Headlines

ರಿಪ್ಪನ್‌ಪೇಟೆ : ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನೂತನ ಅಧ್ಯಕ್ಷರಾಗಿ ಗಣೇಶ್ ಎನ್ ಕಾಮತ್ ಅವಿರೋಧ ಆಯ್ಕೆ : ನೂತನ ಅಧ್ಯಕ್ಷರನ್ನು ಸನ್ಮಾನಿಸಿದ ಬೇಳೂರು

ರಿಪ್ಪನ್ ಪೇಟೆ : ಇಲ್ಲಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನೂತನ ಅಧ್ಯಕ್ಷರಾಗಿ ಗಣೇಶ್ ಎನ್.ಕಾಮತ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್‌ ಶಂಕರ್ ಶರಾಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಮಂಜುನಾಥ ಕಾಮತ್ (ಗೌರವಾಧ್ಯಕ್ಷರು), ಉಮೇಶ್‌ಭಟ್, ಸುಧೀಂದ್ರ ಪ್ರಭು (ಉಪಾಧ್ಯಕ್ಷರು), ಜೆ.ರಾಧಾಕೃಷ್ಣ (ಸಹಕಾರ್ಯದರ್ಶಿ), ಹರೀಶ್‌ಪ್ರಭು (ಸಂಘಟನಾ ಕಾರ್ಯದರ್ಶಿ), ಎಂ.ಆರ್.ಭಟ್ (ಖಜಾಂಚಿ) ಉಳಿದಂತೆ 20 ಕ್ಕೂ ಅಧಿಕ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರನ್ನು ಸನ್ಮಾನಿಸಿದ ಮಾಜಿ ಶಾಸಕ ಬೇಳೂರು:


ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯದ ಗಣೇಶ್ ಕಾಮತ್ ರವರಿಗೆ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣ ರವರು ಸನ್ಮಾನಿಸಿದರು.

ಇಂದು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಣೇಶ್ ಕಾಮತ್ ರವರನ್ನು ಅವರ ಸ್ವಗೃಹದಲ್ಲಿ ಬೇಳೂರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು. ಹಾಗೂ ಹಿಂದೂ ಮಹಾಸಭಾದ ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ  ಮುಖಂಡರುಗಳು ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *