಗ ‘ನಮ್ಮ ತೋಟದ ಮನೆ ಬಳಿ ಚುನಾವಣೆಯಲ್ಲಿ ವಿಜಯೇಂದ್ರ ಸೋಲಬೇಕು ವಾಮಾಚಾರ ಮಾಡಿದ್ದಾರೆ’ ಎಂದು ಆರೋಪಿಸಿ ಬಿವೈ ರಾಘವೇಂದ್ರ ಅವರು ದೂರು ನೀಡಿದ್ದರು. 

ಈ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.