Headlines

ತುಂಗಾ ನದಿಯ ತೀರದಲ್ಲಿ ವಿಜೃಂಭಣೆಯ ತೆಪ್ಪೋತ್ಸವ – ಸಡಗರದ ಸಂಭ್ರಮಕ್ಕೆ ಸಾಕ್ಷಿಯಾದ ಸಾವಿರಾರು ಜನ|thirthahalli

ತೀರ್ಥಹಳ್ಳಿ: ತುಂಗಾ ನದಿಯ ದಂಡೆಯ  ಮೇಲಿನಿಂದ ಸಿಡಿದ ಸಿಡಿಮದ್ದುಗಳು ವರ್ಣರಂಜಿತವಾಗಿ ಮುಗಿಲಿಗೆ ಅಪ್ಪಳಿಸಿದವು. ಮರಳು ದಿಬ್ಬದ ಮೇಲೆ ಹಾತೊರೆದು ಕುಳಿತಿದ್ದ ಜನತೆ ಕೇಕೆ ಹಾಕಿದರು.  ಶ್ರೀ ರಾಮೇಶ್ವರ ಎಳ್ಳಾಮಾವಾಸ್ಯೆ ಜಾತ್ರೆಯ ಕೊನೆಯ ದಿನವಾದ ಭಾನುವಾರ ತುಂಗಾನದಿಯಲ್ಲಿ ದೇವರ ತೆಪ್ಪೋತ್ಸವ ಜನಾಕರ್ಷಣೆಯ ಕೇಂದ್ರ ಬಿಂದುವಾಯಿತು. ತೆಪ್ಪೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು. ತುಂಗಾ ನದಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಮೂರು ಸುತ್ತು ನದಿಯಲ್ಲಿ ತಿರುಗಿಸಿ ಪೂಜೆ ಸಲ್ಲಿಸಲಾಯಿತು.   ಈ ಸಂದರ್ಭದಲ್ಲಿ…

Read More

ಹೊಸ ವರ್ಷದ ಹೊಸ್ತಿಲಲ್ಲಿ ಯುವಕರು ಹಾಗೂ ವಾಹನ ಚಾಲಕರಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಕಳಕಳಿ :|accident awareness

ಯುವಕರಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಕಳಕಳಿ : ಹೊಸ ವರ್ಷದ ಸಮಯದಲ್ಲಿ ವಾಹನ ಚಾಲನೆಯಲ್ಲಿ ಆತುರ ಬೇಡ ಯುವಕರೇ….. ನಮ್ಮ ಮಲೆನಾಡಿನಲ್ಲಿ ಕಳೆದ ಹಲವಾರು ದಿನಗಳಿಂದ ರಸ್ತೆ ಅಪಘಾತಗಳಿಂದ ಸಾಕಷ್ಟು ಯುವಕರು ಸಾವನ್ನಪ್ಪುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಅದರಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸಿ ಕೆಲವರು ಮೃತಪಟ್ಟರೆ ಇನ್ನು ಕೆಲವರು ಮದ್ಯಪಾನ ಮಾಡಿ ಅಪಘಾತವೆಸಗಿ ತಾವು ಬಲಿಯಾಗುವುದಲ್ಲದೆ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ. ಈಗಿನ ಸಮಯದಲ್ಲಿ ಗಾಂಜಾ ಎಂಬ ಅಮಲು ಪದಾರ್ಥ ಯುವಕರ ಮನಸ್ಥಿತಿ ಹಾಗೂ ಮನೆ ಸ್ಥಿತಿಯನ್ನು…

Read More

ಜಗತ್ತಿಗೆ ಶಾಂತಿ,ಸಹಬಾಳ್ವೆ ಪ್ರೀತಿಯ ಸಂದೇಶ ಸಾರಿದ ಶಾಂತಿದೂತ ಯೇಸು ಕ್ರಿಸ್ತರು – ರೆ. ಫಾ ಬಿನೋಯ್|Christmas

ರಿಪ್ಪನ್ ಪೇಟೆ : ಜಗತ್ತಿಗೆ ಶಾಂತಿ, ಸಹಬಾಳ್ವೆ, ಪ್ರೀತಿಯ ಜೀವನ ಸಂದೇಶ ಸಾರಿದ ಶಾಂತಿದೂತ ಏಸುಕ್ರಿಸ್ತರ ಜನ್ಮದಿನದ ಈ ಅಪೂರ್ವ ಹಬ್ಬವೇ ಕ್ರಿಸ್ಮಸ್ ಎಂದು ರಿಪ್ಪನ್ ಪೇಟೆ ಗುಡ್ ಶೆಫರ್ಡ್ ಚರ್ಚಿನ ಧರ್ಮಗುರು ರೆ. ಫಾ. ಬಿನೋಯ್ ಹೇಳಿದರು.  ರಿಪ್ಪನ್ ಪೇಟೆ ಪಟ್ಟಣದ ಗುಡ್ ಶೆಫರ್ಡ್ ಚರ್ಚಿನಲ್ಲಿ  ಕ್ರಿಸ್ಮಸ್ ಹಬ್ಬದ ಪ್ರಯುಕ್ತ  ಆಯೋಜಿಸಿದ್ದ ಧಾರ್ಮಿಕ ಪೂಜೆಯಲ್ಲಿ ಭಾಗವಹಿಸಿ  ಶುಭ ಸಂದೇಶವನ್ನು ನೀಡಿದ ಅವರು ಏಕತೆ ಮತ್ತು ಸಾಮರಸ್ಯವನ್ನು ಸಾರುವ ಹಬ್ಬವಿದು. ಸಮೃದ್ಧ ಮತ್ತು ಶಾಂತಿಯುತ ಹೊಸ ವರ್ಷಕ್ಕಾಗಿ…

Read More

ಆಸ್ತಿಗಾಗಿ ಅಣ್ಣನಿಂದ ತಮ್ಮನ ಕೊಲೆ : ಕ್ಲಿಷ್ಟಕರ ಪ್ರಕರಣ ಬೇಧಿಸಿದ ಪೊಲೀಸರು- ಆರೋಪಿ ಬಂಧನ|crime

ಆಸ್ತಿಗಾಗಿ ಸ್ವಂತ ತಮ್ಮನನ್ನು ಕೊಂದು ಪೊದೆಯಲ್ಲಿ ಬಿಸಾಡಿದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆನವಟ್ಟಿ ತಾಲೂಕಿನ ತುಡಿ ನೀರು ಗ್ರಾಮದ ನಿವಾಸಿ ಸಲೀಂ ಎಂಬ ಯುವಕ ಡಿಸೆಂಬರ್ 15ರಂದು ರಾತ್ರಿ ಜಮೀನಿಗೆ ಮಲಗಲು ಹೋಗಿದ್ದರು. ಆದರೆ ಆನಂತರ ಮನೆಗೆ ಆತ ವಾಪಸ್ ಹಿಂದಿರುಗಿರಲಿಲ್ಲ ಆತನಿಗಾಗಿ ಎಲ್ಲೆಡೆ ಹುಡುಕಾಟ ಕೂಡ ನಡೆದಿತ್ತು ಬಳಿಕ ಡಿಸೆಂಬರ್ 18ರಂದು ಬೆಳಗ್ಗೆ ಅದೇ ಗ್ರಾಮದ ಹಳ್ಳ ಒಂದರ ಪಕ್ಕದ ಪೊದೆಯಲ್ಲಿ ಸಲೀ0 ಮೃತ ದೇಹ ಪತ್ತೆಯಾಗಿತ್ತು. ಈ ಸಂಬಂಧ ಮೃತನ ಸಹೋದರ ಪೊಲೀಸ್ ಠಾಣೆಯಲ್ಲಿ…

Read More

24 ಗಂಟೆಯಲ್ಲಿ ಕಿಡ್ನಾಪ್ ಪ್ರಕರಣ ಬೇಧಿಸಿದ ಪೊಲೀಸರು : ಭದ್ರಾವತಿಯಲ್ಲಿ ಅಪಹರಣ – ಸಾಗರದಲ್ಲಿ ಆರೋಪಿಗಳು|crime news

ಅಪ್ರಾಪ್ತ ಬಾಲಕನನ್ನ ಅಪಹರಿಸಿ ಹಣದ ಬೇಡಿಕೆ ಇಟ್ಟ ಪ್ರಕರಣವನ್ನ 24 ಗಂಟೆಯಲ್ಲಿ ಬೇಧಿಸಿದ ಭದ್ರಾವತಿ ನ್ಯೂ ಟೌನ್ ಪೊಲೀಸರು ಐವರು ಆರೋಪಿಯನ್ನ ಬಂಧಿಸಿದ್ದಾರೆ. ಓರ್ವನ ಬಂಧನಕ್ಕಾಗಿ ಭರ್ಜರಿ ಬಲೆಯನ್ನೇ ಹೆಣೆದಿದ್ದಾರೆ. ಘಟನೆಯ ಹಿನ್ನಲೆ: ಭದ್ರಾವತಿ ಅಂಡರ್ ಬ್ರಿಡ್ಜ್ ಬಳಿಯಿರುವ ಎಲ್ಐಸಿ ಕಚೇರಿ ಬಳಿ ಎಳನೀರು ಮಾರಾಟ ಮಾಡುತ್ತಿದ್ದ ಅಪ್ರಾಪ್ತ ಬಾಲಕನ ಬಳಿ ಬಂದ ಅಪರಿಚತನೋರ್ವ ನನ್ನ ಬಳಿ ಹಣ ಖಾಲಿಯಾಗಿದೆ. ಫೋನ್ ಪೇ ನೂ ಇಲ್ಲ. ನಾಲ್ಕು ಎಳನೀರು ಕೊಚ್ಚಿಕೊಂಡು 100 ಮೀಟರ್ ದೂರದಲ್ಲಿರುವ ವ್ಯಾನ್ ನಲ್ಲಿರುವ ಸ್ನೇಹಿತನ…

Read More

ಬೈಕ್ ಹಾಗೂ ಕಾರಿನ ನಡುವೆ ಅಪಘಾತ – ಬೈಕ್ ಸವಾರನ ಕಾಲು ಮುರಿತ..!!!!|accident

ಕಾರು ಹಾಗೂ ಬೈಕ್ ನಡುವೆ ಅಪಘಾತ ನಡೆದು ವ್ಯಕ್ತಿಯೊಬ್ಬನ ಕಾಲು ಮುರಿತವಾದ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ತಿರುವಿನನಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರನ ಕಾಲು ಮುರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.ಶಿರಸಿಯಿಂದ ಶಿವಮೊಗ್ಗದ ಕಡೆಗೆ ತೆರಳುತಿದ್ದ ಬೈಕ್ ಹಾಗೂ ಶಿವಮೊಗ್ಗದಿಂದ ಸಾಗರದ ಕಡೆ ಸಾಗುತ್ತಿದ್ದ ಕಾರಿನ ನಡುವೆ ಐಗಿನ ಬೈಲ್ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಗಾಯಾಳು ಬೈಕ್ ಸವಾರನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು,ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ. ಸಾಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ…

Read More

ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ – ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ|wild

ರಿಪ್ಪನ್‌ಪೇಟೆ : ಕಾಡಾನೆಗಳ ದಾಳಿಯಿಂದ ಅನ್ನದಾತರು ಕಂಗೆಟಿದ್ದು,ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಜನತೆ ಬೇಸತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಮನಗದ್ದೆ, ಅಡ್ಡೇರಿಯಲ್ಲಿ ಕಾಡಾನೆಯ ಉಪಟಳ ಹೆಚ್ಚಾಗಿದ್ದು, ಕೋಯ್ಲು ಮಾಡಿ ಹಾಕಿದ್ದ ಭತ್ತ, ಹುಲ್ಲು ಹಾಗೂ ಕೊಳವೆ ಬಾವಿಗೆ ಅಳವಡಿಸಿದ್ದ ಪೈಪ್ ಲೈನ್ ದ್ವಂಸಗೊಳಿಸಿದೆ. ಹೊರಬೈಲು, ಮತ್ತಿಕೊಪ್ಪಪ, ಗಾಮನಗದ್ದೆಯಲ್ಲಿ ಕಳೆದ ಅನೇಕ ದಿನಗಳಿಂದ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಶುಂಠಿ ಏರಿ ಮೇಲೆ ನಿರಂತರವಾಗಿ ಓಡಾಡುವುದರಿಂದ ಶುಂಠಿ ಏರಿ ಒಡೆದು ಬೆಳೆ…

Read More

ಶಾಸಕ ಹಾಲಪ್ಪನವರಿಗೆ ಚುನಾವಣೆ ಸಮೀಪಿಸುವಾಗ ಶರಾವತಿ ಸಂತ್ರಸ್ಥರು ನೆನಪಾಗುತ್ತಾರೆ – ಕಾಂಗ್ರೆಸ್ ಆರೋಪ|congress

ರಿಪ್ಪನ್‌ಪೇಟೆ : ಮಾಜಿ ಸಚಿವ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರ ಅಧಿಕಾರಾವಧಿಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಕ್ರಮ ಜಮೀನು ಸಾಗುವಳಿದಾರ ರೈತ ಕುಟುಂಬಕ್ಕೆ ಸಾಗುವಳಿ ಪತ್ರವನ್ನು ಕೊಡಿಸಿದ್ದರೂ ಅಲ್ಲದೆ ಇನ್ನೂ ಹಲವು ರೈತರ ಹಕ್ಕು ಪತ್ರವನ್ನು ತಹಶೀಲ್ದಾರ್ ಕಛೇರಿಯಲ್ಲಿ ಸಿದ್ದಗೊಂಡಿದ್ದರೂ ಕೂಡಾ ಕಳೆದ ನಾಲ್ಕುವರೆ ವರ್ಷದಿಂದ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹಕ್ಕು ಪತ್ರ ಕೊಡದೇ ಸಿದ್ದಗೊಂಡ ಸಾಗುವಳಿ ಪತ್ರವನ್ನು ವಜಾಗೊಳಿಸಿ ಈಗ ಚುನಾವಣೆಗೆ ಮೂರು ನಾಲ್ಕು ತಿಂಗಳುಗಳಿರುವಾಗ ಮೊಸಳೆ ಕಣ್ಣಿರು ಹಾಕುವ ಮೂಲಕ ಶರಾವತಿ…

Read More

ಅಂಗನವಾಡಿ ಮಗುವಿಗೆ ಬೈಕ್ ಡಿಕ್ಕಿ – ಅಂಗನವಾಡಿಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ|accident-protes

ಅಂಗನವಾಡಿ ಮಗುವಿಗೆ ಬೈಕ್ ಡಿಕ್ಕಿಯಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಮತ್ತು ಪೋಷಕರು ಅಂಗನವಾಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಸಾಗರ ತಾಲೂಕಿನ ಆನಂದಪುರ ಸಮೀಪದ ಲಕ್ಕವಳ್ಳಿ ಅಂಗನವಾಡಿ ಕೇಂದ್ರದ ಮಗು ಅಂಗನವಾಡಿಯಿಂದ ರಸ್ತೆ ದಾಟುವಾಗ ಅಪಘಾತವಾಗಿ ಗಾಯಗೊಂಡ ಘಟನೆಯನ್ನು ಪ್ರತಿಭಟಿಸಿ ಸ್ಥಳೀಯ ಆಡಳಿತ ಹಾಗೂ ಗ್ರಾಮಸ್ಥರು ಅಂಗನವಾಡಿಗೆ ಶುಕ್ರವಾರ ಬೀಗ ಹಾಗಿ ಪ್ರತಿಭಟನೆ ನಡೆಸಿದ್ದಾರೆ.     ಗುರುವಾರ ಮಗು ಅಂಗನವಾಡಿಯಿಂದ ಮನೆಗೆ ತೆರುಳುವಾಗ ಬೈಕ್ ಡಿಕ್ಕಿಯಾಗಿ ಮಗು ಮುಖ, ತಲೆಗೆ ಪೆಟ್ಟು ಬಿದ್ದಿದೆ. ಸಂಜೆ ಆದ ಕಾರಣ…

Read More

ಹೊಸನಗರದ ಮಾವಿನಕೊಪ್ಪ ಸರ್ಕಲ್ ನಲ್ಲಿ ಕಾರು ಡಿವೈಡರ್ ಗೆ ಡಿಕ್ಕಿ – ಇಬ್ಬರು ಗಂಭೀರ|accident

ಸಿಗಂದೂರಿನಿಂದ ಭೀಮಸಮುದ್ರಕ್ಕೆ ತೆರಳುತ್ತಿದ್ದ ಕಾರು ಡಿವೈಡರ್ ಡಿಕ್ಕಿ ಹೊಡೆದು ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ.  ಪಟ್ಟಣದ ಮಾವಿನಕೊಪ್ಪ ಸರ್ಕಲ್ ನಲ್ಲಿ ಖಾಸಗಿ ಪ್ರವಾಸಿ ಬಸ್‌ನಿಂದ ಇಳಿದ ವ್ಯಕ್ತಿಯೊಬ್ಬ ಅಡ್ಡ ಬಂದ ಕಾರಣ, ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕನ ಸಹಿತ ಅಡ್ಡ ಬಂದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ತಾಲೂಕಿನ ಕಸಬಾ ಹೋಬಳಿ ಮಳವಳ್ಳಿ ವಾಸಿ ಶೇಖರ(45) ಕಾರಿಗೆ ಅಡ್ಡ ಬಂದ ವ್ಯಕ್ತಿ….

Read More