ಸ್ವಾಮೀಜಿಗಳು, ಪ್ರೇಕ್ಷಕರೊಂದಿಗೆ ಕುಟುಂಬ ಸಮೇತ ‘ದಿ ಕಾಶ್ಮೀರ ಫೈಲ್ಸ್’ ವೀಕ್ಷಿಸಿದ ಈಶ್ವರಪ್ಪ : ಎರಡು ದಿನ ಉಚಿತ ವೀಕ್ಷಣೆಗೆ ವ್ಯವಸ್ಥೆ
ಶಿವಮೊಗ್ಗ: ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ದಿ ಕಾಶ್ಮೀರ ಫೈಲ್ಸ್’ ಚಿತ್ರದ ಉಚಿತ ಪ್ರದರ್ಶನಕ್ಕೆ ಅನೇಕ ಕಡೆ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಅವರ ಪುತ್ರ ಕೆ.ಇ.ಕಾಂತೇಶ್ ಅವರು ‘ದಿ ಕಾಶ್ಮೀರ ಫೈಲ್ಸ್’ ಉಚಿತ ವೀಕ್ಷಣೆಗೆ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಉಚಿತ ವ್ಯವಸ್ಥೆ ಮಾಡಿದ್ದು, ಹೆಚ್ಚಿನ ಸಂಖ್ಯೆಯ ಜನ ಸಿನಿಮಾ ನೋಡಿದ್ದಾರೆ. ಸಚಿವ ಈಶ್ವರಪ್ಪ ಅವರು ಪತ್ನಿ ಹಾಗೂ ಕುಟುಂಬ ಸಹಿತ ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಕುಂಚಿಟಿಗರ ಸಂಸ್ಥಾನದ ಸ್ವಾಮೀಜಿ ಅವರೊಂದಿಗೆ…