ಮಹಿಳೆ ಇಂದು ಅಬಲೆಯಲ್ಲ ಅವಳು ಸಬಲೆಯಾಗಿದ್ದಾಳೆ : ಕೆಪಿಸಿಸಿ ವಕ್ತಾರೆ ಪ್ರಪುಲ್ಲಾ ಮಧುಕರ್
ಹೊಸನಗರ :- ಮಹಿಳೆ ಎಂದಿಗೂ ಅಬಲೆಯಲ್ಲ ಅವಳು ಸಬಲೆಯಾಗಿದ್ದಾಳೆ, ಸಮಾಜದಲ್ಲಿ ಅವಳಿಗೂ ಸಹಾ ಪುರುಷ ಸಮಾನತೆ ಹಕ್ಕನ್ನು ನೀಡಲು ಹಲವಾರು ವರ್ಷಗಳಿಂದ ಹೋರಾಟ ನಡೆಸಿದ ಪರಿಣಾಮವಾಗಿ ಇಂದು ಪುರುಷ ಸಮಾನಾರ್ತಕ ಹುದ್ದೆಗಳನ್ನು ಅಲಂಕರಿಸಲು ಕಾರಣವಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯೆ ಹಾಗೂ ಕೆ.ಪಿ.ಸಿ.ಸಿ ವಕ್ತಾರೆ ಪ್ರಪುಲ್ಲಾ ಮಧುಕರ್ ರವರು ಅಭಿಪ್ರಾಯ ಪಟ್ಟರು. ಇಂದು ಪಟ್ಟಣದ ಕಾಂಗ್ರೇಸ್ ಕಚೇರಿಯಲ್ಲಿ ಡಿಜಿಟಲ್ ಮಹಿಳಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ದೇಶದಲ್ಲಿ …