ಹೆರಿಗೆ ವಾರ್ಡ್ ನಲ್ಲಿ 6 ತಿಂಗಳ ಮಗುವನ್ನು ಬಿಟ್ಟು ಮಹಿಳೆ ನಾಪತ್ತೆ…!!!!
ಶಿವಮೊಗ್ಗದ ಮೆಗ್ಗಾನ್ ಹೆರಿಗೆ ವಾರ್ಡ್ ಗೆ ಬಂದಿದ್ದ ಅಪರಿಚಿತ ಮಹಿಳೆ ವಾರ್ಡ್ ನಲ್ಲಿದ್ದ ಮಹಿಳೆಯೊಬ್ವರ ಕೈಯಲ್ಲಿ ಮಗುವನ್ನ ನೀಡಿ ದಿಡೀರನೆ ಕಣ್ಮರೆಯಾಗಿರುವ ಘಟನೆ ನಡೆದಿದೆ. ಮೆಗ್ಗಾನ್ ಹೆರಿಗೆ ವಾರ್ಡ್ ನಲ್ಲಿ ಹೊರಗಿನಿಂದ ಬಂದ ಮಹಿಳೆಯೊಬ್ಬಳು ಶೌಚಾಲಯಕ್ಕೆ ಹೋಗಿ ಬರುವೆ ಎಂದು ಹೇಳಿ ವಾರ್ಡ್ ನಲ್ಲಿದ್ದ ಮಹಿಳೆಯೊಬ್ಬಳಿಗೆ ಮಗುವನ್ನ ನೀಡಿ ಹೋಗಿದ್ದಾಳೆ. ಮಗುವನ್ನ ಎತ್ತುಕೊಂಡವರು ಕಳೆದ ಮೂರು ಗಂಟೆಯಿಂದ ಕಾದರೂ ಮಗುವನ್ನ ನೀಡಿದ ಮಹಿಳೆ ವಾಪಾಸ್ ಬರಲೇ ಇಲ್ಲ. ಆ ತಾಯಿ ಯಾಕೆ ಹೀಗೆ ಮಾಡಿದ್ದಾಳೋ, ಬಡತನವೋ ಗೊತ್ತಿಲ್ಲ….