w
Headlines
Home » ಪಾಲೀಶ್ ಮಾಡಿಕೊಡುವ ನೆಪದಲ್ಲಿ ಮಹಿಳೆಯ ಎರಡೂವರೆ ಲಕ್ಷ ಮೌಲ್ಯದ ಮಾಂಗಲ್ಯ ಸರ ಅಪಹರಣ :

ಪಾಲೀಶ್ ಮಾಡಿಕೊಡುವ ನೆಪದಲ್ಲಿ ಮಹಿಳೆಯ ಎರಡೂವರೆ ಲಕ್ಷ ಮೌಲ್ಯದ ಮಾಂಗಲ್ಯ ಸರ ಅಪಹರಣ :

ಒಂಟಿ ಮಹಿಳೆಯ ಮನೆಗೆ ಬಂದ ಇಬ್ಬರು ವ್ಯಕ್ತಿಗಳು ಆಭರಣಗಳನ್ನು ಪಾಲಿಶ್ ಮಾಡಿಕೊಡುವ ನೆಪದಲ್ಲಿ  ಮಹಿಳೆಯ ಮಾಂಗಲ್ಯ ಸರ  ಅಪಹರಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೋಟೆ ಕೊಪ್ಪ ಗ್ರಾಮದ ಸರೋಜಮ್ಮ ಅವರೇ ಮಾಂಗಲ್ಯ ಸರ ಕಳೆದುಕೊಂಡವರು.


ಪಾಲಿಶ್ ಮಾಡಿಕೊಡುವ ನೆಪದಲ್ಲಿ ಸರೋಜಮ್ಮ ಅವರ ಮನೆಗೆ ಬಂದ ಇಬ್ಬರು ವ್ಯಕ್ತಿಗಳು ಅವರ ಗಮನ ಬೇರೆಡೆ ಸೆಳೆದು ಕ್ಷಣ ಮಾತ್ರದಲ್ಲಿ ನಲವತ್ತು ಗ್ರಾಂ ತೂಕದ ಮಾಂಗಲ್ಯ ಸರವನ್ನು ಅಪಹರಿಸಿ ಪರಾರಿಯಾಗಿದ್ದಾರೆ.ಮೊದಲು ಬೆಳ್ಳಿಯ ಗೆಜ್ಜೆಯನ್ನು ಪಾಲಿಶ್ ಮಾಡಿಕೊಟ್ಟು ನಂಬಿಸಿದ್ದಾರೆ.ನಂತರ ಬಂಗಾರದ ಸರವನ್ನು ಪಾಲಿಶ್ ಮಾಡಲು ಕೇಳಿದಾಗ ಸರೋಜಮ್ಮ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ತೆಗೆದುಕೊಟ್ಟಿದ್ದಾರೆ.

ಸರೋಜಮ್ಮ ಅವರ ಮುಖಕ್ಕೆ ಮಂಕುಬೂದಿ ಎರಚಿದ ಇಬ್ವರು ಸುಮಾರು 2.ವರೆ ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಅಪಹರಿಸಿ ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾರೆ

ಸ್ಥಳಕ್ಕೆ ಸಾಗರ ಗ್ರಾಮಾಂತರ ಪೋಲೀಸರು ಧಾವಿಸಿ ಆರೋಪಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಒಟ್ಟಾರೆ ಗ್ರಾಮಾಂತರ ಭಾಗದಲ್ಲಿ ಇಂತಹ ಪ್ರಕರಣ ಪದೇ ಪದೇ ಹೆಚ್ಚುತ್ತಿದ್ದು,ಮಹಿಳೆಯರು ಜಾಗೃತರಾಗಬೇಕಿದೆ.

ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣವೇ ಪೋಲೀಸರಿಗೆ ಮಾಹಿತಿ ನೀಡಬೇಕಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.