ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲ್ಲಲು ಸಿದ್ದರಾಮಯ್ಯನವರ ಕಾಣಿಕೆಯೂ ಇದೆ : ಕೆ ಎಸ್ ಈಶ್ವರಪ್ಪ
ಶಿವಮೊಗ್ಗ: ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಮೂವರ ಗೆಲುವು ಸಾಧಿಸಿದ್ದಾರೆ. ಮೋದಿ ಅವರಿಗೆ ರಾಜ್ಯ ನಿಮ್ಮ ಜೊತೆ ಇದೆ ಎನ್ನುವ ಸಂದೇಶ ಈ ಫಲಿತಾಂಶದಿಂದ ರವಾನೆಯಾಗಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ರಾಜ್ಯಸಭೆ ಚುನಾವಣಾ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೂರನೇ ಅಭ್ಯರ್ಥಿ ಗೆಲ್ಲಲ್ಲು ಸಿದ್ದರಾಮಯ್ಯ ಪಾತ್ರ ಪ್ರಮುಖವಾಗಿದೆ. ಮೂರನೇ ಅಭ್ಯರ್ಥಿ ಗೆಲ್ಲಲು ಕಾಂಗ್ರೆಸ್ ನೇರ ಕಾರಣ. ಈ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ಪಕ್ಷವನ್ನು ಯಾರೂ…