Headlines

ತೀರ್ಥಹಳ್ಳಿ : ಪ್ಲೈವುಡ್ ಕಟ್ ಮಾಡುವಾಗ ಮಿಷಿನ್ ನ ಬ್ಲೇಡ್ ಹರಿದು ಕಾರ್ಮಿಕ ಸಾವು|Maaluru


ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ಲೇವುಡ್ ಕೆಲಸಕ್ಕೆ ಬಂದಿದ್ದ ಕಾರ್ಮಿಕನೊಬ್ಬ ಅಚಾನಕ್ಕಾಗಿ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ನಡೆದಿದೆ.

ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಂಡಾಸ್ ಕೊಪ್ಪ ಗ್ರಾಮದ ಆದಿತ್ಯ ಎಂಬುವವನೊಬ್ಬ ಪ್ಲೇವುಡ್ ವರ್ಕ್ ಗಾಗಿ ತೆರಳಿದ್ದರು.

ಪ್ಲೈವುಡ್ ಕಟ್ ಮಾಡುವ ವೇಳೆ ಮಿಷಿನ್ ನ ಬ್ಲೇಡು ಅಚಾನಕ್ಕಾಗಿ ಆದಿತ್ಯನ ಕುತ್ತಿಗೆಯನ್ನ ಕೊಯ್ದಿದೆ.ಗಾಯಾಳುವನ್ನು ತಕ್ಷಣ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಸಾಗಿಸುವಾಗ ಆದಿತ್ಯ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ಪ್ರಕರಣ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯ ಪಿಐ ನವೀನ್ ಕುಮಾರ್ ಮಠಪತಿ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.

About The Author

Leave a Reply

Your email address will not be published. Required fields are marked *