w
Headlines
Home » ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು|airport

ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು|airport


ಶಿವಮೊಗ್ಗ : ಇಂದು ಅದ್ಧೂರಿಯಾಗಿ ನಡೆದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಸೊರಬ ತಾಲೂಕಿನ ಚಿಮ್ಮನೂರು ಗ್ರಾಮದ ಮಲ್ಲಿಕಾರ್ಜುನಪ್ಪ (50) ಎಂಬವರೇ ಮೃತಪಟ್ಟವರು.

ಸೊರಬದ ಕಡೆಯಿಂದ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಇತರರು ಕಾರ್ಯಕ್ರಮಕ್ಕೆ ಬಂದಿದ್ದರು. ಮಲ್ಲಿಕಾರ್ಜುನ ಅವರು ಬೆಳಗ್ಗೆ ಗ್ರಾಮಸ್ಥರೊಂದಿಗೆ ಬಸ್ಸಿನಲ್ಲಿ ಬಂದಿದ್ದರು. ಕಾರ್ಯಕ್ರಮ ಮುಗಿಸಿ ವಾಪಸಾಗುವಾಗ ಸೋಗಾನೆ ಗ್ರಾಮದ ಕೆಇಬಿ ಕಚೇರಿ ಹತ್ತಿರ ಮಲ್ಲಿಕಾರ್ಜುನ ಅವರು ಅಸ್ವಸ್ಥರಾದರು.



ಬಾಯಾರಿಕೆಯಿಂದ ನೀರು ಕೇಳಿದ್ದ ಮಲ್ಲಿಕಾರ್ಜುನ ಅವರು ತಕ್ಷಣವೇ ಸಮೀಪದ ಕೋಳಿ ಫಾರಂಗೆ ಹೋಗಿ ನೀರು ಕುಡಿದಿದ್ದರು. ನೀರು ಕುಡಿದು ವಿಶ್ರಾಂತಿ ಪಡೆಯುವಾಗ ಅಲ್ಲೇ ಅಸ್ವಸ್ಥರಾಗಿ ಸಾವು ಸಂಭವಿಸಿತು.

ಗ್ರಾಮಸ್ಥರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದೀಗ ಸಾವಿಗೆ ಕಾರಣವಾದ ಅಂಶ ಯಾವುದು ಎನ್ನುವುದರ ಬಗ್ಗೆ ಮಾಹಿತಿ ದೊರೆಯಬೇಕಾಗಿದೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.