POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಅತ್ತೆಯ ಸಾವಿನ ಸುದ್ದಿ ತಿಳಿದು ಅಳಿಯ ಹೃದಯಾಘಾತದಿಂದ ನಿಧನ|sagara

ಹೃದಯಾಘಾತದಿಂದ ಸೋದರತ್ತೆಯ ಮೃತಪಟ್ಟ ಸುದ್ದಿ ತಿಳಿದು ಅಳಿಯ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ನಡೆದಿದೆ.



ಲಕ್ಷಮ್ಮ(58) ಮತ್ತು ಅವರ ಅಳಿಯ ಗುಲ್ಫತ್ ಸಿಂಗ್(45) ಮೃತಪಟ್ಟರಾಗಿದ್ದಾರೆ.

ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೊರಟಿದ್ದ ಲಕ್ಷಮ್ಮರನ್ನು ಗುಲ್ಫತ್ ಸಿಂಗ್ ಲಿಂಗನಮಕ್ಕಿಯಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಬಸ್ಸು ಆನಂದಪುರ ಸಮೀಪ ತಲುಪಿದಾಗ ಲಕ್ಷಮ್ಮರಿಗೆ ಹೃದಯಾಘಾತಕ್ಕೀಡಾಗಿದ್ದು, ಅವರು ಅಲ್ಲೇ ಮೃತಪಟ್ಟರೆನ್ನಲಾಗಿದೆ. ಈ ವಿಚಾರವನ್ನು ಬಸ್ ನಿರ್ವಾಹಕ ಲಕ್ಷಮ್ಮ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾನೆ.



ಈ ಸುದ್ದಿಯನ್ನು ಸಂಬಂಧಿಕರು ಕರೆ ಮಾಡಿ ಗುಲ್ಫತ್ ಸಿಂಗ್ ಅವರಿಗೆ ತಿಳಿಸಿದ್ದಾರೆ. ಲಿಂಗನಮಕ್ಕಿಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದ ಗುಲ್ಫತ್ ಸಿಂಗ್  ಈ ವಿಚಾರ ತಿಳಿಯುತ್ತಿದ್ದಂತೆ ಕುಸಿದು ಬಿದ್ದರೆನ್ನಲಾಗಿದೆ. 

ಹೃದಯಾಘಾತಕ್ಕೊಳಗಾದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.