POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಎಂಎಸ್ ಐಎಲ್ ಗೋಡೆ ಕೊರೆದು ಲಕ್ಷಾಂತರ ರೂ ಮೌಲ್ಯದ ಮದ್ಯ ಕಳ್ಳತನ|MSIL

ಗೋಡೆ ಕೊರೆದು ಎಂಎಸ್ ಐಎಲ್ ಮದ್ಯದ ಅಂಗಡಿಯಿಂದ ಮಧ್ಯ ಕಳ್ಳತನ ಮಾಡಿರುವ ಘಟನೆ ಸಾಗರ ತಾಲೂಕಿನ ಬೆಳ್ಳಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಗ್ರಾಮದ msil ಮದ್ಯದ ಮಳಿಗೆಯ ಮಾಲಿಕರು ಎಂದಿನಂತೆ ರಾತ್ರಿ ಮಳಿಗೆಗೆ ಬೀಗ ಹಾಕಿಕೊಂಡು ಹೋಗಿದ್ದರು.ಮರುದಿನ ತೋಟಕ್ಕೆ ಕೆಲಸಕ್ಕೆ ಹೋಗುವವರು ಗಮನಿಸಿ,ಮಾಲಿಕರಿಗೆ ದೂರವಾಣಿ ಮೂಲಕ ಮದ್ಯದ ಮಳಿಗೆ ಕಳ್ಳತನವಾಗಿದ್ದನ್ನು ತಿಳಿಸಿದ್ದಾರೆ.

ಮಾಲಿಕ ರವಿಯವರು ಮಳಿಗೆಗೆ ಬಂದು ಪರಿಶೀಲಿಸಿದಾಗ ಕಳ್ಳರು ಬಾಗಿಲು ಮುರಿಯಲು ಸಾಧ್ಯವಾಗದೇ ಇದ್ದಾಗ ಗೋಡೆ ಕೊರೆದು ಒಳ ಪ್ರವೇಶಿಸಿ ಲಕ್ಷಾಂತರ ರೂ ಮೌಲ್ಯದ ಮದ್ಯವನ್ನು ಕಳ್ಳತನ ಮಾಡಿದ್ದಾರೆ.

ಈ ಕುರಿತು ಸಾಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.