ಕಳೆದ ಎರಡು ತಿಂಗಳಿಂದ ಕಾಟ ಕೊಡುತ್ತಿದ್ದ ಚಿರತೆ ಶಿವಮೊಗ್ಗ ಗ್ರಾಮಾಂತರದ ಆಲದಹಳ್ಳಿ ಸೋಮಿನಕೊಪ್ಪದಲ್ಲಿ ಬೋನಿಗೆ ಬಿದ್ದಿದೆ.ನಂತರ ಚಿರತೆಯನ್ನು ಅರಣ್ಯ ಇಲಾಖೆಯವರು ಬೇರೆಡೆ ಸಾಗಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ಬಾಳಿ ತಾಲೂಕಿನ ಪಲವನಹಳ್ಳಿ ಯಲ್ಲಿ ಮಹಿಳೆಯನ್ನು ಬಲಿ ತೆಗೆದುಕೊಂಡ ಚಿರತೆ ಆಲದಹಳ್ಳಿ ಸೋಮಿನಕೊಪ್ಪದಲ್ಲಿ ಬೋನಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಸಾಕಿದ ನಾಯಿಯನ್ನು ಬೋನಿನಲ್ಲಿಟ್ಟು ಚಿರತೆಯನ್ನ ಹಿಡಿಯಲಾಗಿದೆ. ಹೊಲದಲ್ಲಿ ಸೌತೆಕಾಯಿ ಕೀಳಲು ಬಂದ ರೈತರು ಬೋನಿಗೆ ಬಿದ್ದ ಚಿರತೆಯನ್ನು ಮೊದಲು ನೋಡಿದ್ದಾರೆ. ನಂತರ ಸ್ಥಳದಲ್ಲಿ ಜನ ಜಾತ್ರೆಯೇ ನಿರ್ಮಾಣವಾಗಿದೆ.
ಕಳೆದ ಮೂರು ನಾಲ್ಕು ತಿಂಗಳಿಂದ ಚಿರತೆ ಕಾಣಿಸಿಕೊಂಡು ಜಾನುವಾರುಗಳನ್ನು ತಿಂದಿದೆ. ನಾಲ್ಕು ಕುರಿ ಮತ್ತು ಎರಡು ಎತ್ತುಗಳನ್ನ ಚಿರತೆ ತಿಂದಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.