Headlines

ಅಮೃತ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ರಾಜು ರಾಜೀನಾಮೆ….. ವಿನೋದ ಯೋಗೆಂದ್ರಪ್ಪನವರಿಗೆ ಒಲಿಯಲಿದೆಯ ಅದೃಷ್ಟ…???.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಅಮೃತ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ರಾಜು ರವರು ಇಂದು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ.

ಇಂದು ಸಾಗರ ಉಪವಿಭಾಗಧಿಕಾರಿಗಳ ಕಚೇರಿ ಯಲ್ಲಿ ಉಪವಿಭಾಗಾಧಿಕಾರಿ ನಾಗರಾಜ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ .

ಮಂಜುಳಾ ರಾಜುರವರು ಹದಿನೇಳು ತಿಂಗಳ ಕಾರ್ಯಭಾರದ ನಂತರ ಇಂದು ರಾಜಿನಾಮೆ ನೀಡಿದ್ದಾರೆ. ಹದಿನೈದು ತಿಂಗಳ ಅವಧಿಗೆ ಮಾತಾಗಿತ್ತು ಎಂದು ಒಂದು ಬಣ, ಇಲ್ಲಾ ಇಲ್ಲಾ ಪೂರ್ತಿ ಮೂವತ್ತು ತಿಂಗಳಿಗೂ ಇವರೇ ಅಧ್ಯಕ್ಷರು ಎಂದು ಇನ್ನೊಂದು ಬಣದ ವಾಗ್ವಾದಕ್ಕೆ ದಾರಿಯಾಗಿದ್ದ ಈ ಪ್ರಹಸನ ಕೊನೆಗೂ ಅಧ್ಯಕ್ಷರ ರಾಜಿನಾಮೆಯೊಂದಿಗೆ ಹೊಸ  ನಾಟಕಕ್ಕೆ ವೇದಿಕೆ ಸಿದ್ದವಾಗಿದೆ.

ವಿನೋದ ಯೋಗೆಂದ್ರಪ್ಪನವರಿಗೆ ಒಲಿಯಲಿದೆಯೇ ಅದೃಷ್ಟ??…


ಹನ್ನೊಂದು ಸದಸ್ಯರ ಬಲದ ಗ್ರಾಮ‌ ಪಂಚಾಯತ್ ನಲ್ಲಿ ಈಗ ಮತ್ತೆ  ಉಳಿದ ಹದಿಮೂರು ತಿಂಗಳಿಗೆ ಅಧ್ಯಕ್ಷಗಿರಿಗೆ ಚುನಾವಣೆ ನಡೆಯಲಿದ್ದು ವಿನೋದಾ ಯೊಗೇಂದ್ರಪ್ಪನವರಿಗೆ ಒಲಿಯಲಿದೆ ಎನ್ನಲಾಗಿದೆ. ಈಡಿಗ ಸಮುದಾಯದ ವಿನೋದಾ ಯೋಗೆಂದ್ರಪ್ಪನವರಿಗೆ  ಹೋದ ಬಾರಿಯೇ ಅವಕಾಶ ಸಿಗಬೇಕಿತ್ತಾದರೂ ಕೊನೆಯ ಘಳಿಗೆಯ ರಾಜಕೀಯ ಹುದ್ದೆ ತಪ್ಪಿಸಿತ್ತು. ಈಗ ಖಂಡಿತಾ ಅವಕಾಶ ಸಿಗಲಿದೆ ಎಂಬ ವಿಶ್ವಾಸದಲ್ಲಿ ವಿನೋದಾ ಯೋಗೆಂದ್ರಪ್ಪನವರಿದ್ದಾರೆ. 

ಗೃಹಮಂತ್ರಿಗಳ ನಿಶಾನೆ ಯಾವ ಕಡೆಗಿದೆ ಎನ್ನುವುದು ಇನ್ನೂ ಕಾದು ನೋಡಬೇಕಷ್ಟೇ,  ವಿರೋಧ ಪಕ್ಷ ತೊಡೆ ತಟ್ಟಲಿದೆಯಾ???? ಇನ್ನೂ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ

Leave a Reply

Your email address will not be published. Required fields are marked *