ದಿ|| ಕೂರಂಬಳ್ಳಿ ಯಲ್ಲನಾಯ್ಕ ರವರ ಧರ್ಮಪತ್ನಿ ಕಗಚಿ ಸಿದ್ದಮ್ಮ ನಿಧನ
ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ದಿವಂಗತ ಕೂರಂಬಳ್ಳಿ ಯಲ್ಲನಾಯ್ಕ ರವರ ಧರ್ಮಪತ್ನಿ ಕಗಚಿ ಸಿದ್ದಮ(95) ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಬುಧವಾರ ಸಂಜೆ ಕಗಚಿ ಗ್ರಾಮದ ತಮ್ಮ ಸ್ವಗೃಹದಲ್ಲೇ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರಾದ ಬೋರಪ್ಪನಾಯ್ಕ ಮತ್ತು ಯೋಗೇಂದ್ರ ಕೆ ವೈ ಹಾಗೂ ಮೂವರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು(ಗುರುವಾರ) ಕಗಚಿ ಗ್ರಾಮದಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ