Headlines

ತೀರ್ಥಹಳ್ಳಿಯಲ್ಲಿ ನೂತನ ಜೆಡಿಎಸ್ ಕಚೇರಿ ಉದ್ಘಾಟನೆ :

ತೀರ್ಥಹಳ್ಳಿ : ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿ ಸೋಮವಾರ ಜೆಡಿಎಸ್ ನ ನೂತನ ಶಾಖೆಯನ್ನು ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪೂರ್ಯ ನಾಯಕ್ ಉದ್ಘಾಟನೆ ಮಾಡಿದರು.


ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿ ನಂತರ ಮಾತನಾಡಿದ ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್ ತೀರ್ಥಹಳ್ಳಿ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಸೂಕ್ತ ರೀತಿಯಲ್ಲಿ ಸಂಘಟಿಸುವ ಮೂಲಕ 2023 ವಿಧಾನಸಭಾ ಸಾರ್ವರ್ತಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು  ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಸೇರಿದಂತೆ ಎಲ್ಲರು ಶ್ರಮಿಸಬೇಕು ಎಂದರು. 

 ನಂತರ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ ಶ್ರೀಕಾಂತ್ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೆಲವರು ಬಂದು ಹೋಗಿದ್ದರು ಪಕ್ಷದ ಕಾರ್ಯಕರ್ತರು ಇಲ್ಲೆ ಇದ್ದಾರೆ ಅವರೆನ್ನೆಲ್ಲಾ ಸಂಘಟಿಸಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ.ತಾಲೂಕಿನ ಸ್ಥಳೀಯ ಸಮಸ್ಯೆಗಳು ಬೂತ್ ಮಟ್ಟದ ಸಮಸ್ಯೆಗಳಿಗೆ ಹೆಚ್ಚು ಗಮನ ಕೊಡುವ ಮುಖಾಂತರ ಜೆಡಿಎಸ್ ಪಕ್ಷ ಇನ್ನು ಮುಂಚೂಣಿಯಲ್ಲಿರುತ್ತದೆ. ಯುವ ನಾಯಕ ರಾಜಾರಾಂ ಚಿಕ್ಕದಾಗಿ ಕಂಡರೂ ಕೂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಯುವಕರನ್ನು  ವಿಶ್ವಾಸಕ್ಕೆ ತೆಗೆದುಕೊಂಡು ತಂಡವನ್ನು  ಕಟ್ಟಿ ತಾಲೂಕಿನಾದ್ಯಂತ ಉತ್ತಮ ಸಂಘಟನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಬದಲಾವಣೆ ಕಾಣಬೇಕಿದೆ. ಆ ಬದಲಾವಣೆಗೆ ಮತದಾರರ ಪೂರ್ಣ ಸಹಕಾರವನ್ನು ಈ ಸಂದರ್ಭದಲ್ಲಿ  ಕೇಳಿದರು.


ನಂತರ ಯಡೂರು ರಾಜಾರಾಂ ಮಾತನಾಡಿ ನಮ್ಮ ಕಚೇರಿಯನ್ನು ಸಮಾಜಮುಖಿ ಕೆಲಸಗಳಿಗೆ ಮೀಸಲಿಟ್ಟು ಒಳ್ಳೊಳ್ಳೆ ಕೆಲಸಗಳನ್ನು ಮಾಡುತ್ತೇವೆ  ತೀರ್ಥಹಳ್ಳಿ ಕ್ಷೇತ್ರದಲ್ಲಿ ಎಲ್ಲರ ಸಹಕಾರದಿಂದ ಯುವ ತಂಡವನ್ನು ಕಟ್ಟಿಕೊಂಡು ಹೊಸ ಸವಾಲಿನೊಂದಿಗೆ ಅನೇಕ ಕನಸಗಳನ್ನು ಹೊತ್ತು ಕ್ಷೇತ್ರದಲ್ಲಿ  ಅಭಿವೃದ್ಧಿ ದೃಷ್ಟಿಯಿಂದ ಅನೇಕ ಯೋಜನೆ ಇಟ್ಟುಕೊಂಡು ಸಂಘಟನೆ ಮಾಡುತ್ತಿದ್ದೇವೆ.  ಯುವಕರಿಗೆ ಹೆಚ್ಚು ಪ್ರಾತಿನಿಧ್ಯ ಕೊಡುವ ಉದ್ದೇಶದಿಂದ ಜೆಡಿಎಸ್ ಕಟ್ಟಿದ್ದೇವೆ.1983 ರಲ್ಲಿ ಇದೇ ಕಟ್ಟಡದಲ್ಲಿ ಚಂದ್ರೇಗೌಡರು ಗೆಲುವು ಸಾಧಿಸಿ ವಿಧಾನಸಭಾ ಪ್ರವೇಶಿಸಿದ್ದರು.ಹಾಗಾಗಿ ಇದೆ ಜಾಗ ಸೂಕ್ತ ಎಂದು ಜೆಡಿಎಸ್ ಕಛೇರಿಯನ್ನು ಆರಂಭಿಸಿದ್ದೇವೆ. ಈ ಜಾಗ ಜೆಡಿಎಸ್ ಪಕ್ಷಕ್ಕೆ ಉತ್ತಮ ವಾಸ್ತು ಇದ್ದ ಹಾಗೆ ಎಂದರು. 

ಜೆಡಿಎಸ್ ರಾಜ್ಯ ಮುಖಂಡರಾದ ಅರ್ ಎ ಚಾಬುಸಾಬ್ ಮಾತನಾಡಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು ಅದನ್ನು ಉತ್ತಮ ರೀತಿಯಲ್ಲಿ ಸಂಘಟಿಸುವ ಮೂಲಕ 2023 ರ ಚುನಾವಣೆಯಲ್ಲಿ ಯಡೂರು ರಾಜಾರಾಮ್ ಗೆದ್ದು ವಿಧಾನಸಭೆ ಪ್ರವೇಶಿಸಬೇಕು ಎಂದರು. ರಾಜ್ಯಸಭೆ ಚುನಾವಣೆಯಲ್ಲಿ  ಜೆಡಿಎಸ್ ಪಕ್ಷಕ್ಕೆ ಮೋಸ ಮಾಡಿರುವ ಇಬ್ಬರು ಶಾಸಕರು ಮಾನ ಮರ್ಯಾದೆ ಇದ್ದಲ್ಲಿ ಕೂಡಲೇ ಜೆಡಿಎಸ್ ಪಕ್ಷಕ್ಕೆ  ರಾಜೀನಾಮೆ ನೀಡಬೇಕೆಂದು ಖಾರವಾಗಿ ಹೇಳಿದರು.

ಈ ಸಂದರ್ಭದಲ್ಲಿ ತೀರ್ಥಹಳ್ಳಿ ಜೆಡಿಎಸ್ ಅಧ್ಯಕ್ಷರಾದ ಕುಣಜೆ ಕಿರಣ್ ಹೊಸನಗರ ತಾಲೂಕ್ ಜೆಡಿಎಸ್ ಅಧ್ಯಕ್ಷರಾದ ಎನ್ ವರ್ತೇಶ್, ಮುಖಂಡರಾದ ರಾಘವೇಂದ್ರ ತಲಬಿ,ರಾಮಕೃಷ್ಣ, ಕಲ್ಲೂರು ಈರಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇



Leave a Reply

Your email address will not be published. Required fields are marked *