w
Headlines
Home » ಈ ಬಾರಿ ಯಾವುದೇ ಆಪರೇಷನ್ ಇಲ್ಲದೇ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ – ಸಂಸದ ಬಿ ವೈ ರಾಘವೇಂದ್ರ|BYR

ಈ ಬಾರಿ ಯಾವುದೇ ಆಪರೇಷನ್ ಇಲ್ಲದೇ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ – ಸಂಸದ ಬಿ ವೈ ರಾಘವೇಂದ್ರ|BYR

ರಿಪ್ಪನ್‌ಪೇಟೆ : ಈ ಬಾರಿ ಯಾವುದೇ ಆಪರೇಷನ್ ಇಲ್ಲದೇ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು




ಪಟ್ಟಣದಲ್ಲಿ ಮೇ 10 ರಂಧು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿ ಹರತಾಳು ಹಾಲಪ್ಪ ಪರ ಮತಯಾಚಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ ಈ ಬಾರಿ ಯಾವುದೇ ಗೊಂದಲವಿಲ್ಲದೇ ಬಿಜೆಪಿ ಸರ್ಕಾರ ರಚಿಸಲಿದೆ, ಯಡಿಯೂರಪ್ಪನವರ ನಕ್ಷತ್ರದಲ್ಲಿಯೇ ಬರೆದಿತ್ತು ಆಪರೇಷನ್ ನಡೆಸಿಯೇ ಸರ್ಕಾರ ರಚಿಸಬೇಕಾಗಿತ್ತು ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ ಎಂದು ಹೇಳಿದರು.

ಸಾಗರ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಹರತಾಳು ಹಾಲಪ್ಪ ಶ್ರಮಿಸಿದ್ದಾರೆ.ಈ ಭಾರಿಯಲ್ಲಿ ಅವರನ್ನು ಗೆಲಿಸುವುದರಿಂದ ಇನ್ನೂ ಹೆಚ್ಚಿನ ಅಭಿವೃದ್ದಿಯಾಗುವುದರೊಂದಿಗೆ ಬಗರ್ ಹುಕುಂ ಸಮಸ್ಯೆ ಅರಣ್ಯ ಒತ್ತುವರಿದಾರರ ಸಮಸ್ಯೆಗೆ ಶಾಸನ ಸಭೆಯಲ್ಲಿ ದ್ವನಿ ಎತ್ತುವುದರೊಂದಿಗೆ ಶಾಶ್ವತ ಪರಿಹಾರ ಕಲ್ಪಿಸುವರೆಂದು ಹೇಳಿ ಮೇ. 10 ರಂದು ನಡೆಯುವ ಚುನಾವಣೆಯಲ್ಲಿ ಕಮಲದ ಚಿಹ್ನೆಗೆ ಮತ ನೀಡುವಂತೆ ಮನವಿ ಮಾಡಿದರು.


ಸಭೆಯಲ್ಲಿ ಶಾಸಕ ಹಾಗೂ ಅಭ್ಯರ್ಥಿ ಹರತಾಳು ಹಾಲಪ್ಪ ಮಾಜಿ ಶಾಸಕ ಬಿ.ಸ್ವಾಮಿರಾವ್, ಎ.ಟಿ.ನಾಗರತ್ನಮ್ಮ, ಸುರೇಶ್‌ಸ್ವಾಮಿರಾವ್, ಬಿಜೆಪಿಮುಖಂಡರಾದ ಡಾ.ರಾಜಾನಂದಿನಿ,ತಲ್ಲೂರು ರಾಜು,ಕೆರೆಕೈ ಪ್ರಸನ್ನ,ಗಣಪತಿಬೆಳಗೋಡು,ಎಂ.ಬಿ.ಮಂಜುನಾಥ,ಮಂಜುಳಕೇತಾರ್ಜಿರಾವ್, ಬಿ.ಯುವರಾಜ್,ವೀರೇಶ್‌ಅಲುವಳ್ಳಿ,ಬೆಳ್ಳೂರು ತಿಮ್ಮಪ್ಪ,ಹೊನಗೋಡು ರತ್ನಾಕರ್,ಸುರೇಶ್‌ಸಿಂಗ್,ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.















Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.