w
Headlines
Home » ರಿಪ್ಪನ್‌ಪೇಟೆ : ಜುಮ್ಮಾ ಮಸೀದಿ‌ ಮುಂಭಾಗದಲ್ಲಿ ಬಾರ್ ತೆರೆಯಲು ಯತ್ನ – ಸ್ಥಳದಲ್ಲಿ ಪ್ರಕ್ಷ್ಯುಬ್ದ ವಾತಾವರಣ|Ripponpet news

ರಿಪ್ಪನ್‌ಪೇಟೆ : ಜುಮ್ಮಾ ಮಸೀದಿ‌ ಮುಂಭಾಗದಲ್ಲಿ ಬಾರ್ ತೆರೆಯಲು ಯತ್ನ – ಸ್ಥಳದಲ್ಲಿ ಪ್ರಕ್ಷ್ಯುಬ್ದ ವಾತಾವರಣ|Ripponpet news

ರಿಪ್ಪನ್‌ಪೇಟೆ : ಜುಮ್ಮಾ ಮಸೀದಿ‌ ಮುಂಭಾಗದಲ್ಲಿ ಬಾರ್ ತೆರೆಯಲು ಯತ್ನ – ಸ್ಥಳದಲ್ಲಿ ಪ್ರಕ್ಷ್ಯುಬ್ದ ವಾತಾವರಣ

ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಂಭಾಗದ ಖಾಸಗಿ ಲಾಡ್ಜ್ ವೊಂದರಲ್ಲಿ ವಿರೋಧದ ನಡುವೆಯೂ ಬಾರ ತೆರೆಯಲು ಹೊರಟಿರುವ ಮಧ್ಯದ ಅಂಗಡಿಗೆ ಸಾರ್ವಜನಿಕರಿಂದ ಬಾರಿ ವಿರೋಧ ವ್ಯಕ್ತವಾಗಿದೆ.ಸ್ಥಳದಲ್ಲಿ ಪ್ರಕ್ಷ್ಯುಬ್ದ ವಾತವರಣ ನಿರ್ಮಾಣವಾಗಿದೆ.


ಪಟ್ಟಣದ ಜುಮ್ಮಾ ಮಸೀದಿ ಮುಂಭಾಗದ ಖಾಸಗಿ ಕಟ್ಟಡ ಒಂದರಲ್ಲಿ ನೂತನವಾಗಿ ಸಿ ಎಲ್ 7 ಮದ್ಯದ ಅಂಗಡಿ ತೆರೆಯುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮದ್ಯದ ಲೋಡ್ ನ್ನು ಇಳಿಸುತ್ತಿದ್ದಾಗ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮದ್ಯ ತುಂಬಿದ್ದ ವಾಹನವನ್ನು ತಡೆ ಹಿಡಿದಿದ್ದಾರೆ. 

ಸ್ಥಳದಲ್ಲಿ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಲಾಡ್ಜ್ ಮುಂಭಾಗದಲ್ಲಿ ನೆರೆದಿದ್ದು ಯಾವುದೇ ಕಾರಣಕ್ಕೂ ಜುಮ್ಮಾ ಮಸೀದಿ ಮುಂಭಾಗದಲ್ಲಿ ನೂತನ ಮಧ್ಯದಂಗಡಿ ಪ್ರಾರಂಭಿಸಬಾರದು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಸ್ಥಳಕ್ಕೆ ಡಿ ವೈ ಎಸ್ ಪಿ ಗಜಾನನ ವಾಮನಸುತರ ಆಗಮಿಸಿದ್ದಾರೆ,ಮತ್ತೊಮ್ಮೆ ಅಬಕಾರಿ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಯೊಂದಿಗೆ ಜಂಟಿ ಸರ್ವೆ ನಡೆಸುವಂತೆ ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ.ಸ್ಥಳದಲ್ಲಿ ಪ್ರಕ್ಷ್ಯುಬ್ದ ವಾತವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.