Headlines

ಹಡ್ಲುಬೈಲು ಮನೆ ತೆರವು ಪ್ರಕರಣ : ಅಧಿಕಾರಿಗಳ ದುಂಡಾವರ್ತನೆ ನಡೆಗೆ – ಕಿಮ್ಮನೆ ರತ್ನಾಕರ್ ನೇತ್ರತ್ವದಲ್ಲಿ ಪಾದಯಾತ್ರೆ

ರಿಪ್ಪನ್ ಪೇಟೆ ; ಹೊಸನಗರ ತಾಲೂಕಿನ ಹುಂಚ ಹೋಬಳಿಯ ಹಡ್ಲುಬೈಲಿನ ಜೀವನ್ ಎಂಬವರ ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳ ದುಂಡಾವರ್ತನೆಯನ್ನು ಖಂಡಿಸಿ ಮಂಗಳವಾರ ಕೆಪಿಸಿಸಿ ವಕ್ತಾರ ಹಾಗೂ  ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ತಮ್ಮ ನೂರಾರು  ಬೆಂಬಲಿಗರೊಂದಿಗೆ ಮನೆ  ನೆಲಸಮಗೊಂಡ ಜಾಗದಿಂದ  ಹೊಂಬುಜ ನಾಡ ಕಚೇರಿಯವರೆಗೆ ಸುಮಾರು 7ಕಿಲೋ ಮೀಟರ್ (ನಡಿಗೆ ) ಪಾದಯಾತ್ರೆ ನಡೆಸಿದರು.

  
ತದ ನಂತರ ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು 
ರಾಜ್ಯ ಸರ್ಕಾರ ನಿವೇಶನ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡಬೇಕು.ಇದು ನಿಯಮ.ಈಗಿನ ಬಿಜೆಪಿ ಸರ್ಕಾರ ಬಡತನ ಹತ್ತಿಕ್ಕುವ ಬದಲು ಬಡವರ ಬದುಕಿನ  ಆಶ್ರಯ ಸೌಧಗಳನ್ನು  ಕೆಡವಿ ಹಾಕಿ ಕಡು ಬಡವರನ್ನೇ ಸಂಪೂರ್ಣ  ನಿರ್ನಾಮ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ.ಸರ್ಕಾರದ ಈ ನಡೆ  ನಾಗರೀಕ  ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು  ಕಟುವಾಗಿ ಟೀಕಿಸಿದರು.
  

ಹಡ್ಲು ಬೈಲು ಗ್ರಾಮದ ಸರ್ವೇ  ನಂಬರ್  101 ರಲ್ಲಿ  ಜೀವನ್ ಕುಟುಂಬಸ್ಥರು  ವಿದ್ಯುತ್ ಸಂಪರ್ಕ ಪಡೆದು ನಿರ್ಮಿಸಿದ ಮನೆಯನ್ನು  ಕಂದಾಯ ಅಧಿಕಾರಿಗಳು ಏಕಾಏಕಿ ಅಕ್ರಮ ಒತ್ತುವರಿ ಎಂದು ಜೆಸಿಬಿ ಯಂತ್ರ ಬಳಸಿ  ನೆಲಸಮಗೊಳಿಸಿದ ಕ್ರಮ ಖಂಡನೀಯ ,ಸರ್ಕಾರ ತಕ್ಷಣ ಕಂದಾಯ ಭುಮಿಯನ್ನು ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು . 



ಈ ಪಾದಯಾತ್ರೆಯಲ್ಲಿ ಮನೆಯನ್ನು ಕಳೆದುಕೊಂಡ ಜೀವನ್ ಕುಟುಂಬದವರು ಕೆಪಿಸಿಸಿ ಕಾರ್ಯದರ್ಶಿ ಕಲಗೋಡು ರತ್ನಾಕರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾಪಂ ಮಾಜಿ ಸದಸ್ಯ ಎರಗಿ ಉಮೇಶ್, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಮುಡುಬ ರಾಘವೇಂದ್ರ, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಪುಟ್ಟ ಬಿದ್ಲು ರಾಘವೇಂದ್ರ, ಹುಂಚ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸುಣ್ಣಕಲ್ಲು ಗುರುರಾಜ್, ಉಲ್ಲಾಸ್ ಕಡಸೂರು ,ಹೊಸಕೊಪ್ಪ ಚೇತನ್,  ಹುಲ್ಲತ್ತಿ ದಿನೇಶ್, ರಾಜಶೇಖರ್, ಮಹೇಶ್ ಗೌಡ, ಲೇಖನಮೂರ್ತಿ, ನಾಗರಾಜ ರೆಡ್ಡಿ, ಅನಿಲ್, ಕೇಶವ, ಮಂಜಣ್ಣ, ಸುಮತಿ, ಲಕ್ಷ್ಮಮ್ಮ, ಜ್ಯೋತಿ, ಲೋಲಾಕ್ಷಿ, ಗ್ರಾಮ ಪಂಚಾಯತ್ ಸದಸ್ಯರುಗಳು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *