POSTMAN NEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್‌ಪೇಟೆ : ಒಂದೇ ರಾತ್ರಿಯಲ್ಲಿ ಮೂರು ಕಡೆ ಲಕ್ಷಾಂತರ ರೂ ಮೌಲ್ಯದ ರಬ್ಬರ್ ಶೀಟ್ ಕಳ್ಳತನ|theft

ರಿಪ್ಪನ್‌ಪೇಟೆ : ಒಂದೇ ರಾತ್ರಿಯಲ್ಲಿ ಮೂರು ಕಡೆ ಲಕ್ಷಾಂತರ ರೂ ಮೌಲ್ಯದ ರಬ್ಬರ್ ಶೀಟ್ ಕಳ್ಳತನ
ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ವಿವಿದೆಡೆ  ಒಣಗಲು ಹಾಕಿದ್ದ 4 ಕ್ವಿಂಟಲ್ ಗೂ ಅಧಿಕ  ರಬ್ಬರ್ ಶೀಟ್ ಗಳನ್ನು ಬುಧವಾರ ರಾತ್ರಿ ಕಳ್ಳರು ಅಪಹರಿಸಿದ್ದಾರೆ.

ಬೆಳಂದೂರು ಗ್ರಾಮದ ಬಿ.ಟಿ. ಪ್ರಕಾಶ್ ಅವರ ಮನೆಯಲ್ಲಿ 160 ಕೆ.ಜಿ. ಹಾಗೂ  ಪುಟ್ಟಸ್ವಾಮಿಗೌಡ ಅವರ ಮನೆಯಲ್ಲಿ 150 ಕೆಜಿ  ಕೆ ಜಿ, ತಳಲೆ ಜಾರ್ಜ್ ಅವರ ಮನೆಯಲ್ಲಿ 50 ಕೆಜಿ,ಗವಟೂರು ಗ್ರಾಮದ  ಅಲೆಕ್ಸ್ ಎಂಬುವವರ  50 ಮನೆಗಳಿಂದ  ಸರಾಸರಿ 400 ಕೆ.ಜಿ. ಗೂ ಅಧಿಕ ರಬ್ಬರ್ ಶೀಟ್  ಕಳ್ಳತನವಾದ ಕುರಿತು ಒಂದೇ ದಿನ ಠಾಣೆಯಲ್ಲಿ ದೂರು ದಾಖಲಾಗಿದೆ. 

ಸಿಸಿಟಿವಿ ಅಳವಡಿಕೆಗೆ  ಸಲಹೆ :  ರಬ್ಬರ್ ಕಳ್ಳತನದ ಕುರಿತು ದೂರು ದಾಖಲಿಸಲು ಬಂದ ದೂರುದಾರರಿಗೆ  ರಿಪ್ಪನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ  380ಕ್ಕೂ ಅಧಿಕ ಹಳ್ಳಿಗಳು ಬರುತ್ತವೆ. ಕೇವಲ 16 ಮಂದಿ ಸಿಬ್ಬಂದಿಗಳು ಮಾತ್ರ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳ್ಳತನ ಪ್ರಕರಣಗಳು ಶೀಘ್ರವೇ ಪತ್ತೆಹಚ್ಚಲು ಸಹಕಾರಿಯಾಗುವಂತೆ ತಮ್ಮ ತಮ್ಮ ಮನೆಗಳಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳುವಂತೆ ಪಿಎಸ್ಐ ಪ್ರವೀಣ್ ಎಸ್ ಪಿ ಸಲಹೆ ನೀಡಿದ್ದಾರೆಂದು ದೂರುದಾರರಲ್ಲೊಬ್ಬರು ಮಾಹಿತಿ ನೀಡಿದ್ದಾರೆ.


Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.