w
Headlines
Home » SAGARA|ಬೈಕ್ ಗೆ ಲಾರಿ ಡಿಕ್ಕಿ – ಮಹಿಳೆ ಸ್ಥಳದಲ್ಲಿಯೇ ಸಾವು

SAGARA|ಬೈಕ್ ಗೆ ಲಾರಿ ಡಿಕ್ಕಿ – ಮಹಿಳೆ ಸ್ಥಳದಲ್ಲಿಯೇ ಸಾವು

ಬೃಹತ್​ ಲಾರಿಯ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸಂಭವಿಸಿದೆ. ನಿನ್ನೆ ಬೆಳಗ್ಗೆ ಸಾಗರ ಪೇಟೆಯ ಐಬಿ ವೃತ್ತದ ಸಮೀಪ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಬೆಳಲಮಕ್ಕಿ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ.




ನಗರದ ಷಾಹಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಬೆಳಲಮಕ್ಕಿಯ 34ವರ್ಷದ ಪದ್ಮಾ ಅವರನ್ನು ಬೈಕ್‌ನಲ್ಲಿ ಅವರ ಮೈದುನ ರಘು ಕರೆದೊಯ್ಯುತ್ತಿದ್ದಾಗ ಬೃಹತ್ ಲಾರಿ ಹಿಮ್ಮುಖವಾಗಿ ಚಲಿಸಿದಾಗ ಬೈಕ್ ಉರುಳಿದೆ. ಈ ಸಂದರ್ಭದಲ್ಲಿ ಲಾರಿಯ ಚಕ್ರ ಪದ್ಮಾ ಅವರ ಮೇಲೆ ಹರಿದು ತೀವ್ರವಾಗಿ ಗಾಯಗೊಂಡಿದ್ದರು.




ತಕ್ಷಣ ಅವರನ್ನು ನಗರದ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದರು.

ರಘು ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 

ಚಾಲಕನ ವಿರುದ್ಧ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.













Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.