ಅದ್ದೂರಿಯಾಗಿ ಜರುಗಿದ ಹೆದ್ದಾರಿಪುರದ 32ನೇ ವರ್ಷದ ಗಣೇಶಮೂರ್ತಿ ವಿಸರ್ಜನಾಪೂರ್ವ ಮೆರವಣಿಗೆ :
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಮಾಸ್ತಿಯಮ್ಮ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಿದ 32ನೇ ವರ್ಷದ ಗಣೇಶಮೂರ್ತಿ ವಿಸರ್ಜನಾ ಪೂರ್ವ ಮೆರವಣಿಗೆ ಸಡಗರ ಹಾಗೂ ಸಂಭ್ರಮದಿಂದ ನೆರವೇರಿತು. ಹೆದ್ದಾರಿ ಪುರ, ಕಲ್ಲೂರು, ಜಂಬಳ್ಳಿ, ವಡ ಹೊಸಳ್ಳಿ, ಬಿದರಳ್ಳಿ,ತಳಲೆ, ಪಾಶೆಟ್ಟಿಕೊ ಪ್ಪ, ಸೇರಿದಂತೆ ಸುತ್ತಮುತ್ತ ಗ್ರಾಮದಿಂದ ಆಗಮಿಸಿದ ಮಕ್ಕಳು ಮಹಿಳೆಯರು ಹಿರಿಯರು ಸೇರಿದಂತೆ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ಶ್ರೀ ಮಹಾ ಗಣಪತಿ ಸೇವಾ ಸಮಿತಿಯಿಂದ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು….