ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ತೀವ್ರ ನಿಗಾ ಘಟಕ ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ
ತೀರ್ಥಹಳ್ಳಿ: ತಾಲೂಕಿನ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದ ಕೊರತೆಯಿತ್ತು. ಅದರಲ್ಲಿ ಮುಖ್ಯವಾಗಿ ಐಸಿಯು ಸಮಸ್ಯೆ ಮತ್ತು ಆಸ್ಪತ್ರೆಯ ಐಸಿಯು ತೀವ್ರ ನಿಗಾ ಘಟಕ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯು ಮಳೆಯಿಂದ ಸೋರುತ್ತಿದ್ದು ಈ ಕೊಠಡಿ ಸೋರದಂತೆ ಮೇಲ್ಛಾವಣಿ ಶೀಟ್‌ಗಳನ್ನು ಅಳವಡಿಸಿಲಾಗಿದ್ದು ಅದನ್ನು ಮಂಗಳವಾರ ಗೃಹಸಚಿವ ಆರಗ ಜ್ಞಾನೇಂದ್ರ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಸಚಿವರು ನನಗೆ ಇದೊಂದು ಸಂತೋಷದ ವಿಚಾರ. ಸಾರ್ವಜನಿಕ ಆಸ್ಪತ್ರೆಗೆ ಹಣ ಬಿಡುಗಡೆ ಮಾಡಿಸುವ ಮತ್ತು ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಪ್ರಯತ್ನ ನೆಡೆಯುತ್ತಿದೆ….