ರಿಪ್ಪನ್‌ಪೇಟೆ;- ಜೈನ ಬೀಜಾಕ್ಷರಿ ಮಂತ್ರವನ್ನು ನಿತ್ಯ ಪಠಣಮಾಡುವುದರಿಂದ ನಮಗೆ ಎದುರಾಗಿರುವ ನೂರೆಂಟು ಸಮಸ್ಯೆಗಳು ಪರಿಹಾರವಾಗುವುದು ಎಂದು ರಾಷ್ಟ ಸಂತ ಅಚಾರ್ಯ 108 ಗುಣಧರನಂದಿ ಮುನಿಮಹಾರಾಜರು ಹೇಳಿದರು.
ಸಮೀಪದ ಹೊಂಬುಜ ಅತಿಶಯ ಮಹಾಷೇತ್ರದಲ್ಲಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಮಹೋತ್ಸವದ ಶುಕ್ರವಾರ ಕೊನೆಯ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯವಹಿಸಿ ಅಶೀರ್ವಚನ ನೀಡಿ ಹೊಂಬುಜ ಜೈನಮಠದಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವು ದೇವರಾಯ ಇಂದ್ರ ಸಾಕ್ಷಾತ್ಕಾರ ಮಾಡಿದಂತಾಗಿದ್ದು ಈ ಪುಣ್ಯ ಕಾರ್ಯ ಜನಮಾನಸದಲ್ಲಿ ನುರಾರು ವರ್ಷ ಕಾಲ ಉಳಿಯುವಂತಾಗಿದೆ ಎಂದು ಭಾವಿಸಿದ್ದು ಜೈನ ಬೀಜಾಕ್ಷರ ಮಂತ್ರ ಪಠಣದಿಂದ ಅನಂತ ಶಕ್ತಿ ವೃದ್ದಿಯಾಗುವುದು ಮತ್ತು ಸಂಕಷ್ಟಗಳು ಪರಿಹಾರವಾಗುವವು ಎಂದು ಹೇಳಿದರು.
ಜೈನ ಇತಿಹಾಸ ತತ್ವ ಹೊಂದಿದ ಕುತುಬ್‌ಮೀನಾರ್‌ನಂತೆ ಜಗತ್ತಿನಲ್ಲಿ ಜೈನ ಮೌಲ್ಯ ತತ್ವ ಎರಡು ಪಟ್ಟು 451 ಅಡಿ ಎತ್ತರದ ಸುಮೇರು ಪರ್ವತ ನಿರ್ಮಾಣವಾಗುತ್ತಿದ್ದು ಬರುವ ಜುಲೈನಲ್ಲಿ ಸ್ಥಾಪನೆಗೊಳ್ಳಲಿದೆ ಎಂದ ಅವರು ಮಾತೆ ಪದ್ಮಾವತಿಯಲ್ಲಿ ಬೇಡುತ್ತೇನೆ ಹೊರತು ಬೇರೆವರಲ್ಲಿ ಬೇಡುವುದಿಲ್ಲ ಜಗನ್ಮಾತೆ ತಾಯಿ ಕರುಣಿಸಿದರಲ್ಲಿ ತೃಪ್ತಿಪಡುತ್ತೇನೆ ಎಂದರು.
ಮುಸ್ಲಿಂ.ಕ್ರಿಶ್ಚಿಯನ್ ಮತ್ತು ಜೈನ ದರ್ಮದವರನ್ನು ಸರ್ಕಾರ ಅಲ್ಪಸಂಖ್ಯಾತರೆಂದು ಪರಿಗಣಿಸಿ 400 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದರೂ ಕೂಡಾ ನಮ್ಮ ಜೈನ ಸಮಾಜದ ಬಡವರಿಗೆ 400 ರೂಪಾಯಿ ಸಹ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಕಲಿಯುಗದ ಮಂತ್ರ ಶಕ್ತಿಯ ಕೇಂದ್ರವಾಗಿ ಹೊಂಬುಜ ಪದ್ಮಾವತಿ ದೇವಿ ನೆಲೆಸಿ ಭಕ್ತರ ಇಷ್ಟಾರ್ಥವನ್ನು ಪರಿಹರಿಸುತ್ತಿದ್ದಾಳೆಂದರು.
ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಪದ್ಮರಾಜ ಎನ್.ದೇಸಾಯಿ,ಡಾ.ಜೀವಂಧರಜೈನ,ಇಂಪಾಲ್ ವಿಜಯಪಾಟ್ನಿ,ಧನ್ಯಕುಮಾರ ಗುಂಡೆ,ವಿಜಯಕುಚನೂರೆ,ಆಶೋಕ ಪಾಪಡಿವಾಲ್,ರಜನೀಶ್‌ಜೈನ್,ಶಿವಮೊಗ್ಗ ದಿಗಂಬರ ಜೈನ ಸಂಘದ ಅಧ್ಯಕ್ಷ ಪ್ರಭಾಕರಗೋಗಿ,ಭದ್ರಾವತಿ ದಿಗಂಬರ ಜೈನ ಸಂಘದ ಅದ್ಯಕ್ಷ ಪ್ರಕಾಶಚಂದ್‌ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

- ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್