ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ತೀರ್ಥಹಳ್ಳಿ ಕಾಂಗ್ರೆಸ್ ನ ಜೋಡೆತ್ತುಗಳ ವಾಗ್ದಾಳಿ|RMM-KIMMANE

ತೀರ್ಥಹಳ್ಳಿ : ಜನರಿಂದ ಆಯ್ಕೆಯಾದಂತಹ ಒಬ್ಬ ಜನಪ್ರತಿನಿಧಿಯನ್ನು ಒಬ್ಬ ಅಧಿಕಾರಿ ಹೊಡಿಯುತ್ತಾರೆ ಅಂದ್ರೆ ಏನರ್ಥ ? ಜ್ಞಾನೇಂದ್ರ ಗೆ ವಿಧಾನಸಭೆಯಲ್ಲಿ ಯಾವುದಾದರೂ ಅಧಿಕಾರಿ ಹೊಡೆದರೆ ಅದರ ಉತ್ತರ ಏನು ?ಒಬ್ಬ ಅಧಿಕಾರಿ ಆರಗ ಜ್ಞಾನೇಂದ್ರ ಅವರಿಗೆ ಹೊಡೆದರೆ ಅವರನ್ನು ಅಧಿಕಾರದಲ್ಲಿ ಇಡುತ್ತಾರ ಇವರಿಗೆ ಕಾಮನ್ ಸೆನ್ಸ್ ಬೇಡವಾ ? ನನ್ನ ಅನಿಸಿಕೆ ಜ್ಞಾನೇಂದ್ರರಂತವರಿಗೆ ಅಧಿಕಾರ ಕೊಟ್ಟಿದ್ದೆ ತಪ್ಪು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ಪಿಡಿಓ ಅವರನ್ನು ಕೆಲಸದಿಂದ ತೆಗೆಯಬೇಕು ಎಂದು ಮಂಗಳವಾರ…

Read More

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೊಟ್ಟಮೊದಲ ವಿಮಾನ|airport

ಶಿವಮೊಗ್ಗದ ಸೋಗಾನೆಯ ನೂತನ ಕುವೆಂಪು ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಇವತ್ತು ಮಧ್ಯಾಹ್ನ ಬಂದಿಳಿದಿದೆ. ಪ್ರಾಯೋಗಿಕವಾಗಿ ವಾಯು ಸೇನೆಯ ಬೋಯಿಂಗ್ ವಿಮಾನ ಸೋಗಾನೆಯ ಕುವೆಂಪು ವಿಮಾನ ನಿಲ್ದಾಣದ ರನ್ ವೇಯಲ್ಲಿ ಬಂದಿಳಿದಿದ್ದು ಯಾವುದೇ ಅಡೆತಡೆ ಉಂಟಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ವಾಯು ಸೇನೆಯ ಬೋಯಿಂಗ್ 737 – 7HI ಮಾದರಿಯ ವಿಮಾನ ಇಂದು ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದೆ. ಮಧ್ಯಾಹ್ನ 12 ಗಂಟೆಗೆ ಈ ವಿಮಾನ ದೆಹಲಿಯಿಂದ ಹೊರಟಿತ್ತ್ತು. ಮಧ್ಯಾಹ್ನ 2.30ರ ಹೊತ್ತಿಗೆ ವಿಮಾನ ಲ್ಯಾಂಡ್…

Read More

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಸಂಪುಟ ನಿರ್ಧಾರ|airport

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸೋಮವಾರ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ. ಈ ಹಿಂದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಕುವೆಂಪು ಅವರ ಹೆಸರನ್ನು ಪ್ರಸ್ತಾಪಿಸಿದ್ದರು.  ’20ನೇ ಶತಮಾನ ಕಂಡ ಈ ದೇಶದ ಶ್ರೇಷ್ಠ ಕವಿ. ಜ್ಞಾನಪೀಠ ಪ್ರಶಸ್ತಿ ಪಡೆದವರು. ರಾಜ್ಯದ ಗೀತೆಯನ್ನು ರಚಿಸಿದ ರಾಷ್ಟ್ರಕವಿ ಕುವೆಂಪು ಅವರ…

Read More

ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕಿದ್ದ ನಾಲ್ವರ ಹೆಡೆಮುರಿ ಕಟ್ಟಿದ ಪೊಲೀಸರು|robbery

ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಶಿವಮೊಗ್ಗ ನಗರದ ವಿನೋಬನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾರಕಾಸ್ತ್ರಗಳೊಂದಿಗೆ ಒಬ್ಬಂಟಿಯಾಗಿ ಬರುವ ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಖತರ್ ನಾಕ್ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಬಸವನ ಗಂಗೂರು ಚಾನೆಲ್ ಮೇಲೆ ಬೊಮ್ಮನ್ ಕಟ್ಟೆಯ ಅನಿಲ್ ಕುಮಾರ್(42), ಕೋಹಳ್ಳಿಯ ಶಿವನಾಯ್ಕ (34), ಆಯನೂರಿನ ಶಿವಕುಮಾರ್ (45) ಮತ್ತು ಸಿರಿಗೆರೆಯ ಖಲೀಂ ಬಂಧಿತ ಆರೋಪಿಗಳು. ಈ ದರೋಡೆ ಸಂಚಿನ ಬಗ್ಗೆ ಮಾಹಿತಿ ತಿಳಿದ ವಿನೋಬನಗರ ಪಿಎಸ್ಐ ಸಾಗರ್ಕರ್ ನೇತೃತ್ವದಲ್ಲಿ ಪೊಲೀಸರ ತಂಡ…

Read More

ಫೆ.24 ರ ಶುಕ್ರವಾರ ಶ್ರೀಕ್ಷೇತ್ರ ಹೊಂಬುಜಾಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ – ಹುಂಚದಕಟ್ಟೆಯಲ್ಲಿ ಗ್ರಾಮ ವಾಸ್ತವ್ಯ|JDS

ತೀರ್ಥಹಳ್ಳಿ : ಫೆ 23 ಮತ್ತು 24 ರಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯಲಿದ್ದು ಫೆ.24 ರ ಶುಕ್ರವಾರ ಶ್ರೀ ಕ್ಷೇತ್ರ ಹೊಂಬುಜಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಫೆ.23 ರಂದು ಹುಂಚದಕಟ್ಟೆ ಗ್ರಾಮದಲ್ಲಿ ರಾತ್ರಿ ಗ್ರಾಮ ವಾಸ್ತವ್ಯ ಹೂಡಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಶುಕ್ರವಾರ ಬೆಳಿಗ್ಗೆ ನಿಟ್ಟೂರು ನಾರಾಯಣ ಗುರು ಮಠಕ್ಕೆ ಭೇಟಿ ನೀಡಿ ನಂತರ ಹೊಂಬುಜಾ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಕುಮಾರಸ್ವಾಮಿಯವರ ಪಂಚರತ್ನ ರಥಯಾತ್ರೆ ಸಾಗುವುದು…

Read More

ಶಿವ ನಾಮ ಸ್ಮರಣೆಯಿಂದ ಸಂಕಷ್ಟ ಪರಿಹಾರ – ಮಳಲಿ ಶ್ರೀಗಳು|shivarathri

ಶಿವ ನಾಮಸ್ಮರಣೆಯಿಂದ ಸಂಕಷ್ಟ ಪರಿಹಾರ – ಮಳಲಿ ಶ್ರೀಗಳು ರಿಪ್ಪನ್‌ಪೇಟೆ : ಸಂಸ್ಕೃತಿ ಸಂಸ್ಕಾರ ಪ್ರತಿಯೊಬ್ಬರು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕು ನೆಮ್ಮದಿಯಿಂದ ಕೂಡಿರುತ್ತದೆ. ಶಿವರಾತ್ರಿಯ ದಿನ ಮಾತ್ರ ಶಿವನಾಮಸ್ಮರಣೆ ಮಾಡಿದರೆ ಸಾಲದು ನಿತ್ಯ ಶಿವಮಂತ್ರ ಪಠಿಸುವುದರಿಂದ ಸಂಕಷ್ಟ ಹರಿಹಾರವಾಗುವುದು ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡಯ ಇತಿಹಾಸ ಪ್ರಸಿದ್ದ ಹಾಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಮಹಾಶಿವರಾತ್ರಿಯ ಅಂಗವಾಗಿ ಹಾಲೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಧರ್ಮಸಭೆಯ…

Read More

ತುಂಗಾ ನದಿಯಲ್ಲಿ ಯುವಕನ ಶವ ಪತ್ತೆ – ಆತ್ಮಹತ್ಯೆ ಶಂಕೆ|TUNGA

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನಾನಿ ಬಳಿಯ ಹಿಂಭಾಗದ ತುಂಗಾ ನದಿಯಲ್ಲಿ ಭಾನುವಾರ ತೆಂಗಿನ ಕೊಪ್ಪದ ಯುವಕನ ಶವ ಪತ್ತೆಯಾಗಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಜತ್(26) ಮೃತಪಟ್ಟ ಯುವಕ. ಸಾಲೂರು ಹೊಸಮನೆ ತೆಂಗಿನಕೊಪ್ಪದ ಪ್ರಜತ್  4 ವರ್ಷದ ಹಿಂದೆ ಹಾವು ಕಚ್ಚಿದ ಕಾರಣ ತಾಯಿಯನ್ನು ಕಳೆದುಕೊಂಡಿದ್ದರು ಹಾಗೂ ತಂದೆ ಕೂಡ ಕ್ಯಾನ್ಸರ್ ರೋಗಕ್ಕೆ ಇತ್ತೀಚಿಗೆ ಬಲಿಯಾಗಿದ್ದರು. ಪ್ರಜತ್ ಸಾಲದ ಕಾರಣ ಹಾಗೂ ಒಳ್ಳೆಯ ಉದ್ಯೋಗ ಇಲ್ಲದ ಕಾರಣ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗುತ್ತಿದೆ….

Read More

ಕಾಂಬೋಡಿಯಾದಲ್ಲಿ ತೀರ್ಥಹಳ್ಳಿ ಟೆಕ್ಕಿ ಒತ್ತೆ|software engineer

ತೀರ್ಥಹಳ್ಳಿ : ಸಾಫ್ಟ್‌ವೇರ್‌(software) ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ತೀರ್ಥಹಳ್ಳಿಯ ಟೆಕ್ಕಿಯೊಬ್ಬರನ್ನು ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿ ಇರಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ವಿಷಯ ಕೇಂದ್ರ ಸರಕಾರದ ಅಂಗಳಕ್ಕೆ ತಲುಪಿದೆ. ತೀರ್ಥಹಳ್ಳಿಯ ಕಿರಣ್‌ ಶೆಟ್ಟಿ ಅವರಿಗೆ ಥಾಯ್ಲ್ಯಾಂಡ್(thayland) ಕಂಪೆನಿಯಲ್ಲಿ ಉದ್ಯೋಗ ಹಾಗೂ ಒಳ್ಳೆಯ ಸಂಬಳದ ಭರವಸೆ ನೀಡಲಾಗಿತ್ತು. ಇದನ್ನು ನಂಬಿದ ಕಿರಣ್‌ ಕಾಂಬೋಡಿಯಾಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಬಳಿಕ ಅವರನ್ನು ಒತ್ತೆಯಾಳಾಗಿಟ್ಟುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕಿರಣ್‌ ಶೆಟ್ಟಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಚಿಕ್ಕ ಮಗು ಕೂಡ ಇದೆ. ಈಗ…

Read More

ರಿಪ್ಪನ್‌ಪೇಟೆ : ಸಡಗರ, ಸಂಭ್ರಮ ಹಾಗೂ ಶ್ರದ್ದಾಭಕ್ತಿಯಿಂದ ಜರುಗಿದ ಮಹಾಶಿವರಾತ್ರಿಯ ಧಾರ್ಮಿಕ ಕಾರ್ಯಕ್ರಮ|shivarathri

ರಿಪ್ಪನ್‌ಪೇಟೆ : ಮಹಾಶಿವರಾತ್ರಿಯ ಅಂಗವಾಗಿ ಪಟ್ಟಣದ ಸಿದ್ದಪ್ಪನಗುಡಿಯ ಶ್ರೀ ಕಂತೆ ಸಿದ್ದೇಶ್ವರ ದೇವಸ್ಥಾನ,ಬರುವೆ ಈಶ್ವರ ದೇವಸ್ಥಾನ, ಮುಡುಬ ಈಶ್ವರ ದೇವಸ್ಥಾನ,ಗವಟೂರು ರಾಮೇಶ್ವರ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯಿಂದ ವಿಶೇಷ ಪೂಜಾ ಕಾರ್ಯಕ್ರಮವು ಜರುಗಿದವು.ಮುಂಜಾನೆಯಿಂದಲೇ ಭಕ್ತರು ಗ್ರಾಮದಲ್ಲಿನ ದೇವಸ್ಥಾನಗಳಿಗೆ ತೆರಳಿ ಪೂಜಾ ಸೇವೆಯನ್ನು ನೆರವೇರಿಸಿದರು. ಸಿದ್ದಪ್ಪನಗುಡಿಯ ಶ್ರೀ ಕಂತೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀಕಂತೆ  ಸಿದ್ದೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರುದ್ರಾಭಿಷೇಕ ಪೂಜೆಗೆ ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದರು,ಮಧ್ಯಾಹ್ನ ಎಲ್ಲಾ ಭಕ್ತಾಧಿಗಳಿಗೂ ಸಾಮೂಹಿಕ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕ ಹಾಗೂ ಕೆಪಿಸಿಸಿ…

Read More

ರಿಪ್ಪನ್‌ಪೇಟೆ : 396 ನೇ ಶಿವಾಜಿ ಜಯಂತಿ ಆಚರಣೆ

ರಿಪ್ಪನ್‌ಪೇಟೆ : ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾದರಿ. ಭಾರತೀಯರ ಕಣ ಕಣದಲ್ಲೂ ಶಿವಾಜಿಯ ಆದರ್ಶ ಗುಣಗಳು ಕರಗತವಾಗಬೇಕು. ಸಂಸ್ಕಾರಯುತ ಸಮಾಜದ ನಿರ್ಮಾಣದಲ್ಲಿ ಶಿವಾಜಿಯ ಹೋರಾಟದೊಂದಿಗೆ ಆತನಿಗೆ ಸ್ಫೂರ್ತಿ ನೀಡಿದ್ದ ತಾಯಿ ಜೀಜಾಬಾಯಿಯ ಕೊಡುಗೆಯೂ ಸ್ಮರಣೀಯ ಎಂದು ರಿಪ್ಪನ್‌ಪೇಟೆ ಮರಾಠ ಸಮಾಜದ ಅಧ್ಯಕ್ಷ ನಾಗೇಶ್ ಹೊಸಮನೆ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಂದು ಪಟ್ಟಣದ ಸಾಗರ ರಸ್ತೆಯ ಶಿವಾಜಿ ಸರ್ಕಲ್  ನಡೆದ ಶಿವಾಜಿ ಜಯಂತಿ ಆಚರಣೆಯಲ್ಲಿ ಮಾತನಾಡಿ ಪರಕೀಯರ ಅಟ್ಟಹಾಸದಿಂದ ಭಾರತವನ್ನು ರಕ್ಷಿಸುವಲ್ಲಿ…

Read More