ಲೋಕಕಲ್ಯಾಣಾರ್ಥ ಕೋಣಂದೂರು ಶ್ರೀಗಳಿಂದ ಶಿಖರದಲ್ಲಿ ಏಕಪಾದ ಶಿವಜಪಾನುಷ್ಠಾನ|konanduru shri

ಲೋಕಕಲ್ಯಾಣಾರ್ಥ ಕೋಣಂದೂರು ಶ್ರೀಗಳಿಂದ ಶಿಖರದಲ್ಲಿ ಏಕಪಾದ ಶಿವಜಪಾನುಷ್ಠಾನ
ರಿಪ್ಪನ್‌ಪೇಟೆ;-ಸಮೀಪದ ಕೋಣಂದೂರು ಶ್ರೀ ಶಿವಲಿಂಗೇಶ್ವರ ಬೃಹನ್ಮಠದ ಪಟ್ಟಾಧ್ಯಕ್ಷರಾದ ಷ.ಬ್ರ.ಶ್ರೀಪತಿ ಪಂಡಿತರಾಧ್ಯ ಶಿವಚಾರ್ಯ ಮಹಾಸ್ವಾಮಿಗಳು ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಗ್ರಾಮದ ಶ್ರೀ ಸಕ್ರಿ ಸಿದ್ದೇಶ್ವರ ದೇವಸ್ಥಾನದಲ್ಲಿ ಸಕ್ರಿ ಸಿದ್ದೇಶ್ವರ ಕರ್ತೃ ಗದ್ದುಗೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಸಧ್ಬಕ್ತರ ಶ್ರಯೋಭಿವೃದ್ದಿಗಾಗಿ ಅಗಸ್ಟ್ 5 ರಿಂದ 13 ರವರೆಗೆ ~ಏಕಪಾದ ಶಿವಪೂಜಾ ಮೌನ ಶಿವಜಪಾನುಷ್ಠಾನ ಧಾರ್ಮಿಕ ಕೈಂಕರ್ಯವನ್ನು  ಕೈಗೊಂಡಿದ್ದಾರೆ.

ಏಕಪಾದ ಶಿವಜಪಾನುಷ್ಠಾನ ಮಂಗಲ ಸಮಾರಂಭದಲ್ಲಿ ತರೀಕರೆ ನಗರ ಹಿರೇಮಠದ ಪಟ್ಟಾಧ್ಯಕ್ಷರಾದ ಷ.ಬ್ರ.ಜಗದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಸಕ್ರಿ ಸಿದ್ದೇಶ್ವರ ಸ್ವಾಮಿಗೆ ವಿಶೇಷ ರುದ್ರಾಭಿಷೇಕ ಹಾಗೂ ರುದ್ರಹೋಮದೊಂದಿಗೆ ಕೋಣಂದೂರು ಬೃಹನ್ಮಠದ ಶ್ರೀಗಳಿಗೆ `ಕರಣಪ್ರಸಾದ’ ನೀಡಿ ಶಿವಜಪಾನುಷ್ಠಾನ ಕಾರ್ಯವನ್ನು ಮಂಗಲಗೊಳಿಸುವರು.

ನಂತರ ಧರ್ಮ ಸಮಾರಂಭ ಕಾರ್ಯಕ್ರಮದ ವೀರಾಪುರ ಹಿರೇಮಠದ ಷ.ಬ್ರ.ಮರಳಸಿದ್ದೇಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಷ.ಬ್ರ.ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು.

ಸಾಲೂರು ಹಿರೇಮಠದ ಷ.ಬ್ರ.ಗುರುಲಿಂಗ ಜಂಗಮ ಶಿವಾಚಾರ್ಯ ಮಹಾಸ್ವಾಮಿಜಿ,ಕಡೇನಂದಿಹಳ್ಳಿ ಹೋಳಿನ ಹಂಪೇಶ್ವರ ಮಠದ ಷ.ಬ್ರ.ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಜಿ,ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾ ಸ್ವಾಮೀಜಿ ಸಮ್ಮುಖ ವಹಿಸಿ ನುಡಿ ಸೇವೆ ಸಲ್ಲಿಸುವರು.

ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಸಂಸದ ಬಿ.ವೈ.ರಾಘವೇಂದ್ರ,ಶಾಸಕ ಬಿ.ವೈ.ವಿಜೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರೆಂದು ಶ್ರೀಸಕ್ರಿಸಿದ್ದೇಶ್ವರ ದೇವಸ್ಥಾನ ಸಮಿತಿಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *