ಸೆಲ್ಪಿ ತೆಗೆಯಲು ಹೋಗಿ ನೀರುಪಾಲಾದ ಯುವಕ – ಅಗ್ನಿಶಾಮಕ ದಳದಿಂದ ತೀವ್ರ ಶೋಧ ಕಾರ್ಯಾಚರಣೆ
ಕೊಲ್ಲೂರು ಅರಶಿನ ಗುಂಡಿ ಫಾಲ್ಸ್ನ ಘಟನೆ ಕಣ್ಮುಂದೆ ಇರುವಾಗಲೇ ಶಿವಮೊಗ್ಗ ಇನ್ನೊಬ್ಬ ಯುವಕ ನೀರಿಗೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ತುಂಗಾ ಡ್ಯಾಂನ ಎದುರು , ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ತಡವಾಗಿ ವರದಿಯಾಗಿದ್ದು, ನಿನ್ನೆಯಿಡಿ ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಇವತ್ತು ಕೂಡ ಹುಡುಕಾಟ ಮುಂದುವರಿಸುವ ಸಾಧ್ಯತೆ ಇದೆ.
ಗಾಜನೂರು ಜಲಾಶಯದ ಮೇಲೆ ಹೋಗಲು ಅವಕಾಶ ನೀಡಲಾಗಿಲ್ಲ. ಆದರೆ ಚಾನಲ್ ಪಕ್ಕದಲ್ಲಿ ಹೋದರೇ ಡ್ಯಾಂನ್ನ ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು ಅಲ್ಲದೆ, ಅಲ್ಲಿರುವ ಕಾಮಗಾರಿ ಸೇತುವೆಯ ಮೇಲೆ ಪ್ರವಾಸಿಗರು ಓಡಾಡುವುದು ಸಾಮಾನ್ಯ ಸಂಗತಿಯಾಗಿದೆ. ಅಲ್ಲಿಯೇ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ಧಾರೆ.
ನಾಪತ್ತೆಯಾಗಿರುವ ಯುವಕನ್ನು ಮಿಳಘಟ್ಟ ಮೂಲದವನು ಎನ್ನಲಾಗಿದ್ದು ಹರೀಶ್ ಎಂದು ತಿಳಿದುಬಂದಿದೆ. ಈತನಿಗಾಗಿ ಗಾಜನೂರು ಡ್ಯಾಂ ಗೇಟ್ನಿಂದ ಮುಂಭಾಗದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ತುಂಗಾನಗರ ಪೊಲೀಸರು ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿ ಇವತ್ತು ಕೂಡ ಸರ್ಚ್ ಆಪರೇಷನ್ ನಡೆಸುವ ಸಾಧ್ಯತೆ ಇದೆ.