Headlines

ನವೆಂಬರ್‌ ಅಂತ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ : ಬಿ ವೈ ರಾಘವೇಂದ್ರ

 ರಾಜ್ಯದ ಮಧ್ಯಭಾಗದಲ್ಲಿರುವ ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಂಡು ನವೆಂಬರ್‌ ಮಾಸಾಂತ್ಯಕ್ಕೆ ಲೋಕಾರ್ಪಣೆಗೊಳಿಸಲು ಅಗತ್ಯವಿರುವ ಎಲ್ಲಾ ತಯಾರಿಗಳು ನಡೆದಿವೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. ಶುಕ್ರವಾರ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಈ ಅವಧಿಯೊಳಗಾಗಿ ವಿಮಾನ ನಿಲ್ದಾಣಕ್ಕೆ ಅಗತ್ಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯವೂ ಭರದಿಂದ ಸಾಗಿದೆ. ಅಲ್ಲದೆ ಟರ್ಮಿನಲ್‌ ಕಟ್ಟಡ ಮತ್ತಿತರ ಎಲ್ಲಾ ಸೌಲಭ್ಯಗಳೂ…

Read More

ಸಾಗರದ ಹೆಸರಾಂತ ದಂತ ವೈದ್ಯೆ ಡಾ| ವಿದ್ಯಾ ಪ್ರಕಾಶ್ ವಿಧಿವಶ :

ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರದ ಹೆಸರಾಂತ ದಂತ ವೈದ್ಯೆ ಸದಾ ಹಸನ್ಮುಖಿ ಶ್ರೀಮತಿ ವಿದ್ಯಾ ಪ್ರಕಾಶ್ ರವರು ಇಂದು ಸಂಜೆ ತಮ್ಮ ಸ್ವ ಗೃಹದಲ್ಲಿ  ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇವರ ಸಾವಿಗೆ ಸಾಗರದ ಜನಪ್ರತಿನಿದಿಗಳು ಹಾಗೂ ಮಹಾ ಜನತೆ ತೀವ್ರ ಸಂತಾಪ ಸೂಚಿಸಿದ್ದಾರೆ.  ಪಟ್ಟಣದ ಚಾಮರಾಜ ಪೇಟೆಯಲ್ಲಿ ನಗರಸಭೆ ಕಾಂಪ್ಲೆಕ್ಸ್ ಎದುರು ಪ್ರಕಾಶ್ ಕ್ಲಿನಿಕ್ ನಲ್ಲಿ ದಂತ ವೈದ್ಯೆಯಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದರು.ಮೃತರ ಪತಿ ಪ್ರಕಾಶ್ ಕೂಡ ಇದೆ ಕ್ಲಿನಿಕ್ ನಲ್ಲಿ ಚರ್ಮ ವೈದ್ಯರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ಅವರ…

Read More

ಅದ್ದೂರಿಯಾಗಿ ಜರುಗಿದ ಕ್ಷತ್ರಿಯ ಸಮುದಾಯದ ಮೂಲಪುರುಷ ಶ್ರೀ ವೀರ ರುದ್ರ ವನ್ನಿಕುಲ ಮಹಾರಾಜರ ಜಯಂತಿ:

ಶಿವಮೊಗ್ಗ : ಕರುನಾಡು ರಾಜ್ಯ ವನ್ನಿಯಕುಲ ಕ್ಷತ್ರೀಯ ಮಹಾಸಭಾದ ರಾಜ್ಯ ಸಂಘದ ವತಿಯಿಂದ ಶುಕ್ರವಾರ ಎಂ ಆರ್ ಎಸ್ ಸರ್ಕಲ್ ನ ಇಂಜಿನಿಯರ್ ಸಭಾಂಗಣದಲ್ಲಿ  ವನ್ನಿಕುಲ ಕ್ಷತ್ರೀಯ ಸಮುದಾಯದ ಮೂಲಪುರುಷ ಶ್ರೀ ವೀರರುದ್ರ ವನ್ನಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ  ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ರೀ ಕೆ ನಂದಕುಮಾರ್ ಗೌಂಡರ್ ಮಾತನಾಡಿ ಇಲ್ಲಿಯವರೆಗೂ ನಮ್ಮ ಸಮುದಾಯದವರು ಜಯಂತಿ ಆಚರಣೆಯನ್ನು ಮಾಡುತ್ತಿರಲಿಲ್ಲ ಆದರೆ ಕರುನಾಡು ರಾಜ್ಯ ವನ್ನಿಯಕುಲ ಕ್ಷತ್ರೀಯ ಮಹಾಸಭಾ ಉದಯದ ನಂತರ ಈ ಆಚರಣೆಯನ್ನು ಕಳೆದ ವರ್ಷದಿಂದ…

Read More

ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಬೇಟಿ ರದ್ದು : ಅದೇ ದಿನ ಮುಖ್ಯಮಂತ್ರಿ ಬೊಮ್ಮಾಯಿ ಆಗಮನ

ಜಿಲ್ಲೆಯ ಜನತೆ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ರದ್ದಾಗಿದೆ. ಶಿವಮೊಗ್ಗ ಸಮೀಪದ ಹೊಳಲೂರು ಗ್ರಾಪಂನಲ್ಲಿ ಪಂಚಾಯತ್‌ರಾಜ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 24 ರಂದು ಆಗಮಿಸಬೇಕಿತ್ತು. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಹಿರಿಯ ಅಧಿಕಾರಿಗಳು ಕೂಡ ಸಿದ್ಧತೆ ಪರಿಶೀಲನೆ ನಡೆಸಿದ್ದರು. ಆದರೆ ಪ್ರಧಾನಿ ಅವರು ಅಂದು ಭೇಟಿ ಕೊಡುವ ಕಾರ್ಯಕ್ರಮ ರದ್ದಾಗಿದೆ. ಪಂಚಾಯತ್‌ ರಾಜ್‌ ದಿನವಾದ ಹಿನ್ನೆಲೆಯಲ್ಲಿ ಆ ದಿನ ಪ್ರಧಾನಿಯವರು ಪಂಚಾಯತ್‌ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲು…

Read More

ಖಾಸಗಿ ಬಸ್ ಪಲ್ಟಿಯಾಗಿ ಐವರ ಧಾರುಣ ಸಾವು,35ಕ್ಕೂ ಹೆಚ್ಚು ಮಂದಿಗೆ ಗಾಯ : ಘಟನೆಯ ಬಗ್ಗೆ ಅಘಾತ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಜನರಿಂದ ತುಂಬಿದ್ದ ಖಾಸಗಿ ಚಾಲಕನ ನಿಯಂತ್ರಣ ಮೀರಿ ರಸ್ತೆಯಲ್ಲಿ ಉರುಳಿ ಬಿದ್ದ ಪರಿಣಾಮ ಕನಿಷ್ಠ 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ಬಸ್ಸಿನಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಇದ್ದರು ಎನ್ನಲಾಗಿದ್ದು, ಬೆಳಗ್ಗೆ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿ ಸಹಿತ ಇತರ ಕೆಲಸಗಳಿಗೆ ತೆರಳುವ ಜನ ಕೂಡಾ ಇದೇ ಬಸ್ಸನ್ನು ಅವಲಂಬಿಸಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ಮಾರ್ಗದಲ್ಲಿ ಜನರ…

Read More

ಆನೆಗಳ ಉಪಟಳ ನಿಯಂತ್ರಣಕ್ಕೆ ಕ್ರಮ : ಗೃಹಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ ಸಮೀಪದ ಶಿಂಗನಬಿದರೆ, ತಳಲೆ, ಕೀಗಡಿ ಮತ್ತು ಮಂಡಗದ್ದೆ ಗ್ರಾಮಗಳ ಸುತ್ತಮುತ್ತಲಿನ ತೋಟಗಳಲ್ಲಿ ಆನೆಗಳ ಹಾವಳಿಯಿಂದಾಗಿ ರೈತರು ಬೆಳೆದ ಅಡಿಕೆ ಗಿಡಗಳು ಹಾನಿಗೊಳಗಾಗಿದ್ದು, ಅದರ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗಜ್ಞಾನೇಂದ್ರ ಅವರು ಹೇಳಿದರು. ಅವರು ಇಂದು ಆನೆಗಳಿಂದ ಹಾನಿಗೊಳಗಾದ ಕೀಗಡಿ ಗ್ರಾಮದ ರೈತರ ತೋಟಕ್ಕೆ ಅರಣ್ಯಾಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಅವರು, ಈಗಾಗಲೇ ಆನೆಗಳನ್ನು ಅರಣ್ಯಕ್ಕೆ ಹಿಂದಿರುಗಿಸಲು ಅರಣ್ಯಾಧಿಕಾರಿಗಳು ಕಳೆದ ೨ವಾರಗಳಿಂದ ಕಾರ್ಯಾಚರಣೆ ನಡೆಸಿದ್ದಾರೆ. ಈ…

Read More

ಹೊಸನಗರದ ದಕ್ಷ ಪಿಎಸ್ ಐ ರಾಜೇಂದ್ರನಾಯ್ಕ್ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ:

ಹೊಸನಗರ :- ತಾಲ್ಲೂಕಿನಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಗೆ‌ ಹೆಸರಾಗಿರುವ ಪಿ.ಎಸ್.ಐ ರಾಜೇಂದ್ರನಾಯ್ಕ್ ರವರನ್ನು ಯಾವುದೇ ಕಾರಣಕ್ಕೂ ವರ್ಗಾಯಿಸಬಾರದು ಎಂದು ಸಾರ್ವಜನಿಕರಿಂದ ತಾಲ್ಲೂಕು ದಂಡಾಧಿಕಾರಿ (ತಹಶಿಲ್ದಾರ್) ಮೂಲಕ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಾರ್ವಜನಿಕರಿಂದ ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್ ರವರಿಗೆ ಸಲ್ಲಿಸಿದ ಮನವಿಯಲ್ಲಿ ತಾಲ್ಲೂಕಿನಾಧ್ಯಂತ ಮರಳು ಮಾಫಿಯವಾಗಲಿ, ಡ್ರಕ್ಸ್ ಮಾಫಿಯಾ, ಹೆಣ್ಣುಮಕ್ಕಳಿಗೆ ಕೆಲಸದ ಆಮಿಷ ತೋರಿಸಿ ಅನೈತಿಕ ಸಂಬಂಧಗಳಿಗೆ ಬಳಸುವಂತಹಾ ಕ್ರೂರಿಗಳಿಗೆ, ಕಲ್ಲು ಕೋರೆ, ಗಾಂಜಾ ಸೇರಿದಂತೆ ವಿವಿಧ ರೀತಿಯ ಕಳ್ಳ ದಂದೆಯಲ್ಲಿ ತೊಡಗಿದವರಿಗೆ…

Read More

ಅದ್ದೂರಿಯಾಗಿ ನಡೆಯಿತು ರಿಪ್ಪನ್ ಪೇಟೆಯ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಪ್ರತಿಷ್ಠಾವರ್ಧಂತಿ ಮಹೋತ್ಸವ

ರಿಪ್ಪನ್‍ಪೇಟೆ:-ಇಲ್ಲಿನ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ  19ನೇ ವರ್ಷದ ಪ್ರತಿಷ್ಠಾವರ್ಧಂತಿ ಮಹೋತ್ಸವವು ಸುಸಂಪನ್ನ ಗೊಂಡಿತು.  ಹರತಾಳು ರಾಘವೇಂದ್ರಸ್ವಾಮಿ ಮಠದ ಪ್ರಧಾನ ಅರ್ಚಕರು ಮತ್ತು ದೇವಸ್ಥಾನದ ಅರ್ಚಕ ವೃಂದದವರಿಂದ ಇಂದು ಬೆಳಗ್ಗೆ ನಾಗದೇವರ ಸನ್ನಿಧಿಯಲ್ಲಿ ಕಲಾ ಹೋಮ ನವಕಪ್ರದಾನ ಕಳಸ ಕಲಶಾಭಿಷೇಕ ಆದಿವಾಸ ಹೋಮ ಪವಮಾನ ಅಭಿಷೇಕ ಆಶ್ಲೇಷ ಬಲಿ ಹಾಗೂ ರಕ್ತೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ದುರ್ಗಾ ಹೋಮ ಕಲಶಾಭಿಷೇಕ ಮಹಾಪೂಜೆ ತೀರ್ಥಪ್ರಸಾದ ವಿನಿಯೋಗ ಜರುಗಿತು. ಈ ಸಂದರ್ಭದಲ್ಲಿ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಪ್ರತಿಷ್ಟಾಪನೆಗೂ ಮೊದಲು…

Read More

25ಕ್ಕೂ ಅಧಿಕ ಗೋವುಗಳಿಗೆ ವಿಷವಿಕ್ಕಿ ಹತ್ಯೆಗೈದ ಯಡೂರಿನ ನಟೋರಿಯಸ್ ಗೋಹಂತಕ…….!!!!!!?

ಹೊಸನಗರ ತಾಲ್ಲೂಕಿನ ಯಡೂರು ಗ್ರಾಮದಲ್ಲಿ ನಟೋರಿಯಸ್ ಗೋಹಂತಕನೊಬ್ಬ ಗೋವುಗಳನ್ನು ವಿಷವುಣಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಲಸಿನ ಹಣ್ಣಿನ ಒಳಗೆ ವಿಷ ಹಾಕಿ ಅಮಾಯಕ ಮೂಕಪ್ರಾಣಿಗಳನ್ನು ಹತ್ಯೆ ಮಾಡಿರುವ ದಾರುಣ್ಯ ಘಟನೆ ಮಲೆನಾಡಿನ ಯಡೂರು ಗ್ರಾಪಂ ವ್ಯಾಪ್ತಿಯ ಸುಳುಕೋಡು ಗ್ರಾಮದಲ್ಲಿ ನಡೆದಿದೆ. ಜಾನುವಾರು ನುಗ್ಗಿದೆ ಎಂದು ತೋಟದ ಮಾಲೀಕನೊಬ್ಬ ನಮ್ಮ ಜಾನುವಾರಿಗೆ ವಿಷ ಹಾಕಿದ್ದಾರೆ  ಎಂಬುದಾಗಿ ಜಾನುವಾರು ಮಾಲೀಕರಾದ ಯಡೂರು ಗ್ರಾಮದ ಲತಾ ಎಂಬುವವರು  ಆರೋಪಿಸಿದ್ದಾರೆ. ಈಗಾಗಲೇ ನಾಲ್ಕೈದು ದನಗಳು  ಸಾವನ್ನಪ್ಪಿದ್ದು  ಕೆಲವು 2ದಿನಗಳಿಂದ ವಿಷ ಉಂಡು…

Read More

ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ :

ಹೊಸನಗರ: ಕೋಡೂರು, ಹುಂಚ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ಅವ್ಯವ್ಯಸ್ಥೆಯಿಂದಾಗಿ ರೈತರ ಬೆಳೆಗಳು ಒಣಗುವಂತಾಗಿದೆ ಮತ್ತು ವಿದ್ಯುತ್ ಇಲ್ಲದೆ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅಡಚಣೆಯಾಗಿದೆ ಎಂದು ಆರೋಪಿಸಿ ಇಂದು ಕೋಡೂರು, ಹುಂಚ ವ್ಯಾಪ್ತಿಯ ರೈತರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಕಲಗೋಡು ರತ್ನಾಕರ ಮತ್ತು ತಾ.ಪಂ.ಮಾಜಿ ಸದಸ್ಯ ಚಂದ್ರಮೌಳಿಗೌಡ ನೇತೃತ್ವದಲ್ಲಿ ಹೊಸನಗರದ ಮೆಸ್ಕಾಂ ಕಛೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್ ರೈತರ ಸಮಸ್ಯೆಗೆ ಮೆಸ್ಕಾಂ ಇಲಾಖೆ ಸ್ಪಂದಿಸಿ…

Read More