Headlines

ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ‌ಜೆ ಎನ್ ಸಿಸಿ ಕಾಲೇಜಿನ ವಿದ್ಯಾರ್ಥಿ

ಶಿವಮೊಗ್ಗದ ಜೆಎನ್ ಸಿಸಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ಓದುತ್ತಿರುವ ಸಂದೀಪ್ ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆದಿದ್ದನು. 

ಈತನ ಜೊತೆ ಹಾಸ್ಟೆಲ್ ನಲ್ಲಿದ್ದ ಸಹಪಾಠಿಗಳು ರಜೆಯ ಕಾರಣ ತಮ್ಮ ಊರಿಗೆ ಹೋಗಿದ್ದರು. ಎರಡು ದಿನಗಳಿಂದ ಕೊಠಡಿಯಿಂದ‌ಹೊರಗೆ ಬಾರದ ವಿದ್ಯಾರ್ಥಿ ಸಂದೀಪ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು ಎನ್ನಲಾಗಿದೆ.

ಸಂದೀಪ್ ಮೂಲತ ಕಲಬುರ್ಗಿ ವಾಸಿಯಾಗಿದ್ದು ಶಿವಮೊಗ್ಗದ ಜೆ ಎನ್ ಸಿಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.  ಕೊಠಡಿಯಲ್ಲಿ ಫ್ಯಾನ್ ಗೆ ಸಂದೀಪ್ ನೇಣು ಬಿಗಿದುಕೊಂಡಿದ್ದನು. ಆದರೆ‌ ನೇಣು ಕಟ್ಟಾಗಿ ಆತನ ಮೃತ ದೇಹ ಮಂಚದ ಮೇಲೆ ಬಿದ್ದಿದೆ.

ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About The Author

Leave a Reply

Your email address will not be published. Required fields are marked *